ಹಾಸನ: ಕೋಡಿಮಠದ ಶ್ರೀ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಮಳೆಯಿಂದಾಗಿ ಇನ್ನೂ ತೊಂದರೆ ಆಗಲಿದೆ. ಪ್ರಾಕೃತಿಕ ದೋಷ ಇದೆ. ಭೂಮಿ, ಅಗ್ನಿ, ವಾಯು, ಆಕಾಶ ಎಲ್ಲ ಕಡೆ ತೊಂದರೆ ಆಗುತ್ತದೆ. ಐದು ಕಡೆಯೂ ತೊಂದರೆ ಇದೆ. ಆಕಾಶದಿಂದ ಕೂಡ ದೊಡ್ಡ ಗಂಡಾಂತರ ಇದೆ ಎಂದು ಹೇಳಿದ್ದಾರೆ.
ಜನ ಇದ್ದಂಗೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತದೆ ಎಂದಿದ್ದೆ. ಗುಡ್ಡ ಹೋಗುತ್ತದೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಅನೇಕ ಪ್ರದೇಶಗಳು ಮುಳುಗುತ್ತವೆ ಎಂದು ಹೇಳಿದ್ದೆ. ಅದರಂತೆ ಮಳೆಯಿಂದಾಗಿ ಇನ್ನೂ ಅನಾಹುತಗಳು ನಡೆಯುತ್ತವೆ ಎಂದಿದ್ದಾರೆ.
ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್ ಮಾಡಿಸಿದರು. ಮಹಾಭಾರತದಲ್ಲಿ ಕೃಷ್ಣ ಇದ್ದ. ಗದಾಯುದ್ಧದಲ್ಲಿ ಭೀಮ ಗೆದ್ದ. ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಅಂತ ಹೇಳಿದ್ದೆ ಎಂದು ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ಕೂಡ ಕೋಡಿ ಶ್ರೀಗಳು ಪ್ರಕೃತಿ ಮತ್ತು ಸರ್ಕಾರಗಳಿಗೆ ಸಂಬಂಧಿಸಿ ಭವಿಷ್ಯ ನುಡಿದಿದ್ದರು.