ಭಾರತ ಟಾಪ್ 10 ಹೀರೋಗಳ ಪಟ್ಟಿಯಲ್ಲಿ ದಕ್ಷಿಣದ ನಟರೇ ಅಗ್ರಗಣ್ಯ…
ಭಾರತ ಚಿತ್ರರಂಗದಲ್ಲಿ ಇದೀಗ ದಕ್ಷಿಣ ಚಿತ್ರಗಳ ಅಬ್ಬರವಷ್ಟೆ ನಡೆಯುತ್ತಿದೆ. ಬಾಲಿವುಡ್ ಅನ್ನೂ ಹಿಂದಿಕ್ಕಿ ಸೌತ್ ಸಿನಿಮಾಗಳು ಸದ್ದು, ಮಾಡುತ್ತಿವೆ. ದಕ್ಷಿಣದ ಹೀರೋಗಳು ಯಾವ ಬಾಲಿವುಡ್ ಹೀರೋಗೂ ಕಡಿಮೆ ಇಲ್ಲ ಎನ್ನುವಂತೆ ನೇಮು ಫೇಮು ಪಡೆದುಕೊಳ್ಳುತ್ತಿದ್ದಾರೆ.
ಇದಕ್ಕೆ ಹೌದು ಎನ್ನುವಂತೆ ಆರ್ಮ್ಯಾಕ್ಸ್ ಬಿಡುಗಡೆ ಮಾಡಿರುವ ಭಾರತದ ಟಾಪ್ 10 ಹೀರೋ ಪಟ್ಟಿಯಲ್ಲು ಟಾಪ್ 5ರಲ್ಲಿ ದಕ್ಷಿಣ ಭಾರತದ ನಟರೇ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಮೂಲಕ ದೇಶ ವಿದೇಶಗಳಲ್ಲಿ ಸಿನಿಮಾ ಕ್ರೇಜ್ ಹೆಚ್ಚಿಸಿದ ಯಶ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ತೆಲುಗು ನಟ ಮಹೇಶ್ ಬಾಬು, ತಮಿಳು ನಟ ಸೂರ್ಯ ಸೇರಿದಂತೆ ಹಲವು ದಿಗ್ಗಜರನ್ನೇ ಹಿಂದಿಕ್ಕಿದ್ದಾರೆ.
ಆರ್ಮ್ಯಾಕ್ಸ್ ಬಿಡುಗಡೆ ಮಾಡಿರುವ ಭಾರತದ ಟಾಪ್ 10 ಹೀರೋಗಳ ಪಟ್ಟಿಯಲ್ಲಿ ತಮಿಳು ಸ್ಟಾರ್ ವಿಜಯ್ ದಳಪತಿ ಪ್ರಥಮ ಸ್ಥಾನ ಅಲಂಕರಿಸಿದ್ದು, ಎರಡನೇ ಸ್ಥಾನದಲ್ಲಿ ಬಾಹುಬಲಿ ಹೀರೋ ಪ್ರಭಾಸ್ ವಿರಾಜಮಾನರಾಗಿದ್ದಾರೆ. ತೆಲುಗು ಸ್ಟಾರ್ ಜ್ಯೂನಿಯರ್ ಎನ್ಟಿಆರ್ ಮೂರನೇ ಸ್ಥಾನದಲ್ಲಿ ಕುಳಿತಿದ್ದರೆ ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನದಲ್ಲಿದ್ದರೆ, ಬಾಲಿವುಡ್ ಹಾಗೂ ಟಾಲಿವುಡ್ ದಿಗ್ಗಜರನ್ನೂ ಹಿಂದಿಕ್ಕಿ ರಾಕಿಂಗ್ ಸ್ಟಾರ್ ಯಶ್ 5ನೇ ಸ್ಥಾನ ಅಲಂಕರಿಸಿದ್ದಾರೆ.
ಆರ್ಮ್ಯಾಕ್ಸ್ ಬಿಡುಗಡೆ ಮಾಡಿದ ಭಾರತದ ಟಾಪ್ 10 ಹೀರೋಗಳ ಪಟ್ಟಿ ವಿವರ:
- ವಿಜಯ್ ದಳಪತಿ
- ಪ್ರಭಾಸ್
- ಜ್ಯೂ.ಎನ್ಟಿಆರ್
- ಅಲ್ಲು ಅರ್ಜುನ್
- ಯಶ್
- ಅಕ್ಷಯ್ ಕುಮಾರ್
- ರಾಮ್ ಚರಣ್
- ಮಹೇಶ್ ಬಾಬು
- ಸೂರ್ಯ
- ಅಜಿತ್ ಕುಮಾರ್
ಇನ್ನೂ ಆರನೇ ಸ್ಥಾನದಲ್ಲಿ ಬಾಲಿವುಡ್ ನಿಂದ ಏಕೈಕ ವ್ಯಕ್ತಿಯಾಗಿ ಅಕ್ಷಯ್ ಕುಮಾರ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ನಾಲ್ಕು ಸ್ಥಾನಗಳಲ್ಲೂ ದಕ್ಷಿಣ ಭಾರತದ ನಟರೇ ಇದ್ದು ನಟ ರಾಮ್ ಚರಣ್ ಏಳನೇ ಸ್ಥಾನದಲ್ಲಿ ಮಹೇಶ್ ಬಾಬು ಎಂಟನೇ ಸ್ಥಾನದಲ್ಲಿ ಮತ್ತು ತಮಿಳು ಸ್ಟಾರ್ ನಟರಾದ ಸೂರ್ಯ ಮತ್ತು ಅಜಿತ್ ಕ್ರಮವಾಗಿ ಒಂಬತ್ತು ಹತ್ತನೆ ಸ್ಥಾನದಲ್ಲಿದ್ದಾರೆ.