UP + YOGI = UPAYOGI ಎಂದು ಹೊಗಳಿದ ಮೋದಿ….
ಶನಿವಾರ (ಡಿಸೆಂಬರ್ 18), ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಯೂಪಿ + ಯೋಗಿ = ಉಪಯೋಗಿ ಎಂದು ಶ್ಲಾಘಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಯೋಗಿ ಅತ್ಯಗತ್ಯ ಎಂದು ಘೋಷಿಸಿದರು. ಉತ್ತರ ಪ್ರದೇಶದ ಷಹಜಹಾನ್‌ಪುರದಲ್ಲಿ 594 ಕಿಲೋಮೀಟರ್‌ಗಳ ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಹೇಳಿದರು.
“ ಮಾಫಿಯಾ ಗ್ಯಾಂಗ್‌ಗಳು ಮತ್ತು ಅಕ್ರಮ ಅತಿಕ್ರಮಣಕಾರರ ಮೇಲೆ ಬುಲ್ಡೋಜರ್ ಓಡಿಸಿದರೆ ಅಂತಹ ಜನರನ್ನು ದೇಶಪ್ರೇಮಿ ಎಂದು ಬಿಂಬಿಸುವ ರಾಜಕಾರಣಿಗಳು ನೋವು ಅನುಭವಿಸುತ್ತಿದ್ದಾರೆ. ಅದಕ್ಕಾಗಿಯೇ ಸಾರ್ವಜನಿಕರು ಈಗ ಯುಪಿ + ಯೋಗಿ, ಬಹುತ್ ಹೈ ಉಪಯೋಗಿ ಎಂದು ಹೇಳುತ್ತಿದ್ದಾರೆ, ”ಎಂದು ಪಿಎಂ ಮೋದಿ ಹೇಳಿದರು. ಆಧುನಿಕ ಮೂಲಸೌಕರ್ಯ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಅವರು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಇತರ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸಾಧನೆಗಳನ್ನ ಜನರೆದುರು ಪಟ್ಟಿ ಮಾಡಿದರು. ಯುಪಿಯಲ್ಲಿ ಎರಡನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಭಾರತೀಯ ಜನತಾ ಪಕ್ಷವು (ಬಿಜೆಪಿ), ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆದಿತ್ಯನಾಥ್ ಅವರನ್ನು ತನ್ನ ಮುಖವೆಂದು ಬಿಜೆಪಿ ಘೋಷಿಸಿದೆ.








