ಫೆಬ್ರವರಿ ಅಷ್ಟ್ರಲ್ಲಿ ಪೀಕ್ ಗೆ ತಲುಪುತ್ತೆ ಕೋವಿಡ್ 3 ನೇ ಅಲೆ : ಅಧ್ಯಯನ
ಇಡೀ ವಿಶ್ವಾದ್ಯಂತ ಕೊರೊನಾ ರೂಪಾಂತರ ತಳಿ ಆತಂಕ ಸೃಷ್ಟಿ ಮಾಡಿದ್ದು, ಈಗಾಗಲೇ ಹಲವೆಡೆ ಟ್ಟು ನಿಟ್ಟಿನ ಕ್ರಮಗಳ ಜೊತೆಗೆ , ಕರ್ಫ್ಯೂ ,ಲಾಕ್ ಡೌನ್ ಜಾರಿಗೊಳಿಸುವುದರ ಜೊತೆಗೆ ಲಸಿಕೆ ಅಭಿಯಾನವೂ ವೇಗ ಪಡೆದುಕೊಂಡಿದೆ..
ಆದ್ರೆ ಮತ್ತಷ್ಟು ಆತಂಕಕಾರಿ ಸಂಗತಿ ಎಂದ್ರೆ ಕಾನ್ಪುರ ಐಐಟಿ ಸಂಶೋಧಕರು ತಿಳಿಸಿರುವಂತೆ ಕೋವಿಡ್ 3 ನೇ ಅಲೆಯು ಫೆಬ್ರವರಿ ವೇಳೆಗೆ ಸರ್ವಕಾಲೀನ ಉತ್ತುಂಗಕ್ಕೇರಲಿದೆ ಎನ್ನಲಾಗ್ತರಿದೆ..
ಸಂಖ್ಯಾಶಾಸ್ತ್ರೀಯ ವಿಧಾನವನ್ನು ಬಳಸಿಕೊಂಡು ಸಂಶೋಧಕರು ಮೂರನೇ ಅಲೆಗೆ ಸಂಬಂಧಿಸಿದ ಲೆಕ್ಕಾಚಾರ ಹಾಕಿದ್ದಾರೆ. ದೇಶದಲ್ಲಿ ಕೋವಿಡ್ನ ಮೊದಲ ಮತ್ತು ಎರಡನೇ ಅಲೆಗೆ ಸಂಬಂಧಿಸಿದ ದತ್ತಾಂಶಗಳು, ವಿವಿಧ ದೇಶಗಳಲ್ಲಿ ಓಮೈಕ್ರಾನ್ ಪ್ರಸರಣಕ್ಕೆ ಸಂಬಂಧಿಸಿದ ದತ್ತಾಂಶಗಳನ್ನೂ ಸಂಶೋಧನೆಗೆ ಬಳಸಿಕೊಳ್ಳಲಾಗಿದೆ.
ಈ ಕುರಿತು ಆರೋಗ್ಯ ವಿಜ್ಞಾನಗಳಿಗೆ ಸಂಬಂಧಿಸಿದ ಆನ್ಲೈನ್ ತಾಣ ಮೆಡ್ಆರ್ಎಕ್ಸ್ಐವಿಯಲ್ಲಿ ವರದಿ ಪ್ರಕಟಿಸಲಾಗಿದೆ..
ಜಗತ್ತಿನ ಬೆಳವಣಿಗೆಗಳನ್ನು ಗಮನಿಸಿ ಭಾರತದಲ್ಲಿ ಮೂರನೇ ಅಲೆಯ ಕುರಿತು ಅಂದಾಜಿಸಲಾಗಿದೆ. ಭಾರತದಲ್ಲಿ ಕೋವಿಡ್ ಮೂರನೇ ಅಲೆ ಡಿಸೆಂಬರ್ ಮಧ್ಯ ಭಾಗದಲ್ಲೇ ಆರಂಭವಾದಂತಿದೆ. ಫೆಬ್ರುವರಿಯಲ್ಲಿ ಗರಿಷ್ಠಮಟ್ಟ ತಲುಪಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.