ADVERTISEMENT
Saturday, September 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿಎಂ ಕಾರ್ಯಶೈಲಿಯನ್ನು ಮುಕ್ತಕಂಠದಿಂದ ಹೊಗಳಿದ ವಿರೋಧ ಪಕ್ಷದ ನಾಯಕರು…

saaksha tv by saaksha tv
May 9, 2020
in Newsbeat, Politics, Samagra karnataka
Share on FacebookShare on TwitterShare on WhatsappShare on Telegram

ಬೆಂಗಳೂರು : ಶುಕ್ರವಾರ, ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದರು. ಈ ವೇಳೆ, ಸಿಎಂ ಕಾರ್ಯಶೈಲಿಯನ್ನು ವಿರೋಧ ಪಕ್ಷಗಳು ಮುಕ್ತಕಂಠದಿಂದ ಹೊಗಳಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಸಚಿವರ ಪೋಸ್ಟ್ ನಲ್ಲಿ ಏನಿದೆ? ಕೆಳಗೆ ಪೋಸ್ಟ್ ಮಾಡಿರುವ ಎರಡು ಫೋಟೋಗಳು ಎರಡು ಬೇರೆ ಸಂದರ್ಭಕ್ಕೆ ಸಂಬಂಧಿಸಿದ್ದು. ಆದರೆ ಎರಡೂ ನಮ್ಮ‌ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದು.

Related posts

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

September 5, 2026
ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

September 5, 2026

ಮೊದಲು ಎರಡನೆಯ ಸಂದರ್ಭ ದ ಬಗ್ಗೆ.‌

ನಿನ್ನೆ ಮುಖ್ಯಮಂತ್ರಿಗಳನ್ನು ಸರ್ವಪಕ್ಷದ ಭಾರೀ ದೊಡ್ಡ ಸಂಖ್ಯೆಯ ನಾಯಕರುಗಳ ನಿಯೋಗ ಭೇಟಿ ಮಾಡಿತ್ತು.‌ ಕಾಂಗ್ರೆಸ್, ಜೆಡಿಎಸ್, ಜೆಡಿಯು, ಸಿಪಿಎಂ, ಸಿಪಿಐ, ರೈತಸಂಘ….ಗಳ ಪ್ರತಿನಿಧಿಗಳು ಈ ನಿಯೋಗದಲ್ಲಿದ್ದರು. ರಾಜ್ಯದಲ್ಲಿ ಇನ್ನೂ ಏನು ಆಗಬೇಕು ಎಂಬುದರ ಬಗ್ಗೆ ದೊಡ್ಡ ಬೇಡಿಕೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿದರು.

ಬೇಡಿಕೆಗಳ ಕುರಿತು ಈ ನಾಯಕರೆಲ್ಲರೂ ಮಾತನಾಡುವಾಗ ಒಂದು ಸಂಗತಿಯನ್ನು ಗಮನಿಸಿದೆ. ಎಲ್ಲರೂ ನಮ್ಮ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಕ್ತ ಕಂಠದಿಂದ ಶ್ಲಾಘಿಸಿದರು. ಓರ್ವ ನಾಯಕರಂತೂ ಯಡಿಯೂರಪ್ಪನವರು 12 ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ್ದ ಕಾಯಕ ತತ್ವವನ್ನು ಹೇಗೆ ಅನುಸರಿಸುತ್ತಿದ್ದಾರೆ ಎಂದು ಬಣ್ಣಿಸಿದರು. ಇರುವ ಆರ್ಥಿಕ ಇತಿಮಿತಿಯಲ್ಲಿ ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರ ಕ್ರಮಗಳನ್ನು ಮೆಚ್ಚಿ ಮಾತಾನಾಡಿದರು. ಆದರೆ….‌‌ಇನ್ನೂ ಬೇಕು ಎಂದೂ ಹೇಳಿದರು. ಅದು ಸಹಜ ಕೂಡ.

ಈಗ ಮೊದಲ ಫೋಟೋ ಸಂದರ್ಭ.‌ (ನಾನು ಮು.ಮಂತ್ರಿಗಳ ಜೊತೆ ಮಾತನಾಡುತ್ತಿರುವ ಈ ಫೋಟೋ ಆ ಸಭಾಂಗಣದಲ್ಲಿದ್ದ ಗೆಳೆಯರೊಬ್ಬರು ಸೆರೆ ಹಿಡಿದು ನನಗೆ ಕಳಿಸಿದ್ದು)

ಈಗ್ಗೆ ಮೂರು ದಿನಗಳ ಹಿಂದೆ ಕೆಲ ಸಚಿವರು ಮತ್ತು ಪ್ರಮುಖ ಅಧಿಕಾರಿಗಳನ್ನೊಳಗೊಂಡ ಮೆರಾಥಾನ್ ಸಭೆಯಲ್ಲಿ ನಾನು ಭಾಗವಹಿಸಿದ್ದೆ.‌ ಯಾವ್ಯಾವ ವರ್ಗಕ್ಕೆ ಯಾವ ರೀತಿ ನೆರವು ಘೋಷಿಸಬೇಕೆಂಬುದರ ಕುರಿತು ನಡೆದಿತ್ತು ಆ ಸಭೆ.‌ ಎಲ್ಲರೂ ಹೇಳಿದ್ದನ್ನು ಮುಖ್ಯಮಂತ್ರಿಗಳು ಬರೆದುಕೊಳ್ಳುತ್ತಿದ್ದರು.‌ ಎಲ್ಲರ ಅಭಿಪ್ರಾಯಗಳನ್ನು ಆಲಿಸಿದರು. ಕೆಲ ಸಲ ನಡೆದ ಪರ-ವಿರೋಧ ಅಭಿಪ್ರಾಯಗಳಿಗೂ ಅವಕಾಶ ನೀಡಿದರು.‌ ಕೊನೆಗೆ ಅಂದಿನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ “ಈ ರೀತಿ ಪರಿಹಾರ ಘೋಷಿಸೋಣವೇ” ಎಂದು ಸಭೆಯನ್ನು ಕೇಳಿ ಇನ್ನೂ ನಾವು ಸಹಾಯ ಮಾಡಬೇಕಾದ ವರ್ಗಗಳು ಅನೇಕ ಇವೆ, ಸಧ್ಯಕ್ಕೆ ಇದನ್ನು ಘೋಷಿಸೋಣ ಎಂದು ಹೇಳಿದರು.‌

bsyಸಭೆ ಮುಗಿಯಿತು. ಎಲ್ಲರೂ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಮುಖ್ಯಮಂತ್ರಿಗಳು ಒಬ್ಬರೇ ಏನೋ ಕಾಗದ ನೋಡುತ್ತಿದ್ದರು.‌ ಆಗ ತಡೆಯಲಾಗದೆ ನಾನು ಹೋಗಿ “ಸರ್. ಒಂದು ನಿಮಿಷ ಮಾತನಾಡಬಹುದೇ” ಎಂದೆ. ಅವರು “ಹೇಳಿ ಸುರೇಶ್ ಕುಮಾರ್” ಎಂದರು.‌

ನಾನು “ಸರ್. ನೀವು ಈಗಿನ ಸಂದರ್ಭದಲ್ಲಿ ಹೇಗೆ‌ ಇದನ್ನೆಲ್ಲಾ ಹೇಗೆ ಮ್ಯಾನೇಜ್ ಮಾಡುತ್ತಿದ್ದೀರ. ನಮಗಿಂತ ನಿಮಗೆ ರಾಜ್ಯದ ಪರಿಸ್ಥಿತಿ ಅರಿವಿದೆ. ನಿಮಗೆ ಎಲ್ಲಾ ಸಂಗತಿಗಳ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ.‌ ಸಹಜವಾಗಿ ಒತ್ತಡ ಜಾಸ್ತಿಯೇ ಇರುತ್ತದೆ. ಒಂದೆರಡು ಖಾತೆ ನೋಡಿಕೊಳ್ಳುವ ನಮ್ಮಂಥವರಿಗೇ ಟೆನ್ಷನ್ ತರುವ ಸಂದರ್ಭವಿದು.‌ ನೀವು ಹೇಗೆ ಎದುರಿಸುತ್ತಿದ್ದೀರಿ? ಯಾವುದೇ ನಿಯೋಗ ಬಂದರೂ ನಿರಾಕರಿಸದೇ ಭೇಟಿ ಮಾಡುತ್ತಿದ್ದೀರಿ. ಒಂದು ಲಕ್ಷದಷ್ಟು ಮೊತ್ತದ ಚೆಕ್ ಕೊಡಲು ಬಂದವರೂ ಫೋಟೋ ಬಯಸಿದಾಗ ನಿಂತು ಸಹಕರಿಸುತ್ತಿದ್ದೀರಿ? ಇಷ್ಟೆಲ್ಲಾ ಒತ್ತಡ-ದುಗಡದ ನಡುವೆ ಹೇಗೆ ಸಾಧ್ಯ?” ಎಂದು ಕೇಳಿದೆ.

ಅದಕ್ಕವರು ” ಇಲ್ಲ ಸುರೇಶ್ ಕುಮಾರ್.‌ಇದೊಂದು (ಕೊರೋನಾ) ಸವಾಲು. ಈ ಸವಾಲನ್ನು ಎದುರಿಸಲೇಬೇಕೆಂಬ ತೀರ್ಮಾನ ಮೊದಲ ದಿನದಿಂದ ನನ್ನದು.‌ ರಾಜ್ಯದ ಜನತೆಯ ಒಟ್ಟು ಹಿತಕ್ಕಾಗಿ ಈ ಎಲ್ಲಾ ಸವಾಲು ಎದುರಿಸಲೇಬೇಕಲ್ಲವೇ? ಆದ್ದರಿಂದ ಗಟ್ಟಿಯಾಗಿ ಎದುರಿಸುತ್ತಿದ್ದೇನೆ” ಎಂದರು.

ಆಗ ನಾನು “ಹ್ಯಾಟ್ಸ್ ಆಫ್ ಸರ್. ನಿಮ್ಮ Energy ಗೆ ಮತ್ತು ದೃಢತೆ ಯಿಂದ ಕೂಡಿರುವ ಕಾರ್ಯಕ್ಕೆ.” ಎಂದು ಹೇಳಿದ್ದಕ್ಕೆ ಅವರು Thank You ಎಂದರು. ನಾನು ಅಲ್ಲಿಂದ ಹೊರಟೆ.

ರಾಜ್ಯದಲ್ಲಿ ಕಳೆದ ಸುಮಾರು 50 ದಿನಗಳಿಂದ ನಡೆದಿರುವ ಕಾರ್ಯವನ್ನು‌ ಹತ್ತಿರದಿಂದ ನೋಡಿರುವ ನನ್ನ ಪ್ರಾಮಾಣಿಕ ಅನಿಸಿಕೆ ಇದು. ಬಹಳ ಉತ್ತಮ ನಿರ್ಧಾರಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡಿರುವ ರಾಜ್ಯಗಳಲ್ಲಿ ನಮ್ಮದೂ ಒಂದು.‌

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯಕ್ಕೆ ತಕ್ಕಂತೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ.‌

ನಮ್ಮ ಸರ್ಕಾರ ತೆಗೆದುಕೊಂಡ‌ ಕೆಲ‌ ನಿರ್ಧಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ‌ ಕಂಡು ಬಂದಿರುವ ಭಿನ್ನಾಭಿಪ್ರಾಯಗಳ ಗಮನಿಸಿದ್ದೇನೆ. ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಮಾಜದಲ್ಲಿ ಬೇರೆ ಬೇರೆ ಅಭಿಪ್ರಾಯ ಇರಲಿಕ್ಕೂ ಸಾಧ್ಯ.‌

ಅದು ಅವರವರ ಹಕ್ಕು. ಆದರೆ ಸರ್ಕಾರದ ಸದುದ್ದೇಶ ಮಾತ್ರ ಯಾರೂ ಪ್ರಶ್ನಿಸಿಲ್ಲ.‌

ಒಂದು ಮಾತನ್ನು ವಿಶ್ವಾಸದಿಂದ ಹೇಳಬಲ್ಲೆ.‌

ಒಟ್ಟಾರೆ ನೋಡಿದಾಗ ಈ ನಾಯಕನ ನೇತೃತ್ವ, Workaholic ಕಾರ್ಯಶೈಲಿ ನಮ್ಮ ರಾಜ್ಯವನ್ನು ಬಹುತೇಕ ರಾಜ್ಯಗಳಿಗೆ ಹೋಲಿಸಿದರೆ ಸಮಾಧಾನಕರ ಸ್ಥಿತಿಯಲ್ಲಿಡುವಂತೆ ಮಾಡಿದೆ.

ಮತ್ತೊಮ್ಮೆ ನನ್ನ Hats off. ಎಂದು ಅಭಿನಂದಿಸಿದ್ದಾರೆ.

Tags: BS Yeddyurappa
ShareTweetSendShare
Join us on:

Related Posts

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

by Shwetha
September 5, 2026
0

ಮೂಡಿಗೆರೆ: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದ ವಿಚಾರವಾಗಿ ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರು ಮುಖ್ಯಮಂತ್ರಿ ಡಿ.ಕೆ....

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

by Shwetha
September 5, 2026
0

ಉದ್ಯೋಗಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಿರುವ ಬಾಕಿ ಅಥವಾ ಬಡ್ಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ...

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

by Shwetha
September 5, 2026
0

ಬೆಂಗಳೂರು: ಶಸ್ತ್ರಸಜ್ಜಿತ ನಕ್ಸಲಿಸಂ ಗಿಂತಲೂ ಇಂದು ದೇಶವನ್ನು ಒಳಗಿನಿಂದಲೇ ನಶಿಸುವಂತೆ ಮಾಡುತ್ತಿರುವ ಬೌದ್ಧಿಕ ಅಥವಾ ದಿಮಾಗಿ ನಕ್ಸಲಿಸಂ ಅತ್ಯಂತ ಅಪಾಯಕಾರಿಯಾಗಿದೆ. ಈ ಅದೃಶ್ಯ ಶತ್ರುಗಳ ವಿರುದ್ಧ ಸಮಾಜದಲ್ಲಿ...

ಫೋಕ್ಸ್‌ವ್ಯಾಗನ್‌ಗೆ ಭಾರೀ ಪುನರ್‌ರಚನೆ: ವಿಶ್ವಾದ್ಯಂತ 1 ಲಕ್ಷ ಉದ್ಯೋಗ ಕಡಿತಕ್ಕೆ ನಿರ್ಧಾರ

ಫೋಕ್ಸ್‌ವ್ಯಾಗನ್‌ಗೆ ಭಾರೀ ಪುನರ್‌ರಚನೆ: ವಿಶ್ವಾದ್ಯಂತ 1 ಲಕ್ಷ ಉದ್ಯೋಗ ಕಡಿತಕ್ಕೆ ನಿರ್ಧಾರ

by Shwetha
September 5, 2026
0

ಜಾಗತಿಕ ಆಟೋಮೊಬೈಲ್‌ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಜರ್ಮನಿಯ ಕಾರು ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್‌ ಭಾರೀ ಪ್ರಮಾಣದ ಪುನರ್‌ರಚನೆಗೆ ಮುಂದಾಗಿದೆ. ಸಂಸ್ಥೆಯ ಕಾರ್ಯಾಚರಣಾ ವೆಚ್ಚವನ್ನು ಕಡಿಮೆ ಮಾಡುವುದು,...

ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ

ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ

by Shwetha
September 5, 2026
0

ಮಥುರಾ: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಭೂತಪೂರ್ವ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಥುರಾದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram