ಒಮಿಕ್ರಾನ್ ಕೊರೊನಾದ ಕೊನೆಯ ರೂಪಾಂತರಿ ಅಲ್ಲ – WHO
ಒಮಿಕ್ರಾನ್ ಕೊರೋನಾ ವೈರಸ್ನ ಮತ್ತೊಂದು ರೂಪಾಂತರಿ ಅಷ್ಟೆ ಇದೇ ಕೊನೆಯ ರೂಪಾಂತರಿಯಲ್ಲ. ಭವಿಷ್ಯದಲ್ಲಿ ಇಂಥಹ ಹಚ್ಚಿನ ರೂಪಾಂತರಿ ವೈರಸ್ಗಳು ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆಯು ಜನರು ಲಸಿಕೆಯನ್ನು ಪಡೆದುಕೊಳ್ಳಲು ಮತ್ತು ಮಾಸ್ಕ್ ಬಳಕೆ ಮುಂದುವರೆಸುವಂತೆ who ನ ತಾಂತ್ರಿಕ ಪ್ರಮುಖ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.
ಈ ವೈರಸ್ ಇನ್ನೂ ವಿಕಸನಗೊಳ್ಳುತ್ತಿದೆ, ಬದಲಾಗುತ್ತಿದೆ ಅದಕ್ಕೆ ತಕ್ಕಂತೆ ನಾವು ಸಹ ಬದಲಾಗಬೇಕು. ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವುದರ ಮೂಲಕ ಮಾತ್ರ ಪರಿವರ್ತನೆ ತರಲು ಸಾಧ್ಯ. ಓಮಿಕ್ರಾನ್ ಅಲೆಯಿಂದ ಕರೋನಾ ಕೊನೆಗೊಳ್ಳುವುದಿಲ್ಲ ಎಂದು ತಿಳಿಸಿದರು..
ಓಮಿಕ್ರಾನ್ ಕೊನೆಯ ರೂಪಾಂತರಿ ಇದರ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಎಂಬ ಊಹಾಪೋಗಳು ಗಾಳಿಸುದ್ದಿಗಳು ಹರಿದಾಡುತ್ತಿವೆ. ಆದರೆ ಓಮಿಕ್ರಾನ್ ಸೌಮ್ಯ ಲಕ್ಷಣ ಹೊಂದಿಲ್ಲ. ಇದು ಡೆಲ್ಟಾಕ್ಕಿಂತ ಕಡಿಮೆ ತೀವ್ರತೆಯನ್ನ ಹೊಂದಿದೆ ಎಂದು ತಿಳಿಸಿದ್ದಾರೆ.