ಹೆಣ್ಮಕ್ಳ ಕಥೆ ಅಂತೇಳಿ ಹೀಗಾ ಮಾಡೋದು..! ಹೇಗಿದೆ ಗೊತ್ತಾ ಒಂದು ಗಂಟೆಯ ಕಥೆ..?
ಟೈಟಲ್ : ಒಂದು ಗಂಟೆಯ ಕಥೆ
ಜಾನರ್ : ಕಾಮಿಡಿ
ನಿರ್ದೇಶಕ : ದ್ವಾರ್ಕಿ ರಾಘವ್
ತಾರಾಗಣ : ಅಜಯ್ ರಾಜ್, ಶನಾಯ ಕಾಟ್ವೆ, ಸ್ವಾತಿ ಶರ್ಮ, ಪ್ರಕಾಶ್ ತುಮ್ಮಿನಾಡ್, ಯಶ್ವಂತ್ ಸರ್ ದೇಶಪಾಂಡೆ ಮುಂತಾದವರು..
ನಿರ್ಮಾಣ : ಕಶ್ಯಪ್ ದಾಕೋಜು
ಸಂಗೀತ : ಡೆನಿಸ್ ವಲ್ಲಭನ್
ಸಿನಿಮಾಟೋಗ್ರಾಫಿ : ಸೂರ್ಯಕಾಂತ್
ಸಂಕನಲ : ಗಣೇಶ್ ಮಲ್ಲಯ್ಯ
ಕೇವಲ ಟೈಟಲ್ ನಿಂದಲೇ ಸಿನಿಪ್ರಿಯರ ಗಮನ ಸೆಳೆದಿದ್ದ ಸಿನಿಮಾ ಒಂದು ಗಂಟೆಯ ಕಥೆ..! ಟೈಟಲ್ ನೋಡಿದ, ಕೇಳಿದ ತಕ್ಷಣ ಒಂದು ಗಂಟೆಯ ಕಥೆ ಅಂದ್ರೆ ಒಂದು ಗಂಟೆಯಲ್ಲಿ ನಡೆಯುವ ಕಥೆನಾ..? ಅಥವಾ ಗಂಟೆ ಅಂದ್ರೆ `ಬೆಲ್’ ಸುತ್ತ ಸುತ್ತುವ ಕಥೆನಾ..? ಅನ್ನೋ ಪ್ರಶ್ನೆಗಳನ್ನ ಹುಟ್ಟುವುದು ಸಾಮಾನ್ಯ. ಇದರ ಜೊತೆಗೆ ಇದು ಫುಲ್ ಅಂಡ್ ಫುಲ್ ಹೆಣ್ಮಕ್ಳ ಕಥೆ… ಬಟ್ ಹುಡುಗ್ರು ನೋಡಬಹುದು ಗುರು ಎಂಬ ಟ್ಯಾಗ್ ಲೈನ್ ಎಲ್ಲರ ತಲೆಗೆ ಹುಳ ಬಿಟ್ಟು ಕುತೂಹಲವನ್ನ ಹೆಚ್ಚಿಸಿತ್ತು. ಇನ್ನ ಈ ಸಿನಿಮಾ ಟ್ರೈಲರ್, ಇದೊಂದು ಪಕ್ಕಾ ಔಟ್ ಅಂಡ್ ಔಟ್ ಕಾಮಿಡಿ ಜಾನರ್ ಸಿನಿಮಾ ಅಂತ ಸಾರಿ ಹೇಳಿತ್ತು. ಇದೀಗ ಸಿನಿಮಾ ಥಿಯೇಟರ್ ಅಂಗಳಕ್ಕೆ ಬಂದಿದ್ದು, ಒಂದು ಗಂಟೆಯ ಕಥೆ ಸಿನಿಮಾ ಪ್ರೇಕ್ಷಕರ ಮನ ಗೆಲ್ತಾ..? ಅಸಲಿಗೆ ಆ ಗಂಟೆ ಏನು..? ಯಾರದ್ದು..? ಯಾಕೆ..? ಅನ್ನೋದನ್ನ ನಮ್ಮ ಸಮೀಕ್ಷೆಯಲ್ಲಿ ನೋಡೋಣ.
ಕಥೆ
ಅಜಯ್ ( ಅಜಯ್ ರಾಜ್) ಪ್ಲೇಬಾಯ್ ಅಟಿಟ್ಯೂಡ್ ಹುಡುಗ . ಈಗಾಗಲೇ ಪ್ರೇಯಸಿ ಇದ್ದರೂ ಬೇರೊಬ್ಬರ ಜೊತೆ ಮದ್ವೆಗೆ ರೆಡಿ ಆಗಿರ್ತಾನೆ. ಈ ವಿಚಾರ ತಿಳಿದ ಅನಾಥೆ ಸರೋಜಾ (ಶನಾಯ ಕಾಟ್ವೆ) ಈ ಬಗ್ಗೆ ಪ್ರಶ್ನೆ ಮಾಡ್ತಾಳೆ. ಆಗ ಅಜಯ್ ನಾವಿಬ್ರು ಮದ್ವೆ ಆಗೋದು ಬೇಡ, ಅದು ಅಸಾಧ್ಯ. ನಾನು ಬೇರೆ ಮದ್ವೆ ಆದ್ರೂ ಜೊತೇಲಿ ಲೈಫ್ ಲಾಂಗ್ ಇರೋಣ ಅಂತಾ ಹೇಳ್ತಾನೆ. ಇದಕ್ಕೆ ಸರೋಜಾ ಓಕೆ ಅಂತಾ ಹೇಳಿ ಎಂದಿನಂತೆ ರೆಸಾರ್ಟ್‍ಗೆ ಹೋಗ್ತಾರೆ. ಅಲ್ಲಿ ಅವರಿಬ್ಬರ ಮಿಲನವಾಗುತ್ತೆ. ಕಟ್ ಮಾಡಿದ್ರೆ… ಅಜಯ್ ತನ್ನ ಅಂಗವನ್ನ ಕಳೆದುಕೊಂಡಿರ್ತಾನೆ. ಇತ್ತ ಸರೋಜಾ ಪರಾರಿ ಆರ್ಗಿತಾಳೆ. ಇದರಿಂದ ಗಾಬರಿಗೊಂಡ ಅಜಯ್ ಆಸ್ಪತ್ರೆಗೆ ಹೋದ್ರೆ ಅಲ್ಲಿ ಮೂರು ಗಂಟೇಲಿ ಆಪರೇಷನ್ ಮಾಡಬೇಕು ಅಂತ ಹೇಳ್ತಾರೆ. ಆಗ ತನ್ನ ಅಂಗವನ್ನ ಸರೋಜಾ ಕಟ್ ಮಾಡಿರೋದು ಅಜಯ್ ಗೆ ಗೊತ್ತಾಗುತ್ತೆ. ಇದು ಮಾಧ್ಯಮಗಳಲ್ಲಿ ಹಾಟ್ ನ್ಯೂಸ್ ಆಗುತ್ತೆ. ಅಜಯ್ ಮಾಧ್ಯಮಗಳಲ್ಲಿ ಸರೋಜಾಗಾಗಿ ಮನವಿ ಮಾಡ್ತಾನೆ..
ಹಾಗಾದ್ರೆ ಅಜಯ್ ಅಂಗವನ್ನ ಕಟ್ ಮಾಡಿದ್ದು ಯಾಕೆ..? ಸರೋಜಾ ಮತ್ತೆ ವಾಪಸ್ ಬರ್ತಾಳಾ..? ಅನ್ನೋದು ಸಿನಿಮಾದ ಕಥೆ.
ನಟಿನಟರು
ಏಕಾಏಕಿ ಅಂಗವನ್ನ ಕಳೆದುಕೊಳ್ಳುವ ಹುಡುಗನ ಪಾತ್ರದಲ್ಲಿ ಅಜಯ್ ಪರಕಾಯ ಪ್ರವೇಶ ಮಾಡಿದ್ದಾರೆ. ರೋಮ್ಯಾನ್ಸ್, ಹೀರೋಯಿಸಂ, ಕಾಮಿಡಿ, ವಿಲನ್ ಎಲ್ಲಾ ಶೇಡ್ ಗಳಲ್ಲೂ ಅಜಯ್ ಅಭಿನಯ ಅದ್ಭುತವಾಗಿದೆ. ಸಿನಿಮಾದ ಆರಂಭದಿಂದ ಅಂತ್ಯದವರೆಗೆ ಅಜಯ್ ಎಲ್ಲರ ಗಮನ ಸೆಳೆಯುತ್ತಾರೆ. ನಂಬಿಸಿ ಮೋಸ ಮಾಡುವ ಹುಡುಗನಿಗೆ ತಕ್ಕಪಾಠ ಕಲಿಸುವ ಗಟ್ಟಿಗಿತ್ತಿ ಸರೋಜಾ ಪಾತ್ರದಲ್ಲಿ ಶನಾಯ ಕಾಟ್ವೆ ಶಹಬಾಷ್ ಎಂಬಂತೆ ನಟಿಸಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ಅವರ ಅಭಿನಯ ನೋಡುಗರ ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡುತ್ತೆ. ಇನ್ನುಳಿದಂತೆ ಸ್ವಾತಿ ಶರ್ಮ, ಪ್ರಕಾಶ್ ತುಮ್ಮಿನಾಡ್, ಯಶವಂತ ಸರ್ ದೇಶಪಾಂಡೆ, ಚಿದಾನಂದ್, ಪ್ರಶಾಂತ್ ಸಿದ್ದಿ, ಸಿಲ್ಲಿಲಲ್ಲಿ ಆನಂದ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ವಿಶ್ಲೇಷಣೆ
ಸಮಾಜದಲ್ಲಿ ಹೆಣ್ಣನ್ನ ಕೇವಲ ಒಂದು ವಸ್ತುವಾಗಿ ನೋಡಲಾಗ್ತಿದೆ. ಹೆಣ್ಣಿನ ಮೇಲೆ ಆಗುತ್ತಿರುವ ಅತ್ಯಾಚಾರಗಳು, ದೌರ್ಜನ್ಯಗಳು, ಅನ್ಯಾಯಕ್ಕೆ ಈ ಸಿನಿಮಾದಲ್ಲಿ ಸರಿಯಾದ ಉತ್ತರವಿದೆ. ಹೆಣ್ಣನ್ನ ಕೇಲವ ಒಂದು ವಸ್ತುವಾಗಿ ನೋಡುವ, ಬಳಸಿಕೊಳ್ಳುವ ವ್ಯಕ್ತಿಗಳಿಗೆ ಯಾವ ರೀತಿ ಶಿಕ್ಷೆ ನೀಡಬೇಕು ಅನ್ನೋದು ಸಿನಿಮಾದಲ್ಲಿ ತೋರಿಸಲಾಗಿದೆ. ಒಂದು ಸಿರಿಯಸ್ ಕಥೆಯನ್ನ ನಿರ್ದೇಶಕ ಹಾಸ್ಯಮಯವಾಗಿ ತೋರಿಸಿದ್ದಾರೆ. ಹೀಗಾಗಿ ಡೈಲಾಗ್ ಗಳು ಡಬಲ್ ಮೀನಿಂಗ್ ನಲ್ಲೇ ಇರುತ್ವೆ. ವಿಷ್ಯ ಸೊಂಟದ ಕೆಳಗಿರುವ ಅಂಗಕ್ಕೆ ಸಂಬಂಧಪಟ್ಟಿರುವ ಕಾರಣ ಡೈಲಾಗ್ ಗಳು ಅದೇ ರೇಂಜ್ ನಲ್ಲಿರುತ್ವೆ. ಇದು ಕಚಗುಳಿಯ ಜೊತೆ ಜೊತೆಗೆ ಕಿರಿಕಿರಿಯನ್ನೂ ಕೂಡ ಉಂಟು ಮಾಡುತ್ತೆ. ಮೊದಲಾರ್ಧದಲ್ಲಿ ಸಿನಿಮಾವನ್ನ ಚೆನ್ನಾಗಿ ಎಂಜಾಯ್ ಮಾಡಬಹುದು. ಆದ್ರೆ ದ್ವಿತೀಯಾರ್ಧದಲ್ಲಿ ಸಿನಿಮಾ ಡಲ್ ಹೊಡೆಯುತ್ತೆ. ಲ್ಯಾಗ್ ಸ್ಕ್ರೀನ್ ಪ್ಲೇ ಬೋರ್ ಎನಿಸುತ್ತೆ. ನಿರ್ದೇಶಕರು ಕಾಮಿಡಿಗೆ ಹೆಚ್ಚು ಇಂರ್ಪಾಟೆನ್ಸ್ ಕೊಟ್ಟು, ಕಥೆಯನ್ನ ಸೈಡ್ ಲೇನ್ ಮಾಡಿದಂತೆ ಅನಿಸುತ್ತೆ. ನಿರ್ದೇಶಕರು ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕಿತ್ತು. ಸಿನಿಮಾ ಕಥೆಯಲ್ಲಿ ಧಮ್ ಇದ್ದರೂ ಸ್ಕ್ರೀನ್ ಪ್ಲೇಯಲ್ಲಿ ಶಕ್ತಿ ಇಲ್ಲ.
ಪ್ಲಸ್ ಪಾಯಿಂಟ್ಸ್
ಕಥೆ
ತಾರಾಗಣ
ಮೊದಲಾರ್ಧ
ಕಾಮಿಡಿ
ಕ್ಲೈಮ್ಯಾಕ್ಸ್
ಮೈನಸ್ ಪಾಯಿಂಟ್ಸ್
ಸ್ಕ್ರೀನ್ ಪ್ಲೇ
ಬೇಡವಾದ ದೃಶ್ಯಗಳು
ಒಂದಿಷ್ಟು ಸೆಕೆಂಡ್ ಆಫ್
ಸಂಗೀತ
ರೇಟಿಂಗ್
3.0/5










