4 ವರ್ಷದ ಬಾಲಕಿ ಮೇಲೆ ಮುಗಿಬಿದ್ದು ಕಚ್ಚಿದ ನಾಯಿಗಳು….

1 min read

4 ವರ್ಷದ ಬಾಲಕಿ ಮೇಲೆ ಮುಗಿಬಿದ್ದು ಕಚ್ಚಿದ ನಾಯಿಗಳು….

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಬೀದಿ ನಾಯಿಗಳು 4 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಕಚ್ಚಿರುವ  ಘಟನೆ ನಡೆದಿದೆ. ಬಾಗ್ಸೆವಾನಿಯಾ ಪ್ರದೇಶದಲ್ಲಿ ಬಾಲಕಿಯ ಮೇಲೆ 5 ಬೀದಿ ನಾಯಿಗಳು ದಾಳಿ ನಡೆಸಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಬಾಲಕಿಯ ತಲೆ, ಕಿವಿ ಮತ್ತು ಕೈಗಳನ್ನ ನಾಯಿಗಳು ಕಚ್ಚಿದ್ದು ಗಂಭೀರ ಗಾಯಗಳಾಗಿವೆ. ಮುಖದ ಜತೆಗೆ ಹೊಟ್ಟೆ, ಸೊಂಟ, ಭುಜದ ಮೇಲೆ ಗಾಯಗಳಾಗಿವೆ.

ಶನಿವಾರ ಸಂಜೆ 4.15ಕ್ಕೆ ಈ ಘಟನೆ ನಡೆದಿದೆ. ಬಾಲಕಿಯ ತಂದೆ ರಾಜೇಶ್ ಬನ್ಸಾಲ್ ಕ್ಯಾಂಪಸ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಅವರ ಮೂರು ವರ್ಷದ ಮಗಳು ಗುಡ್ಡಿ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಹಿಂಡು ಹಿಂಡಾಗಿ ಬಂದ ನಾಯಿಗಳು ಆಕೆಯ ಮೇಲೆ ದಾಳಿ ನಡೆಸಿವೆ.

ಅವಳು ಓಡಿ ಹೊಗಿ ನಾಯಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಾಯಿಗಳು ಅವಳನ್ನು ಸುತ್ತುವರೆದು ಕಚ್ಚಲು ಪ್ರಾರಂಭಿಸಿವೆ.  ಹುಡುಗಿ ಜೋರಾಗಿ ಕಿರುಚಿಕೊಂಡಾಗ ಯುವಕನೊಬ್ಬ ನೋಡಿ ಕಲ್ಲು ಎಸೆದು ನಾಯಿಗಳನ್ನು ಓಡಿಸಿದ್ದಾನೆ. ರಕ್ತಸ್ರಾವವಾಗಿದ್ದ ಗುಡ್ಡಿ ಎಂಬ ಬಾಲಕಿಯನ್ನ ನಗರದ ಜೆಪಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಲ್ಲಿಂದ ಅವರನ್ನು ಹಮೀದಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಬಾಲಕಿ ಮನೆಗೆ ಮರಳಿದ್ದು ವಿಶ್ರಾಂತಿ ಪಡೆಯುತ್ತಿದ್ದಾಳೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd