ಕೈಗೆಟುವ ದರದಲ್ಲಿ OnePlus Nord ವೈರ್ಡ್ ಇಯರ್ಫೋನ್ ಬಿಡುಗಡೆ..
ಮೊಬೈಲ್ ತಯಾರಕ OnePlus Nord ಭಾರತದಲ್ಲಿ ಅತ್ಯಂತ ಕೈಗೆಟುಕುವ ವೈಯರಡ್ ಇಯರ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದು ಕಂಪನಿ ಭಾರತದಲ್ಲಿ ಮಾರಾಟ ಮಾಡುತ್ತಿರುವ ಅಗ್ಗದ ಉತ್ಪನ್ನವಾಗಿದೆ. ಈ ವೈರ್ಡ್ ಇಯರ್ಫೋನ್ಗಳ ಬೆಲೆ ಕೇವಲ ರೂ. 799 ಮಾತ್ರ. ಪ್ರಸ್ತುತ ವೈರ್ಲೆಸ್ ಆಡಿಯೊ ವಿಭಾಗದ ಮೇಲೆ ಗಮನ ಕೇಂದ್ರೀಕರಿಸಿರುವ ಕಂಪನಿ ವೈರ್ಲೆಸ್ ನೆಕ್ಬ್ಯಾಂಡ್ ಮತ್ತು ವೈರ್ಲೆಸ್ ಹೆಡ್ಸೆಟ್ಗಳನ್ನ ಹೊರತರುತ್ತಿದೆ. ಹಾಗಾಗಿ ವೈಯರ್ ಇಯರ್ಫೋನ್ಗಳನ್ನ 1000 ಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ವೈಯರ್ ಇಯರ್ಫೋನ್ಗಳನ್ನ ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಭಾರತದಲ್ಲಿ ಇದರ ಬೆಲೆ ರೂ. 799 ಮಾತ್ರ. ಇವು ಪ್ರಸ್ತುತ ಒನ್ ಪ್ಲಸ್ ಕಂಪನಿಯಿಂದ ಮಾರಾಟವಾಗುತ್ತಿರುವ ಅತ್ಯಂತ ಒಳ್ಳೆ ಆಡಿಯೊ ಹೆಡ್ಸೆಟ್ಗಳಾಗಿವೆ. ಸೆಪ್ಟೆಂಬರ್ 1 ರಿಂದ ಖರೀದಿಗೆ ಲಭ್ಯವಿದೆ. ಇದನ್ನು OnePlus ಆನ್ಲೈನ್ ಮತ್ತು ಆಫ್ಲೈನ್ ಸ್ಟೋರ್ಗಳ ಜೊತೆಗೆ ಅಮೆಜಾನ್ ಇಂಡಿಯಾ, ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾದಂತಹ ಆಫ್ಲೈನ್ ಚಿಲ್ಲರೆ ಅಂಗಡಿಗಳಿಂದಲೂ ಖರೀದಿಸಬಹುದು.
OnePlus ಕಂಪನಿ 3.5mm ಹೆಡ್ಫೋನ್ ಜ್ಯಾಕ್ ಇಲ್ಲದ ಸ್ಮಾರ್ಟ್ಫೋನ್ಗಳು ಮತ್ತು ಡಿವೈಸ್ ಗಳಿಗಾಗಿ OnePlus ಟೈಪ್-ಸಿ ಬುಲೆಟ್ಗಳನ್ನು ಸಹ ಮಾರಾಟ ಮಾಡುತ್ತಿದೆ. OnePlus ನ ಇತ್ತೀಚಿನ ಇಯರ್ಫೋನ್ಗಳು Xiaomi, Realme, Mi ಡ್ಯುಯಲ್ ಡ್ರೈವರ್ ಇಯರ್ಫೋನ್ಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿದೆ.
OnePlus ನಾರ್ಡ್ ವೈರ್ಡ್ ಇಯರ್ಫೋನ್ಗಳ ವಿಶೇಷಣಗಳು: 3.5mm ವೈರ್ಡ್ ಕನೆಕ್ಟಿವಿಟಿ, 9.2mm ಡೈನಾಮಿಕ್ ಡ್ರೈವರ್ಗಳು, OnePlus ಬುಲೆಟ್ ವೈರ್ಲೆಸ್ Z2 ಗೆ ಹೋಲುವ ವಿನ್ಯಾಸ, ನೆಕ್ಬ್ಯಾಂಡ್ ನಿಯಂತ್ರಣಗಳ ಬದಲಿಗೆ ಇನ್ಲೈನ್ ರಿಮೋಟ್, ಮೈಕ್ರೊಫೋನ್, ಬಳಕೆಯಲ್ಲಿಲ್ಲದಿದ್ದಾಗ ಎಚ್ಚರಿಕೆಯಿಂದ ಮರೆಮಾಚಲು ಮ್ಯಾಗ್ನೆಟಿಕ್ ಕ್ಲಿಪ್ ಕಾರ್ಯ.








