ಗೋರಖ್ಪುರ: ರಾಮ ಭಕ್ತ ಮಾತ್ರ ದೆಹಲಿಯ ಸಿಂಹಾಸನದಲ್ಲಿ ಕುಳಿತುಕೊಳ್ಳಲಿದ್ದಾನೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭವಿಷ್ಯ ನುಡಿದಿದ್ದಾರೆ.
ಗೋರಖ್ ಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಲೋಕಸಭೆ ಚುನಾವಣೆಯು ರಾಮ ಭಕ್ತರು ಹಾಗೂ ರಾಮ ದ್ರೋಹಿಗಳ ನಡುವಿನ ಯುದ್ಧವಾಗಿದೆ. ರಾಮನನ್ನು ದೇವಸ್ಥಾನಕ್ಕೆ ಕರೆ ತಂದವರು ಈ ಯುದ್ಧದಲ್ಲಿ ಗೆಲ್ಲಲಿದ್ದಾರೆ. ವೀರ್ ಬಹದ್ದೂರ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ 1986ರಲ್ಲಿ ರಾಮಮಂದಿರದ ಬೀಗವನ್ನು ಗೋರಖ್ ಪುರ ಸ್ಥಳದಿಂದ ತರಲಾಯಿತು. ಆ ಜಾಗದಲ್ಲಿ ರಾಮಲಲ್ಲಾ ಆಸೀನರಾದಾಗ ದೆಹಲಿಯಿಂದ ದಾಖಲೆಯ ಮತಗಳು ಸಿಗಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಮನನ್ನು ತಂದವರನ್ನು ನಾವು ಅಧಿಕಾರಕ್ಕೆ ಕರೆತರುತ್ತೇವೆ ಎಂದು ಜನ ಹೇಳುತ್ತಿದ್ದಾರೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುವುದು ಜನರ ಕನಸಾಗಿದೆ ಎಂದು ಹೇಳಿದ್ದಾರೆ.
ಇಂದಿಗೂ ರಾಮಮಂದಿರ ಕಟ್ಟಬಾರದಿತ್ತು ಎಂದು ಕಾಂಗ್ರೆಸ್ ಹೇಳುತ್ತಿದೆ. ಇದು ಜಗತ್ತಿಗೆ ತಪ್ಪು ಸಂದೇಶ ರವಾನಿಸಿದೆ. ರಾಮಮಂದಿರವನ್ನು ಸರಿಯಾಗಿ ನಿರ್ಮಿಸಿಲ್ಲ ಎಂದು ಸಮಾಜವಾದಿ ಪಕ್ಷ ಹೇಳುತ್ತಿದೆ.ಆದರೆ, ರಾಮಭಕ್ತರು ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.