ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ (CM) ಮತ್ತು KPCC ಅಧ್ಯಕ್ಷ ಸ್ಥಾನಕ್ಕಾಗಿ ವೇಟಿಂಗ್ ಲಿಸ್ಟ್‌ನಲ್ಲಿ ಇದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಜೆಡಿಎಸ್ (JDS) ಶಾಸಕರ ಬೆಂಬಲ ನಮ್ಮ ಪಕ್ಷಕ್ಕೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಪಕ್ಷದ ಗಾಡಿ ಫುಲ್ ಆಗಿದೆ, JDS ಸಪೋರ್ಟ್ ಬೇಕಾಗಿಲ್ಲ ಎಂದಿದ್ದಾರೆ.
CM ಆಗಲು JDS ಬೆಂಬಲ ಕೇಳಲಿಲ್ಲ
ರಾಜಕೀಯ ಪರಿಸ್ಥಿತಿ ಹಿನ್ನಲೆಯಲ್ಲಿ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿಯಾಗಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಈ ವಿಷಯದ ಬಗ್ಗೆ GT ದೇವೇಗೌಡ ಅವರು ಜಾರಕಿಹೊಳಿ JDS ಬೆಂಬಲಕ್ಕಾಗಿ ಭೇಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಕ್ಕೆ ಉತ್ತರಿಸುತ್ತಾ, ಭೂತಯ್ಯನ ಮಗ ಅಯ್ಯು ಚಿತ್ರದ ಸನ್ನಿವೇಶವೊಂದನ್ನು ವಿವರಿಸಲು ನಾನು ಹೋಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ನಿರ್ಧಾರ, ನಾವೂ ಕಾಯ್ತೀವಿ
ನಾಲ್ಕು ದಿನಗಳ ದೆಹಲಿ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ ಜಾರಕಿಹೊಳಿ, CM ಮತ್ತು KPCC ಅಧ್ಯಕ್ಷ ಸ್ಥಾನಗಳ ಬಗ್ಗೆ ದೆಹಲಿಯಲ್ಲಿಯೇ ತೀರ್ಮಾನ ಆಗುತ್ತದೆ. ನಾವು ಅಲ್ಲಿಯೇ ಕಾಯ್ತೇವೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರಕ್ಕೆ ಯಾವುದೇ ಅಸ್ತಿರತೆ ಇಲ್ಲ. JDS ಬೆಂಬಲ ಬೇಡ. ನಮ್ಮ ಪಕ್ಷದ ಗಾಡಿ ಈಗಾಗಲೇ ತುಂಬಿ ಹೋಗಿದೆ ಎಂದು ಮತ್ತೊಮ್ಮೆ ಪುನರಾವರ್ತಿಸಿದ್ದಾರೆ.