ಸೆರೆನಾ ವಿಲಿಯಮ್ಸ್ ಅವರ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಕನಸು ಕಮರಿ ಹೋಗಿದೆ. 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲುವನ್ನ ಎದುರು ನೊಡುತ್ತಿದ್ದ ಸೆರೆನಾ ವಿಲಿಯಮ್ಸ್ ಸೆಮಿಫೈನಲ್ ನಲ್ಲಿ ಆಘಾತ ಅನುಭವಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ನಲ್ಲಿ ಸೆರೆನಾ ವಿಲಿಯಮ್ಸ್ ಅವರು 6-1, 3-6, 3-6ರಿಂದ ವಿಕ್ಟೋರಿಯಾ ಆಝಾರೆಂಕಾ ಅವರಿಗೆ ತಲೆಬಾಗಿದ್ದಾರೆ. ಅಮ್ಮಂದಿರ ನಡುವಿನ ಸೆಮಿಫೈನಲ್ ಪಂದ್ಯ ರೋಚಕವಾಗಿಯೇ ಸಾಗಿತ್ತು. ಮೊದಲ ಸೆಟ್ ಪಂದ್ಯವನ್ನು ಸುಲಭವಾಗಿ ಗೆದ್ರೂ ನಂತರದ ಎರಡು ಸೆಟ್ ಗಳಲ್ಲಿ ಸೆರೆನಾ ವಿಲಿಯಮ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ವಿಫಲರಾದ್ರು. 38ರ ಹರೆಯದ ಸೆರೆನಾ ವಿಲಿಯಮ್ಸ್ ಅವರ ಅಬ್ಬರದ ಆಟ ಆಂಝಾರೆಂಕಾ ಅವರ ಬುದ್ದಿವಂತಿಕೆಯ ಆಟದ ಮುಂದೆ ಮಂಕಾಗಿ ಹೋಯ್ತು.
ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ವಿಕ್ಟೋರಿಯಾ ಆಝಾರೆಂಕಾ ಅವರು ಜಪಾನ್ ನ ನೌಮಿ ಒಸಾಕ ವಿರುದ್ದ ಹೋರಾಟ ನಡೆಸಲಿದ್ದಾರೆ.
https://youtu.be/pBfvuudmGeM