ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಸಾವಯವ ನುಗ್ಗೆ ಪೌಡರ್ Organic Nuggle Powder
ಕೊಪ್ಪಳ, ನವೆಂಬರ್27: ಮಕ್ಕಳಲ್ಲಿ ಅಪೌಷ್ಟಿಕತೆ ಎಂಬ ಪೆಡಂಭೂತ ಬೆಂಬಿಡದೇ ಕಾಡುತ್ತಿದೆ. ಇದರ ನಿವಾರಣೆಗೆ ಸರ್ಕಾರ ಹಲವು ಯೋಜನೆ ಜಾರಿ ತಂದಿದೆ. ಕೊಪ್ಪಳ ಜಿಲ್ಲಾಡಳಿತ ಆಸಕ್ತಿ ವಹಿಸಿ ಅಂಗನವಾಡಿ ಮಕ್ಕಳಿಗೆ ಅಪೌಷ್ಟಿಕತೆ ನಿವಾರಿಸಲು ಸ್ಥಳೀಯವಾಗಿ ಬೆಳೆದ ‘ಸಾವಯವ ನುಗ್ಗೆ ಪೌಡರ್’ ನ್ನು ತಯಾರಿಸಿದೆ. Organic Nuggle Powder

ಕೊಪ್ಪಳ ಜಿಲ್ಲೆಯಲ್ಲಿನ ಜನರು ತಿಳುವಳಿಕೆ ಕೊರತೆಯೊಂದಿಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ವಿವಾಹ ಮಾಡುತ್ತಿದ್ದಾರೆ. ಬಾಲ್ಯ ವಿವಾಹ ಇಲ್ಲಿ ಜೀವಂತವಾಗಿದೆ. ಇದರ ಪರಿಣಾಮವಾಗಿ ಅಪ್ರಾಪ್ತೆಯರು ವಯಸ್ಸಿಗೆ ಬರುವ ಮೊದಲೇ ಗರ್ಭಿಣಿಯರಾಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಅವರಿಗೆ ಜನಿಸುವ ಮಕ್ಕಳು ಅಪೌಷ್ಟಿಕತೆಯಿಂದಲೇ ಬಳಲುತ್ತಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸಲು ಗಂಭೀರ ಚಿಂತನೆಗೆ ತೊಡಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಂತಹ ಅಪೌಷ್ಟಿಕ ಮಕ್ಕಳ ಆರೋಗ್ಯವನ್ನು ಸದೃಢ ಮಾಡಬೇಕೆಂಬ ಉದ್ದೇಶದಿಂದ ಹಲವಾರು ಯೋಜನೆಯನ್ನು ಅನುಷ್ಟಾನಗೊಳಿಸಿವೆ.ಆದರೂ ಜಿಲ್ಲೆಯಲ್ಲಿನ ಅಪೌಷ್ಟಿಕತೆ ಪ್ರಮಾಣ ದೊಡ್ಡಮಟ್ಟದಲ್ಲಿ ಸುಧಾರಣೆ ಕಾಣುತ್ತಿಲ್ಲ.
ನಾಯಿಗಳಿಂದ ಕೊರೋನವೈರಸ್ ಸೋಂಕಿತರನ್ನು ಪತ್ತೆ ಹಚ್ಚಲು ಸಾಧ್ಯ !
ಆದಕ್ಕಾಗಿ ಸರ್ಕಾರದ ಯೋಜನೆಗಳ ಜತೆಗೆ ಜಿಲ್ಲಾಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಅಪೌಷ್ಟಿಕ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ದಿಕ್ಕಿನಲ್ಲಿ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದೆ.
ಈಗಾಗಲೆ ಮಕ್ಕಳಿಗೆ ಗೋದಿ, ರಾಗಿ, ಅಕ್ಕಿ, ಬೆಲ್ಲ ಪೂರೈಕೆ ಮಾಡಲಾಗುತ್ತಿದೆ. ಇದರೊಟ್ಟಿಗೆ ಸಾವಯವ ನುಗ್ಗೆ ಪೌಡರ್ ಇದರಲ್ಲಿ ಸೇರ್ಪಡೆಗೊಳಿಸಲು ಕೊಪ್ಪಳ ಜಿಲ್ಲಾಡಳಿತ ಮುಂದಾಗಿದೆ. ಆರಂಭದಲ್ಲಿ 100 ಅಪೌಷ್ಟಿಕ ಮಕ್ಕಳಿಗೆ ಇದರ ಪ್ರಯೋಗ ನಡೆಸಿದೆ. ಪ್ರತಿ ತಾಲೂಕಿಗೆ 20 ಮಕ್ಕಳಂತೆ ಪಟ್ಟಿ ಮಾಡಿದ್ದು ಅವರಿಗೆ 0.75 ಗ್ರಾಂ ಪೌಡರ್ ಅನ್ನು ಮಾಲ್ಟ್ ನೊಂದಿಗೆ ಮಿಶ್ರಣ ಮಾಡಿ ಕೊಡಲು ಮುಂದಾಗಿದೆ.

ಪೌಡರ್‌ನಿಂದ ಹಸಿವು ಹೆಚ್ಚಾಗುತ್ತೆ:ಅಪೌಷ್ಟಿಕ ಮಕ್ಕಳಲ್ಲಿ ಸಾಮಾನ್ಯವಾಗಿ ತೂಕ ಕಡಿಮೆ ಇರುತ್ತದೆ. ಬೆಳವಣಿಗೆಯಲ್ಲೂ ಕುಂಠಿತವಾಗಿರುತ್ತದೆ. ಅಂತಹ ಮಕ್ಕಳಿಗೆ ಪೌಡರ್ ಮಾಲ್ಟ್ ಕೊಡುವುದರಿಂದ ಹಸಿವು ಹೆಚ್ಚಾಗುತ್ತದೆ. ಮಗು ಹಸಿವು ಹೆಚ್ಚಾದಂತೆ ಚೆನ್ನಾಗಿ ಊಟ ಮಾಡಲು ಆಸಕ್ತಿ ತೋರಿಸುತ್ತದೆ. ಮಗು ಊಟ ಮಾಡುತ್ತಿದ್ದಂತೆ ದೇಹದಲ್ಲಿ ತೂಕ ಹೆಚ್ಚಾಗುವ ಜತೆಗೆ ಚೆನ್ನಾಗಿ ಬೆಳವಣಿಗೆಯು ಕಂಡು ಬರುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1332006946728157184?s=19
https://twitter.com/SaakshaTv/status/1331431538525831168?s=19








