Organ Donor : ತಂದೆಗೆ ಲಿವರ್ ನ ಭಾಗ ದಾನ ಮಾಡಿದ ದೇಶದ ಅತಿ ಕಿರಿಯ ಅಂಗಾಂಗ ದಾನಿ…..
ಕೇರಳದ 17 ವರ್ಷದ ಬಾಲಕಿಯೊಬ್ಬಳು ತನ್ನ ತಂದೆಗೆ ಅಂಗಾಂಗ ಮಾಡುವ ಮೂಲಕ ಅತಿ ಕಿರಿಯ ಅಂಗಾಗ ದಾನಿ ಎಂಬ ವಿಶೇಷಕ್ಕೆ ಪಾತ್ರಳಾಗಿದ್ದಾಳೆ. 12ನೇ ತರಗತಿ ಓದುತ್ತಿರುವ ದೇವಾನಂದ ತನ್ನ 48 ವರ್ಷದ ತಂದೆ ಪ್ರತೀಶ್ ಗೆ ಯಕೃತ್ ದಾನ ಮಾಡಿದ್ದಾರೆ.
ಅಪ್ರಾಪ್ತ ವಯಸ್ಸಿನವರು ತಮ್ಮ ಅಂಗಗಳನ್ನು ದಾನ ಮಾಡಲು ಭಾರತೀಯ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ತನಗೆ ಇದರಲ್ಲಿ ವಿನಾಯಿತಿ ನೀಡುವಂತೆ 12ನೇ ತರಗತಿ ವಿದ್ಯಾರ್ಥಿನಿ ದೇವಾನಂದಾ ಕೇರಳ ಹೈಕೋರ್ಟ್‌ಗೆ ಮನವಿ ಮಾಡಿದ್ದಳು. ಹೈಕೋರ್ಟ್ ಸಮ್ಮತಿ ಸೂಚಿಸಿದ ನಂತರ ತಮ್ಮ ಆರೋಗ್ಯವಂತ ಯಕೃತ್ತಿನ ಒಂದು ಭಾಗವನ್ನ ದಾನ ಮಾಡಿದ್ದಾರೆ.
ತಂದೆ ಪ್ರತೀಶ್ ಕೇರಳದ ತ್ರಿಶೂರ್ ನಲ್ಲಿ ಕೆಫೆ ನಡೆಸುತ್ತಾ ಜೀವನ ನಡಸುತ್ತಿದ್ದಾರೆ. ಕ್ಯಾನರ್ ಕಾರಕ ಅಂಶದೊಂದಿಗೆ ಲಿವರ್ ಕಾಯಿಲೆಗೆ ತುತ್ತಾಗಿದ್ದರು.
ಪ್ರತೀಶ್ ಅವರ ಜೀವ ಉಳಿಸಲು ಯಕೃತ್ತು ಅವಶ್ಯಕವಾಗಿತ್ತು. ಆದರೆ ಕುಟುಂಬದವರು ಎಷ್ಟೇ ಹುಡುಕಾಟ ನಡೆಸಿದರೂ ಸೂಕ್ತ ದಾನಿಯನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೊನೆಗೆ ಬೇರೆ ದಾರಿ ಕಾಣದೆ ದೇವಾನಂದಾಳೇ ತನ್ನ ಲಿವರ್ ಭಾಗವನ್ನು ದಾನ ಮಾಡಲು ನಿರ್ಧಾರ ತೆಗೆದುಕೊಂಡಿದ್ದಳು.
1994ರ ಮಾನವ ಅಂಗಾಂಗ ಕಸಿ ಕಾಯ್ದೆ ಪ್ರಕಾರ, ಅಪ್ರಾಪ್ತ ವಯಸ್ಸಿನವರು ಅಂಗ ದಾನ ಮಾಡಲು ನಿಯಮಗಳು ಅನುಮತಿ ನೀಡುವುದಿಲ್ಲ. 17 ವರ್ಷದವಳಾದ ದೇವಾನಂದಾ, ತಂದೆಗೆ ಲಿವರ್ ದಾನ ಮಾಡಲು ಕಾನೂನಿನ ಪ್ರಕಾರ ಇನ್ನೂ ಒಂದು ವರ್ಷ ಕಾಯಬೇಕಿತ್ತು. ಹಾಗಾಗಿ ಹೈ ಕೋರ್ಟ್ ಮೆಟ್ಟಿಲೇರಿ ಒಪ್ಪಿಗೆ ಬಯಸಿದರು. ಯುವತಿಯ ಧೈರ್ಯಶಾಲಿ ಮನೋಭಾವಕ್ಕೆ ಮೆಚ್ಚುಗೆ ಸೂಚಿಸಿದ ಕೋರ್ಟ್ ಅನುಮತಿ ನೀಡಿತು.
Organ Donor : The youngest organ donor of the country who donated part of the liver to his father.








