ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ – 2 ಲಕ್ಷ ಹೂಡಿಕೆ ಮಾಡಿ ಐದು ವರ್ಷಕ್ಕೆ 66000 ಬಡ್ಡಿ ಪಡೆಯಿರಿ
ಪೋಸ್ಟ್ ಆಫೀಸ್ ಹೂಡಿಕೆಗೆ ಉತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಇಲ್ಲಿ ನೀವು ಉತ್ತಮ ಆದಾಯವನ್ನು ಸಹ ಪಡೆಯಬಹುದು. ಅಂಚೆ ಕಚೇರಿಯ ಉಳಿತಾಯ ಯೋಜನೆಯಲ್ಲಿ ನೀವು ವಾರ್ಷಿಕ 6.6 ರಷ್ಟು ಆದಾಯವನ್ನು ಪಡೆಯಬಹುದು. ಈ ಯೋಜನೆಯಡಿಯಲ್ಲಿ, ನೀವು ಒಂದು ದೊಡ್ಡ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ ಮತ್ತು ಅದರ ಮೇಲೆ ನಿಮಗೆ ಮಾಸಿಕ ಬಡ್ಡಿ ಆದಾಯ ಸಿಗುತ್ತದೆ.
ವೈಯಕ್ತಿಕ ಖಾತೆದಾರರು ಅದರಲ್ಲಿ 4.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ 9 ಲಕ್ಷ ವರೆಗೆ ಹೂಡಿಕೆ ಮಾಡಬಹುದು.
ಈ ಯೋಜನೆಯ ಹೆಸರು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ. ಇದು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ.
ಹೂಡಿಕೆ ಮೆಚ್ಯೂರ್ ಆದ ನಂತರ, ನೀವು ಪೂರ್ಣ ಹಣವನ್ನು ಪಡೆಯುತ್ತೀರಿ. ಈ ಯೋಜನೆಯ ವಿಶೇಷತೆಯೆಂದರೆ ಅದು ಮಾರುಕಟ್ಟೆಯ ಅಪಾಯದಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಮತ್ತು ನೀವು ಮಾಸಿಕ ಬಡ್ಡಿಯನ್ನು ಪಡೆಯುತ್ತೀರಿ ಮತ್ತು ರಿಟರ್ನ್ಸ್ ಬಗ್ಗೆ ಸಂಪೂರ್ಣ ಭರವಸೆ ಇದೆ.
10 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸಂಬಂಧಿಸಿದ ಈ ಯೋಜನೆಯಲ್ಲಿ ಮೈನರ್ ಹೆಸರಿನಲ್ಲಿ ಅವರ ಪಾಲಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯಡಿ ಕನಿಷ್ಠ 1 ಸಾವಿರ ರೂಪಾಯಿ ಮತ್ತು ಗರಿಷ್ಠ 4.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಹೂಡಿಕೆಯ ಮೊತ್ತವು 100 ಕ್ಕಿಂತ ಹೆಚ್ಚಿರಬೇಕು.
1 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ಪ್ರತಿ ವರ್ಷ 6600 ರೂಪಾಯಿ ಸಿಗುತ್ತದೆ
ಈ ಯೋಜನೆಯಲ್ಲಿ ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಿಮಗೆ ಒಂದು ವರ್ಷದಲ್ಲಿ 6600 ರೂಪಾಯಿ ಮತ್ತು ಪ್ರತಿ ತಿಂಗಳು 550 ರೂಪಾಯಿ ಸಿಗುತ್ತದೆ. 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 1100 ರೂಪಾಯಿ ಮತ್ತು ವರ್ಷಕ್ಕೆ 13200 ರೂಪಾಯಿ ಸಿಗುತ್ತದೆ. ಐದು ವರ್ಷಗಳಲ್ಲಿ ಒಟ್ಟು 66000 ರೂಪಾಯಿ ಸಿಗುತ್ತದೆ. 3 ಲಕ್ಷ ಹೂಡಿಕೆ ಮಾಡಿದರೆ, ನಿಮಗೆ ತಿಂಗಳಿಗೆ ರೂ. 1650, 4 ಲಕ್ಷ ರೂ ಹೂಡಿಕೆ ಮಾಡಿದರೆ, ನಿಮಗೆ ತಿಂಗಳಿಗೆ ರೂ. 2200 ಮತ್ತು 4.5 ಲಕ್ಷ ರೂ. ಹೂಡಿಕೆ ಮಾಡಿದರೆ, ತಿಂಗಳಿಗೆ 2475 ರೂ ಸಿಗುತ್ತದೆ. ಒಂದು ವರ್ಷದಲ್ಲಿ ಅದು 29700 ರೂಪಾಯಿ ಮತ್ತು ಐದು ವರ್ಷಗಳಲ್ಲಿ 1 ಲಕ್ಷ 48 ಸಾವಿರದ 500 ರೂಪಾಯಿ ಆಗಿರುತ್ತದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 1 ವರ್ಷದ ಮೊದಲು ಹಿಂಪಡೆಯಲು ಸಾಧ್ಯವಿಲ್ಲ. ಒಂದು ವರ್ಷದ ನಂತರ ಮತ್ತು ಮೂರು ವರ್ಷಗಳ ಮೊದಲು ಹೂಡಿಕೆಯನ್ನು ಹಿಂತೆಗೆದುಕೊಂಡರೆ, ನಂತರ 2% ಶುಲ್ಕ ಕಡಿತಗೊಳಿಸಲಾಗುತ್ತದೆ. ಮೂರು ವರ್ಷಗಳ ನಂತರ ಮತ್ತು ಐದು ವರ್ಷಗಳ ಮೊದಲು ಖಾತೆಯನ್ನು ಮುಚ್ಚಿದರೆ ಶೇಕಡಾ 1 ರಷ್ಟು ಕಡಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಬೆಳ್ಳುಳ್ಳಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/oWAdASicQQ
— Saaksha TV (@SaakshaTv) February 23, 2021
ಎಲ್ಐಸಿ(LIC)ಯಿಂದ ತನ್ನ ಗ್ರಾಹಕರಿಗಾಗಿ ಮಾರ್ಚ್ 6 ರವರೆಗೆ ವಿಶೇಷ ಸೌಲಭ್ಯ https://t.co/H6UI5Ixv2K
— Saaksha TV (@SaakshaTv) February 23, 2021
ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್ https://t.co/YOgFatzho4
— Saaksha TV (@SaakshaTv) February 23, 2021