ರಾಯಚೂರು | ರಾಶಿಗಟ್ಟಲೆ ಔಷಧಿ ಹೂಳಲು ಯತ್ನ OPEC hospital saaksha tv
ರಾಯಚೂರು : ರಾಯಚೂರಿನ ಓಪೆಕ್ ಆಸ್ಪತ್ರೆಯ ಸಿಬ್ಬಂದಿಗಳ ಕಳ್ಳಾಟ ಬಟ್ಟಂಬಯಲಾಗಿದೆ. ಜನರಿಗೆ ತಲುಪಬೇಕಿದ್ದ ಔಷಧಿ ಅವಧಿ ಮೀರಿದ ಹಿನ್ನೆಲೆ ಆಸ್ಪತ್ರೆಯ ಸಿಬ್ಬಂದಿ ಔಷಧಿಗಳನ್ನು ಹೂಳಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದು, ಆಸ್ಪತ್ರೆ ಸಿಬ್ಬಂದಿಯವರು ಔಷಧಿ ಹೂಳದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಅಂದಹಾಗೇ ಓಪೆಕ್ ಆಸ್ಪತ್ರೆಯ ವಿರುದ್ಧ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಸದ್ಯ ಆಸ್ಪತ್ರೆ ಸಿಬ್ಬಂದಿ ಹೂಳಲು ಹೊರಟ್ಟಿದ್ದ ಔಷಧಿಗಳು ಜನರಿಗೆ ವಿತರಣೆ ಆಗಬೇಕಿತ್ತು. ಆದ್ರೆ ಓಪೆಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿ ನೀಡುತ್ತಿರಲಿಲ್ಲವಂತೆ. ಬದಲಾಗಿ ಖಾಸಗಿ ಮೆಡಿಕಲ್ ಸ್ಟೋರ್ ಗೆ ರೆಫರ್ ಮಾಡುತ್ತಾರಂತೆ. ಈ ಮೂಲಕ ಕೆಲವರು ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಜನರಿಗೆ ಆಸ್ಪತ್ರೆಯಲ್ಲಿರುವ ಔಷಧಿ ನೀಡದೇ ಖಾಸಗಿ ಮೆಡಿಕಲ್ಸ್ ಗೆ ರೆಫರ್ ಮಾಡುವುದರಿಂದಲೇ ಆಸ್ಪತ್ರೆಯಲ್ಲಿ ಔಷಧಿ ಸ್ಟಾಕ್ ಉಳಿದು ಅವಧಿ ಮುಗಿದಿದೆ ಅಂತ ಆರೋಪ ಕೇಳಿಬಂದಿದೆ.









