ಇಂದು ಓನಕೆ ಓಬವ್ವ ಜಯಂತಿ. ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ…

1 min read

 

ಇಂದು ಓನಕೆ ಓಬವ್ವ ಜಯಂತಿ. ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ನವೆಂಬರ್ 11 (ಇಂದು ) ರಂದು ವೀರ ವನಿತೆ ಒನಕೆ ಒಬವ್ವನ ಜಯಂತಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಷಯಗಳನ್ನ ತಿಳಿಸಿದ್ದಾರೆ.

ಒನಕೆ ಓಬವ್ವ ಎನ್ನುವ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. 18 ನೇ ಶತಮಾನದಲ್ಲಿ ಚಿತ್ರದುರ್ಗ ಕೋಟೆಯ ಪಾಳೆಗಾರನಾಗಿದ್ದ ಮದಕರಿನಾಯಕರ ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಂತಪ್ಪನ ಹೆಂಡತಿ ಒನಕೆ ಓಬವ್ವ.

ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ಕಳ್ಳದಾರಿಯ ಮೂಲಕ ಒಳನುಸುಳುತ್ತಿರುವುದನ್ನ ನೋಡಿದಳು. ದೃತಿಗೆಡದೆ ಓಬವ್ವ ಮನೆಯಲ್ಲಿದ್ದ ಒನಕೆಯನ್ನ ಅಸ್ತ್ರವನ್ನಾಗಿ ಮಾಡಿಕೊಂಡು ಕೋಟೆಯ ಕಳ್ಳ ಗಿಂಡಿಯಿಂದ ಬಂದ ನೂರಾರು ಶತ್ರುಗಳನ್ನ ಏಕಾಂಗಿಯಾಗಿ ಸದೆಬಡೆದು ಕೋಟೆಯ ಕಾವಲಿಗೆ ನಿಲ್ಲುತ್ತಾಳೆ. ಇದೇ ವೇಳೆಯಲ್ಲಿ ಹೈದರಾಲಿಯ ಸೈನಿಕನೊಬ್ಬ ಬೆನ್ನ ಹಿಂದಿನಿಂದ ಬಂದು ಕತ್ತಿ ಬೀಸಿದ್ದನ್ನ ಗಮನಿಸದೆ ಓಬವ್ವ ವೀರ ಮರಣವನ್ನ ಹೊಂದುತ್ತಾಳೆ. ಅಂದಿನಿಂದ ಚಿತ್ರದುರ್ಗ ಮತ್ತು ಕರ್ನಾಟಕದ ಜನತೆಯಲ್ಲಿ ವೀರ ವನಿತೆ ಒನಕೆ ಓಬವ್ವ ಎಂದು ಚಿರಸ್ಥಾಯಿಯಾಗಿದ್ದಾಳೆ. ಕೋಟ್ಯಾಂತರ ಮಹಿಳೆಯರಿಗೆ ಧೈರ್ಯ ನೀಡುವ ಚೇತನವಾಗಿದ್ದಾಳೆ.  ಅಂದಿನಿಂದ ಶತ್ರು ಸೈನಿಕರು ನುಸುಳಿಬಂದ ಕಿಂಡಿಯನ್ನ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತದೆ.

ಕನ್ನಡ ಸಂಸ್ಕೃತಿ ಇಲಾಖೆಯಿಂದ ಇಂದು ಜಯಂತಿ ಆಚರಿಸಲು ನಿರ್ಧಾರವಾಗಿತ್ತು . ಆದರೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ನವೆಂಬರ್ 11 ರಂದು (ಇಂದು) ಸರ್ಕಾರ ಓಬವ್ವ ಜಯಂತಿ ಆಚರಣೆಯನ್ನು ಮುಂದೂಡಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd