Oppo Reno 8 ಸರಣಿಯ ಎರಡು ಮೊಬೈಲ್ ಗಳು ಭಾರತದಲ್ಲಿ ಬಿಡುಗಡೆ..
ಚೀನಾ ಮೂಲದ ಸ್ಮಾರ್ಟ್ ಪೋನ್ ತಯಾರಿಕಾ ಸಂಸ್ಥೆ ಭಾರತದಲ್ಲಿ ತನ್ನ ಹೊಸ Oppo Reno 8 ಸರಣಿಯ ಎರಡು ಮಾದರಿಯ ಮೊಬೈಲ್ ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. Oppo Reno 8 ಮತ್ತು Oppo Reno 8 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಲಾಗಿದೆ.
Oppo ನಡೆಸಿದ ಮೆಗಾ ಲಾಂಚ್ ಸಮಾರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಈ ಸ್ಮಾರ್ಟ್ ಪೋನ್ ಗಳನ್ನ ಪರಿಚಯಿಸಲಾಗಿದೆ. ಇದರ ಜೊತೆಗೆ Oppo ಪ್ಯಾಡ್ ಏರ್ ಟ್ಯಾಬ್ಲೆಟ್ ಮತ್ತು Oppo Enco X2 TWS ಅನ್ನು ಸಹ ಬಿಡುಗಡೆ ಮಾಡಿದೆ.
Oppo Reno 8 ಸರಣಿಯ ಬೆಲೆ
Oppo Reno 8 ಮೊಬೈಲ್ ಶಿಮ್ಮರ್ ಬ್ಲಾಕ್ ಮತ್ತು ಶಿಮ್ಮರ್ ಗೋಲ್ಡ್ ಕಲರ್ ಗಳಲಲ್ಲಿ ಲಭ್ಯವಿದೆ. 8 GB RAM ಜೊತೆಗೆ 128 GB ಸ್ಟೋರೇಜ್ ಹೊಂದಿರುವ ಮೊಬೈಲನ್ನ 29,999 ರೂಗಳಿಗೆ ಬಿಡುಗಡೆ ಮಾಡಲಾಗಿದೆ. ಜುಲೈ 25 ರಿಂದ Oppo ಸ್ಟೋರ್, ರಿಟೇಲ್ ಸ್ಟೋರ್ ಮತ್ತು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಿಂದ ಫೋನ್ ಖರೀದಿಸಬಹುದು.
Oppo Reno 8 Pro ನ 12 GB RAM ಜೊತೆಗೆ 256 GB ಸ್ಟೋರೇಜ್ ರೂಪಾಂತರದ ಬೆಲೆ 45,999 ರೂ. ಈ ಫೋನ್ ಅನ್ನು ಜುಲೈ 19 ರಿಂದ Oppo ಸ್ಟೋರ್, ರಿಟೇಲ್ ಸ್ಟೋರ್ ಮತ್ತು ಇ-ಕಾಮರ್ಸ್ ವೆಬ್‌ಸೈಟ್‌ನಿಂದ ಖರೀದಿಸಬಹುದು. ಮೊಬೈಲ್, ಗ್ಲೇಜ್ಡ್ ಗ್ರೀನ್ ಮತ್ತು ಗ್ಲೇಜ್ಡ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. Oppo Reno 8 ಸರಣಿಯ ಎರಡೂ ಫೋನ್‌ಗಳಲ್ಲಿ 5G ತಂತ್ರಜ್ಞಾನವಿದೆ.