ADVERTISEMENT
Thursday, June 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಒಂದು ಕ್ಲಿಕ್ – ಕಾರು ನಿಮ್ಮ ‌ಮನೆ ಬಾಗಿಲಿಗೆ…

admin by admin
May 20, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು, ಮೇ 20 : ಕೊರೊನಾ ಸೋಂಕಿನ ಭೀತಿಯಿಂದ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಎಲ್ಲಾ ಕಾರು ತಯಾರಿಕಾ ಕಂಪೆನಿಗಳು ಮುಚ್ಚಿದ್ದವು. ಇದೀಗ ಸುಮಾರು ಮೂರು ತಿಂಗಳ ನಂತರ ನಿಧಾನವಾಗಿ ತಮ್ಮ ಶೋರೂಂ ತೆರೆಯುತ್ತಿವೆ. ಲಾಕ್ ಡೌನ್ ಸಡಿಲಿಕೆಯಾಗಿದ್ದರೂ ಕೊರೊನಾ ಪ್ರಕರಣಗಳು ಕಡಿಮೆಯಾಗಿರದ ಹಿನ್ನೆಲೆಯಲ್ಲಿ ಜನರು ‌ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದಾರೆ. ಲಾಕ್ ಡೌನ್ ಕಾರಣದಿಂದ ಈಗಾಗಲೇ ಸಾಕಷ್ಟು ನಷ್ಟ ಹೊಂದಿರುವ ‌ಕಾರು ತಯಾರಿಕ‌ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಕಾರನ್ನು ಕೊಳ್ಳ ಬಯಸುವ ಗ್ರಾಹಕರಿಗೆ ಮನೆಯಲ್ಲಿಯೇ ಕುಳಿತು ಎಲ್ಲಾ ಖರೀದಿ ಪ್ರಕ್ರಿಯೆಗಳನ್ನು ನಡೆಸುವ ಆನ್ ಲೈನ್ ಖರೀದಿ ಸೌಲಭ್ಯ ವ್ಯವಸ್ಥೆಯನ್ನು ಪರಿಚಯಿಸಿದೆ.

ಹೌದು, ಪ್ರತಿಷ್ಠಿತ ಕಾರು ತಯಾರಿಕಾ ‌ಕಂಪೆನಿಗಳಾದ ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಜ್, ಟೊಯೋಟ ಕಿರ್ಲೋಸ್ಕರ್, ಹೋಂಡಾ, ಹುಂಡೈ, ಮಹೀಂದ್ರಾ ಆ್ಯಂಡ್ ಮಹಿಂದ್ರಾ, ಬಿಎಂಡಬ್ಲ್ಯು ಮತ್ತು ಟಾಟಾ ಮೋಟರ್ಸ್, ಮನೆಯಲ್ಲಿಯೇ ಕುಳಿತು ಖರೀದಿ ಪ್ರಕ್ರಿಯೆ ನಡೆಸುವ ವಿನೂತನ ವ್ಯವಸ್ಥೆಯನ್ನು ಪರಿಚಯಿಸಿವೆ.
ಆನ್ ಲೈನ್ ಖರೀದಿ ಸೌಲಭ್ಯದಲ್ಲಿ ಖರೀದಿಸಲು ಬಯಸುವ ಕಾರಿನ‌ ಎಲ್ಲಾ ದಿಕ್ಕುಗಳನ್ನು ಹತ್ತಿರದಿಂದ ಹಾಗೂ ದೂರದಿಂದಲೂ ನೋಡಬಹುದಾಗಿದ್ದು, ಒಳಾಂಗಣವನ್ನು ನೋಡುವ ವ್ಯವಸ್ಥೆ ಇದೆ.‌ ಕಾರು ಖರೀದಿ ಪ್ರಕ್ರಿಯೆಗಳನ್ನು ಸಂಪರ್ಕರಹಿತವಾಗಿ‌ ಕೆಲವೇ ಸುಲಭದ ಹಂತಗಳಲ್ಲಿ ಮನೆಯಲ್ಲಿಯೇ ‌ಕುಳಿತು ಮುಗಿಸಬಹುದಾಗಿದೆ. ಕಾರು ಖರೀದಿದಾರರು ಟೆಸ್ಟ್ ಡ್ರೈವ್ ಒಂದನ್ನು ಹೊರತು ಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಿ ಕಾರನ್ನು ‌ಮನೆ ಬಾಗಿಲಿಗೆ ತರಿಸಬಹುದು.

Related posts

Luka Modric inspirational story

fifaworldcup-2026 ರಕ್ತಸಿಕ್ತ ಅಧ್ಯಾಯದಿಂದ ಶುರುವಾದ ಪಯಣ.. ಕ್ರೊವೇಶಿಯಾಗೆ ಬೆಳ್ಳಿಯ ಮುಕುಟ ತೊಡಿಸಿದವನ ಬದುಕಿನ ಚಿತ್ರಣ..!

June 25, 2026
ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

June 25, 2026

 

ಇತ್ತೀಚೆಗೆ ಡೆಲಾಯ್ಟ್ ಸಂಸ್ಥೆಯು ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ಅದರ ಸಮೀಕ್ಷಾ ವರದಿಯು ಆನ್‌ಲೈನ್ ಖರೀದಿಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ‌ಎಂದು‌ ಹೇಳಿದೆ. ಹೆಚ್ಚಿನ ಗ್ರಾಹಕರು ಇಂತಹ ಸಮಯದಲ್ಲಿ ಷೋರೂಂಗೆ ಹೋಗಲು ಬಯಸುವುದಿಲ್ಲ, ವಾಹನವನ್ನು ಆನ್ ಲೈನ್ ನಲ್ಲಿ ಖರೀದಿಸಲು ಇಷ್ಟ ಪಡುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೊಯೋಟ ಕಿರ್ಲೋಸ್ಕರ್ ಈಗಾಗಲೇ ತನ್ನ ಖರೀದಿ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ. ಗ್ರಾಹಕರು ತಮ್ಮ ಆಯ್ಕೆಯ ಕಾರನ್ನು ಅಂತಿಮಗೊಳಿಸಿ ಹಣ ಸಂದಾಯ ಮಾಡಿ ಖರೀದಿ ಪ್ರಕ್ರಿಯೆಗಳನ್ನು ಮುಗಿಸುತ್ತಿದ್ದಂತೆ, ಅವರು ಆಯ್ಕೆ ಮಾಡಿದ ಕಾರು ಅವರ ಮನೆ ಮುಂದೆ ಬಂದು ನಿಲ್ಲುತ್ತದೆ ‌. ಆನ್ ಲೈನ್ ಖರೀದಿಯಲ್ಲಿ ಗ್ರಾಹಕರಿಗೆ ‌ಯಾವುದೇ ತೊಂದರೆ ಆಗದಂತೆ ನಾವು ನಿಗಾ ವಹಿಸುತ್ತೇವೆ ಎಂದಿರುವ ಟೊಯೋಟಾ ಕಾರ್ಖಾನೆಯಿಂದ ಪ್ರಾರಂಭವಾಗಿ ಡೀಲರ್ ಶಿಪ್, ಷೋರೂಂಗಳ ವರೆಗೆ ನಾವು ‌ಶುಚಿತ್ವ ಹಾಗೂ ಸುರಕ್ಷೆಗೆ ಆದ್ಯತೆ ನೀಡಿದ್ದೇವೆ. ಕೊರೋನಾ ಈ ಸಮಯದಲ್ಲಿ ಗ್ರಾಹಕರ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದೆ.

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ತನ್ನ ಕಾರ್ಪೊರೇಟ್ ವೆಬ್ ಸೈಟ್ ಮೂಲಕ ‘ಹೋಂಡಾ ಫ್ರಮ್ ಹೋಮ್’ ಆನ್ ಲೈನ್ ಬುಕಿಂಗ್ ಸೌಲಭ್ಯ ಪರಿಚಯಿಸಿದ್ದು, ಇದರ ಮೂಲಕ ಗ್ರಾಹಕರು ಕಾರ್ ಬುಕ್ ಮಾಡಬಹುದು. ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ ಬುಕ್‌ ನೌ ಅನ್ನು ಕ್ಲಿಕ್ ಮಾಡಿ, ಹಣ ಪಾವತಿ ಮಾಡಿದರೆ ಉಳಿದೆಲ್ಲ ಜವಾಬ್ದಾರಿ ನಮ್ಮದು. ಗ್ರಾಹಕರ ಮೊಬೈಲ್ ಸಂಖ್ಯೆಗೆ ಕಾರು ಬುಕ್ ಆಗುತ್ತಿದ್ದಂತೆ ಒಂದು ಸಂದೇಶ ಬರುತ್ತದೆ. ನಂತರ ಹೋಂಡಾದ ಪ್ರತಿನಿಧಿಯೊಬ್ಬರು ಕರೆ ಮಾಡಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುತ್ತಾರೆ. ದಾಖಲೆ ಹಾಗೂ ಹಣ ಪಾವತಿ ಹಂತಗಳು ಮುಗಿಯುತ್ತಿದ್ದಂತೆ ಕಾರು ಗ್ರಾಹಕರಿಗೆ ರವಾನೆಯಾಗುತ್ತದೆ‌ ಎಂದು ಹೇಳಿದೆ.‌

www.bmw-contactless.in ಎಂಬ ವೆಬ್ ಸೈಟ್ ಮೂಲಕ ಐಷಾರಾಮಿ ಕಾರುಗಳನ್ನು ತಯಾರಿಸುವ ಬಿಎಂಡಬ್ಲ್ಯೂ ಆನ್ ಲೈನ್ ಖರೀದಿಗಾಗಿ ಮುಂದಾಗಿದೆ. ‌ಕ್ಲಿಕ್ ಟು ಡ್ರೈವ್ ಎಂಬ ಆನ್ ಲೈನ್ ಯೋಜನೆಯನ್ನು ಟಾಟಾ ಮೋಟರ್ಸ್ ಶುರುಮಾಡಿದೆ. ಮಹಿಂದ್ರಾ ಮತ್ತು ಮಹಿಂದ್ರಾ ಔನ್ ಆನ್ ಲೈನ್ ಎಂಬ ಸೇವೆ ಆರಂಭಿಸಿದೆ.
ಬಹುತೇಕ ಎಲ್ಲಾ ಪ್ರತಿಷ್ಠಿತ ಕಾರು ಕಂಪನಿಗಳು ಮನೆಯಿಂದಲೇ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.

Tags: BMWLockdownToyota Kirloskar
ShareTweetSendShare
Join us on:

Related Posts

Luka Modric inspirational story

fifaworldcup-2026 ರಕ್ತಸಿಕ್ತ ಅಧ್ಯಾಯದಿಂದ ಶುರುವಾದ ಪಯಣ.. ಕ್ರೊವೇಶಿಯಾಗೆ ಬೆಳ್ಳಿಯ ಮುಕುಟ ತೊಡಿಸಿದವನ ಬದುಕಿನ ಚಿತ್ರಣ..!

by admin
June 25, 2026
0

ಇದು ಯಾವುದೋ ಒಂದು ಕಾಲ್ಪನಿಕ ಕಥೆಯಲ್ಲ. ಸುಮಾರು 35-36 ವರ್ಷಗಳ ಹಿಂದೆ ನಡೆದ ನೈಜ ಘಟನೆ. ಈ ಕಥಾನಾಯಕನ ಬದುಕಿನ ಚಿತ್ರಣವಂತೂ ಹಾಲಿವುಡ್‍ನ ಥ್ರಿಲ್ಲಿಂಗ್ ಸಿನಿಮಾ ಸ್ಟೋರಿಯನ್ನು...

ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

by Shwetha
June 25, 2026
0

ಬೆಂಗಳೂರು ನಗರದ ಸೌಂದರ್ಯ ಮತ್ತು ಪಾದಚಾರಿಗಳ ಸುರಕ್ಷತೆಗೆ ಅಡ್ಡಿಯಾಗಿರುವ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈಗ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿದಿನ...

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

by Shwetha
June 25, 2026
0

ಅಮೆರಿಕ–ಇರಾನ್ ನಡುವಿನ ಶಾಂತಿ ಒಪ್ಪಂದದ ಬಳಿಕ ಇರಾನ್‌ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣಗಳು ಕಂಡುಬಂದಿದ್ದರೂ, ಭಾರತೀಯ ರಾಯಭಾರಿ ಕಚೇರಿ ಭಾರತೀಯ ನಾಗರಿಕರಿಗೆ ಮಹತ್ವದ ಪ್ರಯಾಣ ಸಲಹೆ ನೀಡಿದೆ....

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

by Shwetha
June 25, 2026
0

ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಯುವ ನಾಯಕರನ್ನು ಮತ್ತೆ ಎಂದಿಗೂ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಠಿಣ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ; 2-3 ದಿನಗಳಲ್ಲಿ ಹೊಸ ಮಾರ್ಗಸೂಚಿ

by Shwetha
June 25, 2026
0

ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಹೊಸ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದ್ದು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram