“ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನಡ್ಡಾ ಅವರು ರಾಷ್ಟ್ರ ರಾಜಧಾನಿಯಲ್ಲಿನ ಕೋವಿಂದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ದೇಶದಲ್ಲಿ 1967 ರವರೆಗೆ ಇದ್ದಂತೆ ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳಿಗೆ ಹೇಗೆ ಹೊಂದಿಸಬಹುದು ಎಂಬುವುದನ್ನು ನೋಡಲು ಕಾರ್ಯಸಾಧ್ಯತೆ ಮತ್ತು ಕಾರ್ಯವಿಧಾನವನ್ನು ಅನ್ವೇಷಿಸಲಿದ್ದಾರೆ.
2014 ರಲ್ಲಿ ಅಧಿಕಾರಕ್ಕೆ ಬಂದ ವೇಳೆ ಪ್ರಧಾನಿ ಮೋದಿ ಅವರು, ಏಕಕಾಲಿಕ ಚುನಾವಣೆಯ ಕಲ್ಪನೆ ಪ್ರತಿಪಾದಿಸಿದ್ದರು. ಚುನಾವಣೆಯಿಂದಾಗಿ ಆರ್ಥಿಕ ಹೊರೆ ಮತ್ತು ಮತದಾನದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. 2017 ರಲ್ಲಿ ರಾಷ್ಟ್ರಪತಿಯಾದ ನಂತರ ರಾಮನಾಥ್ ಕೋವಿಂದ್ ಕೂಡ ಮೋದಿಯವರ ಅಭಿಪ್ರಾಯಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಸದ್ಯ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.