ADVERTISEMENT
Sunday, July 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

2007ರ ಟಿ-20 ವಿಶ್ವಕಪ್ – ಆಪರೇಷನ್ ಸೂಪರ್ ಓವರ್ ಬೌಲ್ ಔಟ್ ಗೆಲುವಿನ ಸಿಕ್ರೇಟ್ ಏನು ಗೊತ್ತಾ…?

Operation Super Over: The Secret Behind India's Bowl-Out Win in the 2007 T20 World Cup!

Shwetha by Shwetha
July 5, 2025
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

2007ರ ಟಿ-20 ವಿಶ್ವಕಪ್ – ಆಪರೇಷನ್ ಸೂಪರ್ ಓವರ್ ಬೌಲ್ ಔಟ್ ಗೆಲುವಿನ ಸಿಕ್ರೇಟ್ ಏನು ಗೊತ್ತಾ…?

saakshatv.com
ಇದು ಸುಮಾರು 18 ವರ್ಷಗಳ ಹಿಂದೆ ನಡೆದಿರುವ ಘಟನೆ… ಕೆಲವು ವರ್ಷಗಳ ಹಿಂದೆ ರಿವೀಲ್ ಆಗಿರುವ ವಿಷ್ಯವೇ.. ಹಳೆಯ ಸುದ್ದಿ ಬರೆಯೋಕೆ ಆಗಿರಲಿಲ್ಲ.. ನೆನಪಿಗೆ ಇರಲಿ ಅಂತ ಹಾಗೇ ಸುಮ್ಮನೆ ಒಂದು ಸ್ಟೋರಿ..!❤

Related posts

team india

t-20 cricket: ಟೀಮ್ ಇಂಡಿಯಾ ಕಣಜದಲ್ಲಿ ಕೀಟಾಣುಗಳ ಕಾಟ..! ಆಂಗ್ಲರ ಐಸಿಯುನಲ್ಲಿ ಗಂಭೀರ್ ಹುಡುಗರು..! 🚨🏏🔥

July 12, 2026
fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

July 11, 2026

ಅದು ಚೊಚ್ಚಲ ಟಿ-20 ವಿಶ್ವಕಪ್ ಟೂರ್ನಿ. ಸೆಪ್ಟಂಬರ್ 14, 2007. ಡರ್ಬಾನ್‍ನಲ್ಲಿ ನಡೆದಿದ್ದ ಹತ್ತನೇ ಮ್ಯಾಚ್. ಡಿ ಗುಂಪಿನ ಅತೀ ರಣ ರೋಚಕ ಪಂದ್ಯ. ಕಾರಣ ಅದು ಬದ್ಧ ವೈರಿಗಳಾದ ಭಾರತ – ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿ.
ಎಲ್ಲವೂ ಗೊತ್ತಿರುವಂತೆ ನಿಗದಿತ 20 ಓವರ್‍ಗಳ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಭಾರತ 9 ವಿಕೆಟ್‍ಗೆ 141 ರನ್ ಗಳಿಸಿತ್ತು. ಪಾಕ್ ಏಳು ವಿಕೆಟ್ ನಷ್ಟಕ್ಕೆ 141 ರನ್ ದಾಖಲಿಸಿತ್ತು.
ಸೂಪರ್ ಓವರ್ ಕ್ಲೈಮ್ಯಾಕ್ಸ್‍ನಲ್ಲಿ ಭಾರತ ಗೆಲುವು ಸಾಧಿಸಿತ್ತು. 20ನೇ ಓವರ್‍ನ ಕೊನೆಯ ಎಸೆತದಲ್ಲಿ ಮಿಸ್ಬಾ ಉಲ್ ಹಕ್ ರನೌಟ್ ಆಗುವ ಮೂಲಕ ಗೆಲ್ಲುವ ಪಂದ್ಯವನ್ನು ಪಾಕ್ ಕೈಚೆಲ್ಲಿಕೊಂಡಿತ್ತು.

saakshatv.com
ಆದ್ರೆ ಸೂಪರ್ ಓವರ್‍ನ ಬೌಲ್ ಔಟ್‍ನಲ್ಲಿ ಧೋನಿಯ ಮಾಸ್ಟರ್ ಮೈಂಡ್‍ಗೆ ಪಾಕ್ ನಿರುತ್ತರವಾಗಿತ್ತು. ಧೋನಿಯ ರಣತಂತ್ರವನ್ನು ಅರಿತುಕೊಳ್ಳುವಲ್ಲಿ ವಿಫಲವಾಯ್ತು. ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲಿ ಅರಿತುಕೊಂಡಾಗ ಮಾತ್ರ ಯಶ ಸಾಧಿಸಲು ಸಾಧ್ಯ ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಗಿತ್ತು. ಇಲ್ಲಿ ಸಾಂಪ್ರದಾಯಿಕ ಕ್ರಿಕೆಟ್ ತಂತ್ರಗಳ ಬದಲು ವರ್ಕ್ ಔಟ್ ಆಗಿದ್ದು ಧೋನಿಯ ಮೈಂಡ್ ಗೇಮ್..
ಅಂದ ಹಾಗೇ ಈ ಪಂದ್ಯದಲ್ಲಿ ಎಲ್ಲವೂ ಮೊದ ಮೊದಲು.. ಐಸಿಸಿ ಟಿ-20 ಕ್ರಿಕೆಟ್ ಮೊದಲ ಟೂರ್ನಿ. ಟಿ-20 ಪಂದ್ಯವೊಂದು ಟೈ ಆಗಿದ್ದು ಕೂಡ ಮೊದಲು.. ಸೂಪರ್ ಓವರ್ ಕೂಡ ಮೊದಲು.. ಸೂಪರ್ ಓವರ್‍ನಲ್ಲಿ ಬೌಲ್ ಔಟ್ ಕೂಡ ಮೊದಲು.. ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಸೂಪರ್ ಓವರ್‍ನಲ್ಲಿ ಭಾರತ ಗೆಲುವು ಸಾಧಿಸಿದ್ದು ಕೂಡ ಮೊದಲು.
saakshatv.com
ಹೌದು, ಪಂದ್ಯ ಸೋಲುತ್ತೇವೆ ಎಂಬ ಭಯ ಟೀಮ್ ಇಂಡಿಯಾ ಆಟಗಾರರಿಗೆ ಬಹುತೇಕ ನಿಶ್ಚಿತವಾಗಿತ್ತು. ಆದ್ರೆ ಕೊನೆಯ ತನಕ ಬಿಟ್ಟುಕೊಡುವ ಪ್ರಶ್ನೆಯೇ ಇರಲಿಲ್ಲ. ಹಾಗಾಗಿಯೇ ಟೀಮ್ ಇಂಡಿಯಾ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಅತ್ತ ಪಾಕಿಸ್ತಾನಕ್ಕೆ ಅತೀಯಾದ ಆತ್ಮವಿಶ್ವಾಸವೇ ಮುಳುವಾಗಿತ್ತು. ಕೊನೆಯ ಓವರ್‍ನಲ್ಲಿ ಪಾಕ್ ಡಗೌಟ್‍ನಲ್ಲಿ ಗೆಲುವಿನ ಸಂಭ್ರಮಕ್ಕೆ ಆಟಗಾರರು ರೆಡಿಯಾಗಿದ್ದರು. ಆದ್ರೆ ಆಗಿದ್ದೇ ಬೇರೆ. ಕೊನೆಯ ಎಸೆತದಲ್ಲಿ ಮಿಸ್ಬಾ ರನೌಟ್ ಆದಾಗ ಪಾಕ್ ಆಟಗಾರರ ಮುಖ ಸಪ್ಪೆ ಸಪ್ಪೆಯಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಹತಾಶೆ ಆಟಗಾರರಲ್ಲಿ ಮನೆ ಮಾಡಿತ್ತು.
saakshatv.com
ಆದ್ರೆ ಸೂಪರ್ ಓವರ್‍ನ ಬೌಲ್ ಔಟ್ ವೇಳೆ ಆಟಗಾರರ ಮುಖದಲ್ಲಿ ಮಂದಹಾಸ… ನಗು ನಗುತ್ತಲೇ ಸೂಪರ್ ಓವರ್‍ನ ಬೌಲ್ ಔಟ್‍ಗೆ ಅಣಿಯಾಗಿದ್ದರು. ಇಲ್ಲಿ ಟೀಮ್ ಇಂಡಿಯಾ ನಾಯಕ ಧೋನಿ ಡಿಫರೆಂಟ್ ಗೇಮ್ ಪ್ಲ್ಯಾನ್ ಮಾಡಿದ್ದರು. ಪ್ರಮುಖ ಬೌಲರ್‍ಗಳ ಕೈಗೆ ಬೌಲಿಂಗ್ ಮಾಡಲು ಚೆಂಡನ್ನು ನೀಡಲಿಲ್ಲ. ಇದೇ ವೇಳೆ ಸೆಹ್ವಾಗ್ ಬಂದು ಮೊದಲು ನಾನು ಬೌಲಿಂಗ್ ಮಾಡುತ್ತೇನೆ. ಬಳಿಕ ರಾಬಿನ್ ಮಾಡಲಿ ಅಂದ್ರಂತೆ. ವೀರು ಸ್ಟಂಪ್ ಎಗರಿಸುವಲ್ಲಿ ಸಫಲರಾದ್ರು. ನಂತರ ರಾಬಿನ್ ಉತ್ತಪ್ಪ, ಹರ್ಭನ್ ಸಿಂಗ್ ವಿಕೆಟ್‍ಗೆ ಗುರಿ ಇಟ್ಟು ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿಗೆ ಕಾರಣರಾದ್ರು.
saakshatv.com
ಆದ್ರೆ ವೀರೂ, ರಾಬಿನ್, ಭಜ್ಜಿ ಅಷ್ಟೊಂದು ಇಝೀಯಾಗಿ ಸ್ಟಂಪ್ ಎಗರಿಸಿದ್ದು ಹೇಗೆ ಎಂಬುದನ್ನು ಪಾಕ್ ಆಟಗಾರರು, ಕೋಚ್, ಮ್ಯಾನೇಜ್‍ಮೆಂಟ್ ಸ್ವಲ್ಪನೂ ಯೋಚನೆ ಮಾಡಲಿಲ್ಲ.
ಇಲ್ಲಿ ಪಾಕ್ ತಂಡದ ನಾಯಕ ಶೋಯಿಬ್ ಮಲ್ಲಿಕ್ ಬೌಲ್ ಔಟ್‍ಗೆ ತಂಡದ ಪ್ರಮುಖ ಬೌಲರ್‍ಗಳ ಕೈಗೆ ಚೆಂಡನ್ನು ನೀಡಿದ್ದರು. ಯಾಸೀರ್ ಆರಾಫತ್, ಉಮರ್ ಗುಲ್ ಹಾಗೂ ಶಾಹೀದ್ ಆಫ್ರಿದಿ ಸ್ಟಂಪ್‍ಗೆ ಗುರಿ ಇಟ್ಟು ಬೌಲಿಂಗ್ ಮಾಡಲಿಲ್ಲ. ಹೀಗಾಗಿ ಫುಟ್‍ಬಾಲ್‍ನ ಪೆನಾಲ್ಟಿ ಶೂಟ್‍ಔಟ್ ಮಾದರಿಯಲ್ಲೇ ಭಾರತ 3-0ರಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
saakshatv.com
ಅಷ್ಟಕ್ಕೂ ಇಲ್ಲಿ ವರ್ಕ್ ಔಟ್ ಆಗಿದ್ದು ಧೋನಿಯ ಸ್ಮಾರ್ಟ್‍ನೆಸ್. ವೀರೂ, ರಾಬಿನ್, ಭಜ್ಜಿ ಬೌಲಿಂಗ್ ಮಾಡುವಾಗ ಧೋನಿ ಮಾಮೂಲಿಯಂತೆ ವಿಕೆಟ್ ಕೀಪಿಂಗ್ ಮಾಡಲಿಲ್ಲ. ಬದಲಾಗಿ ಮೂರು ವಿಕೆಟ್‍ಗಳನ್ನು ಕವರ್ ಮಾಡಿಕೊಂಡು ಹಿಂದೆ ಕುಳಿತುಕೊಂಡು ಕೀಪಿಂಗ್ ಮಾಡಿದ್ದರು. ಇದು ಬೌಲರ್‍ಗಳಿಗೆ ಸುಲಭವಾಗಿ, ನಿಖರವಾಗಿ ಸ್ಟಂಪ್ ಎಗರಿಸಲು ಸಾಧ್ಯವಾಯ್ತು.
saakshatv.com
ಆದ್ರೆ ಪಾಕ್‍ನ ಕೀಪರ್ ಕಮ್ರಾನ್ ಅಕ್ಮಲ್ ಮೂಮೂಲಿ ಶೈಲಿಯಲ್ಲಿ ಕಿಂಪಿಂಗ್ ಮಾಡಿದ್ರು. ಪರಿಣಾಮ ಪಾಕ್ ಬೌಲರ್‍ಗಳಿಗೆ ಸ್ಟಂಪ್ ಅನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗಿಲ್ಲ. ಇದಕ್ಕೆ ಅನ್ನೋದು ಧೋನಿ ಸಾಮಾನ್ಯ ಮನುಷ್ಯನಲ್ಲ.. ಆಟದ ಜೊತೆ ಸ್ಮಾರ್ಟ್‍ನೆಸ್ ಕೂಡ ವರ್ಕ್ ಆಗುತ್ತೆ ಅಂತ. ಅಂದ ಹಾಗೇ ರೀತಿಯ ಸ್ಮಾರ್ಟ್ ಕ್ರಿಕೆಟ್ ತಂತ್ರಗಳು ಸಾಕಷ್ಟು ಬಾರಿ ಟೀಮ್ ಇಂಡಿಯಾದ ಗೆಲುವಿಗೆ ಸಹಕಾರಿಯಾಗಿವೆ. ಅಷ್ಟಕ್ಕೂ ಈ ವಿಷ್ಯವನ್ನು ರಿವೀಲ್ ಮಾಡಿರೋದು ಟೀಮ್ ಇಂಡಿಯಾದ ಮಾಜಿ ಬ್ಯಾಟರ್‍ಗಳಾದ ವೀರೇಂದ್ರ ಸೆಹ್ವಾಗ್ ಹಾಗೂ ರಾಬಿನ್ ಉತ್ತಪ್ಪ.

ಸನತ್ ರೈ

ShareTweetSendShare
Join us on:

Related Posts

team india

t-20 cricket: ಟೀಮ್ ಇಂಡಿಯಾ ಕಣಜದಲ್ಲಿ ಕೀಟಾಣುಗಳ ಕಾಟ..! ಆಂಗ್ಲರ ಐಸಿಯುನಲ್ಲಿ ಗಂಭೀರ್ ಹುಡುಗರು..! 🚨🏏🔥

by admin
July 12, 2026
0

t-20 cricket: ಟೀಮ್ ಇಂಡಿಯಾ ಕಣಜದಲ್ಲಿ ಕೀಟಾಣುಗಳ ಕಾಟ..! ಆಂಗ್ಲರ ಐಸಿಯುನಲ್ಲಿ ಗಂಭೀರ್ ಹುಡುಗರು..! 🚨🏏🔥 💥 ಕೊನೆಗೂ ಅರ್ಥವಾಗಬೇಕು.. ಅರ್ಥವಾಗಿದೆ ಅನ್ಸುತ್ತೆ. ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬರೀ...

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

by admin
July 11, 2026
0

🏔️ಶ್ವೇತವರ್ಣದಂತೆ ಹೊಳೆಯುವ ಹಿಮಪರ್ವತಗಳೇ ಈ ವೀರಭೂಮಿಯ ಮುಕಟುಮಣಿ. ಪ್ರಕೃತಿಯ ರಮಣೀಯ ಸೌಂದರ್ಯವೇ ಈ ನಾಡಿನ ಮುಖವಾಣಿ. ಸಣ್ಣ ಸಣ್ಣ ದ್ವೀಪಗಳು, ಬೆಟ್ಟಗುಡ್ಡಗಳೇ ಈ ದೇಶದ ಒಡಲು.🌊 ಅಟ್ಲಾಂಟಿಕ್...

mohammad salah

fifaworldcup-2026: ಫುಟ್‍ಬಾಲ್ ಅಂಗಳದ ಈಜಿಪ್ಟ್ ಚಿರತೆ ಮಹಮ್ಮದ್ ಸಲಾಹ್.. ಆಟದಷ್ಟೇ ಹೃದಯ ಗೆದ್ದ ಮಾಣಿಕ್ಯ..!⚽👑🇪🇬 🐆

by admin
July 10, 2026
0

ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ.. ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ.. ಹೀಗೂ ಇದೆಯಾ ಅನ್ನೋ ಯೋಚನೆ..! 🚀🔥⚽ ಇದು ಒಂದು ಸಣ್ಣ ಹಳ್ಳಿಯ ಕೆಳ...

Unai Simon FIFA Record

fifaworldcup-2026: 🧤⚽ ಅಂದು ವಿಲನ್.. ಇಂದು ಫಿಫಾ ವಿಶ್ವಕಪ್‍ನ ಹೀರೋ.. ಉನೈ ಸಿಮೋನ್ ಎಂಬ ಮಾಯಾವಿ ಗೋಲಿಯ ಯಶೋಗಾಥೆ..!🏆🌟

by admin
July 9, 2026
0

ಆಧುನಿಕ ಫುಟ್‍ಬಾಲ್ ಜಗತ್ತಿನ ಮಹಾಗೋಡೆ. ತಂಡದ ನಂಬಿಕಸ್ಥ ಕಾವಲುಗಾರ. ಎದುರಾಳಿ ತಂಡಗಳ ರಣಬೇಟೆಗಾರರನ್ನೇ ತಡೆದು ನಿಲ್ಲಿಸುವ ಮಾಯಾವಿ. ಗೋಲು ಪೆಟ್ಟಿಗೆಯತ್ತ ಶರವೇಗದಲ್ಲಿ ನುಗ್ಗಿ ಬರುವ ಚೆಂಡನ್ನು ಕ್ಷಣ...

Cristiano Ronaldo

fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!

by admin
July 8, 2026
0

ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ..! ಆ ಒಂದು ಸೋಲು..! ಆ ಒಂದು ಪಂದ್ಯ..! ತನ್ನ ಪಾಲಿನ ಫಿಫಾ ವಿಶ್ವಕಪ್‍ನ ಕೊನೆಯ ಪಂದ್ಯವಾಗಿರಲಿಲ್ಲ. ಅದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram