ಓಣಂ ಹಬ್ಬದ ಹಿನ್ನೆಲೆಯಲ್ಲಿ ಕಣ್ಣೂರಿನ ಲೋಕನಾಥ್ ಕೋ- ಆಪ್ ವೀವಿಂಗ್ ಸೊಸೈಟಿ ಕೈಮಗ್ಗದ ಕುರ್ತಾ ಬಟ್ಟೆ ಸಿದ್ಧಪಡಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಮುಂದಾಗಿದೆ.
ಒಂದು ವಾರದವರೆಗೆ ನೇಯ್ಗೆ ಬಳಗದಿಂದ ನೇಯ್ದು ಪ್ರಧಾನಿ ಮತ್ತು ಇತರ ಗಣ್ಯರಿಗೆ ನೀಡಲು ಸಿದ್ಧಪಡಿಸಲಾಗಿದೆ. ಅಂಜು ಜೋಸ್ ಈ ಕುರ್ತಾದ ವಿನ್ಯಾಸಕರಾಗಿದ್ದಾರೆ. ಇವರು ಪ್ರಧಾನಿಗೆ ಈ ಕುರ್ತಾ ಹೊಲಿಯಲು ಬಟ್ಟೆಯ ಬಣ್ಣಗಳು ಮತ್ತು ಮಾದರಿಯನ್ನು ವಿನ್ಯಾಸಗೊಳಿಸಿದ್ದಾರೆ. ಈ ಬಟ್ಟೆ ತೆಳು ಹಸಿರು, ಬಿಳಿ, ಗುಲಾಬಿ ಮತ್ತು ಶ್ರೀಗಂಧದ ಬಣ್ಣಗಳ ಜತೆಗೆ ರೇಖೆ ಹೊಂದಿದೆ. ಕೇವಲ ಮೂರು ಮೀಟರ್ ಬಟ್ಟೆಯಿಂದ ಅತ್ಯಂತ ನಾಜೂಕಾಗಿ ಈ ಕುರ್ತಾ ತಯಾರಿಸಲಾಗಿದೆ.
ಕೇರಳ ಸರ್ಕಾರ ಓಣಂ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರು ಓಣಂ ದಿನವದ ಅ.29 ರಂದು ಅಧಿಕೃತವಾಗಿ ನೀಡಲಿದೆ.