ಬಿಜೆಪಿಯಲ್ಲಿ ‘ಟಾರ್ಗೆಟ್ ಲಿಂಗಾಯತ’ ಎಂಬ ಆಪರೇಷನ್
ಬೆಂಗಳೂರು : ಬಿಜೆಪಿ ಪಕ್ಷದಲ್ಲಿ ‘ಟಾರ್ಗೆಟ್ ಲಿಂಗಾಯತ’ ಎಂಬ ಆಪರೇಷನ್ ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಮೊದಲು ಬಿ.ಎಸ್.ಯಡಿಯೂರಪ್ಪ, ಈಗ ಜಗದೀಶ್ ಶೆಟ್ಟರ್.
ಬಿಜೆಪಿಯ ‘ಸಂತೋಷ ಕೂಟ’ ಹಂತ ಹಂತವಾಗಿ ಬಿಜೆಪಿಯಲ್ಲಿನ ಲಿಂಗಾಯತ ನಾಯಕರನ್ನು ಮುಗಿಸುತ್ತಿದೆ.
ಬಿಜೆಪಿ ಪಕ್ಷದಲ್ಲಿ ‘ಟಾರ್ಗೆಟ್ ಲಿಂಗಾಯತ’ ಎಂಬ ಆಪರೇಷನ್ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.
ತನ್ನ ಸ್ವಂತ ಕ್ಷೇತ್ರದ ಕಾರ್ಯಕ್ರಮದಲ್ಲೇ ಜಾಗ ಸಿಗದೆ ಅನಾಥರಾದ ಶೆಟ್ಟರ್ ಅವರ ಸ್ಥಿತಿ ಯಾರಿಗೂ ಬರಬಾರದು ಎಂದು ಕುಟುಕಿದೆ.
ಚಿಂತೆ ಇಲ್ಲದವರಿಗೆ ಸಂತೆಯಲ್ಲಿ ನಿದ್ದೆ, ಚಿಂತನೆ ಇಲ್ಲದವರಿಗೆ ವೇದಿಕೆಯಲ್ಲೇ ನಿದ್ದೆ!

ನಳಿನ್ ಕುಮಾರ್ ಕಟೀಲ್ ಅವರೇ, ಸುಳ್ಯದಲ್ಲಿ ಕಾರು ಅಲ್ಲಾಡಿಸಿದಂತೆ ಇಲ್ಲಿ ನಿಮ್ಮ ಕಾರ್ಯಕರ್ತರು ವೇದಿಕೆ ಅಲ್ಲಾಡಿಸುವ ಮುನ್ನ ಎಚ್ಚರಾಗಿಬಿಡಿ!
ಬಿಜೆಪಿ ಅಧ್ಯಕ್ಷರಿಗೆ ಪ್ರತಿರಾತ್ರಿ ಬಿಟ್ ಕಾಯಿನ್ ಕನಸು ಬೀಳುವುದರಿಂದ ನಿದ್ದೆ ಬರುವುದಿಲ್ಲವೋ ಏನೋ ಎಂದು ಕಿಡಿಕಾರಿದೆ.
ಬಿಜೆಪಿ ವೈಫಲ್ಯಗಳನ್ನು ಪ್ರಶ್ನಿಸಿದರೆ ಧರ್ಮದ ಹೆಸರಲ್ಲಿ ರಕ್ಷಣೆ ಪಡೆಯುತ್ತದೆ.
ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಜಾತಿಯ ಹೆಸರಲ್ಲಿ ರಕ್ಷಣೆ ಪಡೆಯುತ್ತದೆ. ನೂರೆಂಟು ಹಗರಣ, ನೂರೆಂಟು ವೈಫಲ್ಯ, 108 ಸ್ಥಗಿತದಿಂದ ಸಾವು ಸಂಭವಿಸುತ್ತಿವೆ.
ಇದು ಬರೀ ಸಾವಲ್ಲ, ಸರ್ಕಾರಿ ಕೊಲೆ. ಈ ಸಾವಿಗೆ ಸಚಿವ ಡಾ.ಕೆ.ಸುಧಾಕರ್ ಅವರೇ ನೇರ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ.









