ರಾಜ್ಯದಲ್ಲೇ ಒಂದೇ ದಿನ ಐವರಿಗೆ ಪಾಸಿಟಿವ್ , ಎಲ್ಲರೂ ಎರೆಡು ಡೋಸ್ ಲಸಿಕೆ ಪಡೆದವರೇ..!
ಬೆಂಗಳೂರು : ದಿನೇ ದಿನೇ ದೇಶದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗ್ತಲೇ ಇದೆ.. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡ ಇದೀಗ ಭಾರತದ ನಾನಾ ರಾಜ್ಯಗಳಲ್ಲಿ ಕಂಡುಬಂದಿದೆ..
ಈ ನಡುವೆ ಓಮಿಕ್ರಾನ್ ಕೇಸಸ್ ಸಂಖ್ಯೆ ಹೆಚ್ಚಾಗಿದ್ದು ರಾಜ್ಯಕ್ಕೆ ಆತಂಕ ಹೆಚ್ಚಿಸಿದೆ. ಕರ್ನಾಟಕದಲ್ಲಿ ಹೊಸ ತಳಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಗುರುವಾರ ಒಂದೇ ದಿನ ಐವರಲ್ಲಿ ಸೋಂಕು ದೃಢವಾಗಿದೆ. ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಮೂವರು ಪುರುಷರು, ಇಬ್ಬರು ಮಹಿಳೆಯರಲ್ಲಿ ಒಮಿಕ್ರಾನ್ ದೃಢವಾಗಿದೆ. ಈ ಮೂಲಕ ಓಮಿಕ್ರಾನ್ ಸೋಂಕು ರಾಜ್ಯದಲ್ಲಿ 8, ದೇಶದಲ್ಲಿ 87ಕ್ಕೆ ಏರಿಕೆಯಾಗಿದೆ.
ನೈಜೀರಿಯಾ, ದಕ್ಷಿಣ ಆಫ್ರಿಕಾ, ಯುಕೆ, ದೆಹಲಿಯಿಂದ ಬಂದ ಐವರಲ್ಲಿ ಸೋಂಕು ಕಂಡುಬಂದಿದೆ. ಇನ್ನೂ ಆತಂಕಕಾರಿ ಅಂದ್ರೆ ನೆಗೆಟಿವ್ ರಿಪೋರ್ಟ್ ಜೊತೆ ಬಂದವರಿಗೆ ಓಮಿಕ್ರಾನ್ ದೃಢವಾಗಿದೆ. ಬೆಂಗಳೂರು ಏರ್ಪೋರ್ಟ್ ಟೆಸ್ಟಿಂಗ್ನಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದ್ದು, ಬಳಿಕ ನಡೆಸಿದ ಜನೋಮಿಕ್ ಸೀಕ್ವೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿದೆ. ಅಷ್ಟೇ ಅಲ್ಲ ಈ ಐವರೂ ಸೋಂಕಿತರು ಡಬಲ್ ಡೋಸ್ ಲಸಿಕೆ ಪಡೆದಿರುವರೇ ಆಗಿದ್ದಾರೆ.
ಯುಕೆಯಿಂದ ಆಗಮಿಸಿದ್ದ 19 ವರ್ಷದ ಯುವತಿಗೆ ಇಂಗ್ಲೆಂಡ್ ಏರ್ಪೋರ್ಟ್ ಟೆಸ್ಟ್ ನಲ್ಲಿ ಯುವತಿ ರಿಪೋರ್ಟ್ ನೆಗೆಟಿವ್ ಬಂದಿದೆ. ಡಿಸೆಂಬರ್ 13ಕ್ಕೆ ಈಕೆ ಬೆಂಗಳೂರು ಏರ್ಪೋರ್ಟ್ ಗೆ ಆಗಮಿಸಿದಾಗ, ಬೆಂಗಳೂರು ಏರ್ಪೋರ್ಟ್ ಟೆಸ್ಟಿಂಗ್ನಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ. ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಡಿ.14ಕ್ಕೆ ಯುವತಿ ಮನವಿ ಮೇರೆಗೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿತ್ತು. ಸೋಂಕಿತ ಯುವತಿಗೆ ಪ್ರಾಥಮಿಕ ಸಂಪರ್ಕಿತರು ಇಲ್ಲ ಎನ್ನಲಾಗಿದೆ..
ನೈಜೀರಿಯಾದಿಂದ ಆಗಮಿಸಿದ್ದ 52 ವರ್ಷದ ವ್ಯಕ್ತಿ ಡಿ.13ಕ್ಕೆ ನೈಜೀರಿಯಾ ಏರ್ಪೋರ್ಟ್ ನಿಂದ ಪ್ರಯಾಣ ಬೆಳೆಸಿದ್ರು.. ನೈಜೀರಿಯಾ ಏರ್ಪೋರ್ಟ್ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿದೆ. ಡಿ.14ರಂದು ಬೆಂಗಳೂರು ಏರ್ಪೋರ್ಟ್ ನಲ್ಲಿ ಟೆಸ್ಟಿಂಗ್ ವೇಳೆ ಪಾಸಿಟಿವ್ ಇರುವುದು ದೃಢವಾಗಿದೆ. ಅಂದೇ ಬೆಂಗಳೂರಿನಿಂದ ಬೆಳಗಾವಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬಳಿಕ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇವರಿಗೆ ಇಬ್ಬರೊಂದಿಗೆ ಪ್ರಾಥಮಿಕ ಸಂಪರ್ಕವಿದ್ದು, ಆ ಇಬ್ಬರೂ ಕ್ವಾರಂಟೈನ್ ಆಗಿದ್ದಾರೆ.
ದೆಹಲಿಯಿಂದ ಆಗಮಿಸಿದ್ದ 70 ವರ್ಷದ ವೃದ್ಧೆಯುವ ಬೆಂಗಳೂರಿಗೆ ಬಂದಿದ್ದರು.. ರಾಜಸ್ಥಾನದಲ್ಲಿ ನಡೆದಿದ್ದ ದೆಹಲಿ ಮೂಲದವರ ಮದುವೆ ಹಿನ್ನೆಲೆಯಲ್ಲಿ ಡಿ.3ರಂದು ದೆಹಲಿಯಿಂದ ವೃದ್ಧೆ ಪ್ರಯಾಣ ಬೆಳೆಸಿದ್ದರು. ದೆಹಲಿಯಲ್ಲಿ ಓಮಿಕ್ರಾನ್ ಸೋಂಕಿತನ ಸಂಪರ್ಕದಲ್ಲಿದ್ದರಿಂದ ಡಿ.5ರಂದು ವೃದ್ಧೆಯ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು.
ಡಿ.6ರಂದು ವೃದ್ಧೆಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಜಿನೋಮಿಕ್ ಸೀಕೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿತ್ತು. ಮೂವರು ಪ್ರಾಥರ್ಮಿಕ ಸಂಪರ್ಕಿತರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ. ಇಬ್ಬರು ದ್ವಿತೀಯ ಸಂಪರ್ಕಿತರು.
ದೆಹಲಿಯಿಂದ ಆಗಮಿಸಿದ್ದ 36 ವರ್ಷದ ವ್ಯಕ್ತಿಯೂ ರಾಜಸ್ಥಾನದಲ್ಲಿ ನಡೆದಿದ್ದ ಮದುವೆಗೆಂದು ಪ್ರಯಾಣ ಬೆಳೆಸಿದ್ದರು.. ಡಿ.3ರಂದು ದೆಹಲಿಯಿಂದ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಲ್ಲಿ ಓಮಿಕ್ರಾನ್ ಸೋಂಕಿತನ ಸಂಪರ್ಕವಿದ್ದರಿಂದ ಡಿ.5ರಂದು ವ್ಯಕ್ತಿಯ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಡಿ.6ರಂದು ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಬಳಿಕದ ಜಿನೋಮಿಕ್ ಸೀಕೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿತ್ತು. ಈ ವ್ಯಕ್ತಿಗೆ ಮೂವರು ಪ್ರಾಥರ್ಮಿಕ ಸಂಪರ್ಕಿತರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ. ಇಬ್ಬರು ದ್ವಿತೀಯ ಸಂಪರ್ಕಿತರಾಗಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ 33 ವರ್ಷ ವ್ಯಕ್ತಿಯು ಡಿಸೆಂಬರ್ 8ರಂದು ದಕ್ಷಿಣ ಆಫ್ರಿಕಾದಿಂದ ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ. ದೆಹಲಿ ಏರ್ಪೋರ್ಟ್ ಟೆಸ್ಟ್ ನಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ಆದರೂ ಡಿ.9ರಂದು ಹೋಂ ಐಸೋಲೇಷನ್ ಆಗಿದ್ದರು. ಡಿ.10ರಂದು ಕೊರೊನಾ ಲಕ್ಷಣಗಳು ಪತ್ತೆಯಾಗಿತ್ತು. ಹೀಗಾಗಿ ಡಿ.10ರಂದು ಖುದ್ದು ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದರು. ಡಿ.11ರಂದು ಕೊರೊನಾ ಪಾಸಿಟಿವ್ ದೃಢವಾಗಿ ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ನಡೆಸಿದ ಜಿನೋಮಿಕ್ ಸೀಕೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ಇರುವುದು ದೃಢವಾಗಿತ್ತು. ನಾಲ್ವರು ಪ್ರಾಥಮಿಕ ಸಂಪರ್ಕಿತರಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು, 25 ದ್ವಿತೀಯ ಸಂಪರ್ಕಿತರಿಗೂ ನೆಗೆಟಿವ್ ಬಂದಿದೆ.