ಕೇರಳದಲ್ಲಿ ಆರು ಹೊಸ ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಸಿಎಂ ಪಿಣರಾಯಿ ವಿಜಯನ್ ಅವರು ಮಾರ್ಚ್ 31 ರವರೆಗೆ ಸಿನೆಮಾ ಹಾಲ್ ಗಳನ್ನು ಮುಚ್ಚುವಂತೆ ಕೇಳಿಕೊಂಡಿದ್ದಾರೆ.
ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ರಾಜ್ಯಾದ್ಯಂತ ಕಟ್ಟೆಚ್ಚರದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿಸಿದರು.
ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಮುಖ್ಯಮಂತ್ರಿ, ರಾಜ್ಯದ ಶಾಲೆಗಳಲ್ಲಿ 7 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದುಪಡಿಸಲು ಮತ್ತು ಮಾರ್ಚ್ 31 ರವರೆಗೆ ಎಲ್ಲಾ ರಜಾ ತರಗತಿಗಳು, ಬೋಧನಾ ತರಗತಿಗಳು, ಅಂಗನವಾಡಿಗಳು ಮತ್ತು ಮದರಸಾಗಳನ್ನು ಮುಚ್ಚಬೇಕು ಎಂದು ಆದೇಶ ನೀಡಿದ್ದಾರೆ.
ಮೇಕೆ ಹಾಲಿನ ಪ್ರಮುಖ ಆರೋಗ್ಯ ಪ್ರಯೋಜನಗಳು
ಮೇಕೆ ಹಾಲು, ಅದರ ವಿಶೇಷ ಪೋಷಕಾಂಶಗಳಿಂದ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಹಸುವಿನ ಹಾಲಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ, ಇದನ್ನು ಆರೋಗ್ಯಕರ ಪರ್ಯಾಯವಾಗಿ ಪರಿಗಣಿಸಬಹುದು. ಇಲ್ಲಿವೆ...