ಕೊರೊನಾ ಎಂಬ ಅಂಧಕಾರದ ವಿರುದ್ದ ಹೋರಾಟ ನಡೆಸಲು ದೇಶದ ಒಗ್ಗಟ್ಟು ಪ್ರದರ್ಶನ ಮಾಡಬೇಕಿತ್ತು. ಹಾಗಾಗಿ ಪಿಎಂ ಮೋದಿ ಎಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ವಿದ್ಯುತ್ ಲೈಟ್ಗಳನ್ನು ಆಫ್ ಮಾಡಿ, ಮನೆಯ ಮುಂದೆ ಅಥಾವ ಬಾಲ್ಕನಿಯಲ್ಲಿ ನಿಂತು ದೀಪ, ಮೊಂಬತ್ತಿ, ಮೊಬೈಲ್ ಫ್ಲಾಶ್ ಅಥವಾ ಟಾರ್ಚ್ ಮೂಲಕ ಬೆಳಕು ಚೆಲ್ಲಿ ಎಂದು ದೇಶದ ಜನರಿಗೆ ಕರೆ ನೀಡಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆಗೆ ದೇಶದ ಉದ್ದಗಲಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದೇಶದ ಜನ ತಮ್ಮ ಮನೆಯ ಲೈಟ್ ಆಫ್ ಮಾಡಿ ದೀಪ ಬೆಳಗಿದ್ದಾರೆ. ಈ ಸಮಯದಲ್ಲಿ ವಿದ್ಯುತ್ ಪೂರೈಕೆಯ ಪ್ರಮಾಣ ಎಷ್ಟು ಕಡಿಮೆ ಆಗಿತ್ತು ಎಂಬ ಬಗ್ಗೆ ಇಂಧನ ಸಚಿವಾಲಯ ಮಾಹಿತಿ ನೀಡಿದೆ.
ಎಷ್ಟು ವಿದ್ಯುತ್ ಕಡಿಮೆ ಆಗಿತ್ತು ಎಂದು ಮಾಹಿತಿ ಪಡೆಯಲು ಇಂಧನ ಖಾತೆಯ ರಾಜ್ಯ ಸಚಿವ ಆರ್. ಕೆ. ಸಿಂಗ್ ರಾಷ್ಟ್ರೀಯ ಇಂಧನ ಉಸ್ತುವರಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೀಪ ಬೆಳಗಲು ನೀಡಿದ್ದ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. 117 ಗಿಗಾ ವ್ಯಾಟ್ ಇದ್ದ ವಿದ್ಯುತ್ ಬೇಡಿಕೆ ಆ ಸಮಯದಲ್ಲಿ ರಾಷ್ಟ್ರಾದ್ಯಂತ 85.3 ಗಿಗಾ ವ್ಯಾಟ್ಗೆ ಇಳಿದಿತ್ತು. ಅಂದರೆ ಸುಮಾರು 35 ಗಿಗಾ ವ್ಯಾಟ್ಗಳಷ್ಟು ಕಡಿಮೆಯಾಗಿತ್ತು ಎಂದಿದ್ದಾರೆ. ಆ 9 ನಿಮಿಷಗಳು ಮುಗಿದ ಬಳಿಕ ಮತ್ತೆ ವಿದ್ಯುತ್ ಪೂರೈಕೆ 110 ಗಿಗಾ ವ್ಯಾಟ್ಗೆ ಏರಿಕೆ ಆಯಿತು. ಈ ಸಂದರ್ಭವನ್ನು ಇಂಜಿನಿಯರ್ಗಳೂ ಸೂಕ್ತವಾಗಿ ನಿಭಾಯಿಸಿದ್ದಾರೆ ಎಂದು ಅಧಿಕಾರಗಳ ಕಾರ್ಯವನ್ನು ಮೆಚ್ಚಿದ್ದಾರೆ.








