ADVERTISEMENT
Monday, March 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕರ್ತವ್ಯದ ನಡುವೆ ಮಾನವೀಯತೆ ಮೆರೆದ ನಮ್ಮ ‌ಪೊಲೀಸರು

admin by admin
April 5, 2020
in Newsbeat, Politics, Samagra karnataka
Share on FacebookShare on TwitterShare on WhatsappShare on Telegram

Related posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

March 29, 2026
ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

March 29, 2026

ಕೊರೋನ ಕರಿಛಾಯೆ ಇಡೀ ಜಗತ್ತನ್ನೇ ಆವರಿಸಿದ್ದು, ಇದಕ್ಕೆ ನಮ್ಮ ದೇಶ ಕೂಡ ಹೊರತಾಗಿಲ್ಲ. ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಜಾರಿಯಲ್ಲಿದ್ದರೂ, ದಿನನಿತ್ಯ ಕೊರೊನಾ ಸೋಂಕಿತರ ಸರಪಣಿ ಬೆಳೆಯುತ್ತಾ ಸಾಗುತ್ತಿದೆ. ಸಾರ್ವಜನಿಕರನ್ನು ಗುಂಪು ಸೇರಬೇಡಿ, ಓಡಾಟವನ್ನು ತಪ್ಪಿಸಿ ಎಂದು ಅದೆಷ್ಟೋ ಮನವಿ ಮಾಡಿದರೂ ಜನರು ಹೊರಗೆ ಅಡ್ಡಾದಿಡ್ಡಿ ತಿರುಗುತ್ತಿದ್ದಾರೆ.ಪರಿಸ್ಥಿತಿಯ ಗಂಭೀರತೆಯನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರೊಂದಿಗೆ ದೇಶದ ಸುಭದ್ರತೆಗೆ ಹೆಣಗಾಡುತ್ತಿರುವ ವರ್ಗ ಪೊಲೀಸರದ್ದು. ಹಗಲು ರಾತ್ರಿಯೆನ್ನದೆ, ಬಿಸಿಲು ಮಳೆ ಎನ್ನದೆ, ರಸ್ತೆ ಬದಿಯಲ್ಲೇ ತಿನ್ನುತ್ತಾ, ಯುದ್ಧದೋಪಾದಿಯಲ್ಲಿ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿರುವ ಇವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಮನೆಯೊಳಗೆ ಇರಿ, ಹೊರಗೆ ಬರಬೇಡಿ ಎಂಬ ಬೇಡಿಕೆ ಇಡುವ ಪೊಲೀಸರು ತಮ್ಮ ಜೀವದ ಭೀತಿಯನ್ನು ತ್ಯಜಿಸಿ ಬೀದಿಗಿಳಿದಿದ್ದಾರೆ. ವಿನಯದಿಂದ ಸಹಕರಿಸುವಂತೆ ಹೇಳಿದ್ದನ್ನು ಕಿವಿಗೆ ಹಾಕಿಕೊಳ್ಳದೆ ರೋಗಾಣುವನ್ನು ಹಾಸ್ಯ ಮಾಡುತ್ತಾ ಟಿಕ್-ಟಾಕ್ ನಲ್ಲಿ, ವೀಡಿಯೋಗಳಲ್ಲಿ ಕೆಲವು ಹೊಣೆಗೇಡಿ ಜನರು ತಮ್ಮ ಎಡಬಿಡಂಗಿತನವನ್ನು ಪ್ರದರ್ಶಿಸುತ್ತಿದ್ದಾರೆ.
ತಮ್ಮ ಎಚ್ಚರಿಕೆಗೂ ಕಿವಿಗೊಡದ ಜನರಿಗೆ ವಿವಿಧ ರೀತಿಯಲ್ಲಿ ಜವಾಬ್ದಾರಿ ಹುಟ್ಟಿಸುವ ಕಾರ್ಯದಲ್ಲಿ, ಕೊರೊನಾ ಸೋಂಕಿನ ಬಗ್ಗೆ ತಿಳಿ ಹೇಳುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಕೊರೋನಾ ಮುಖವಾಡ ತೊಟ್ಟು, ಹಾಡು ಹೇಳಿ ಜನರಲ್ಲಿ ಜಾಗೃತಿ ಮೂಡಿಸುವುದನ್ನು ನೋಡಿದ್ದೇವೆ.

ಮತಿಗೇಡಿಗಳಂತೆ ವರ್ತಿಸುವ ಜನರ ನಡುವೆ, ತಮ್ಮ ನೆಮ್ಮದಿ, ಸಂಸಾರವನ್ನು ದೂರವಿಟ್ಟು ಸೇವೆ ಸಲ್ಲಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಇವರೆಲ್ಲರೂ ತಾನುರಿದು ಜಗಕ್ಕೆ ಬೆಳಕನ್ನೀಯುವ ದೀಪಗಳು. ಜಗತ್ತೇ ಎದುರಿಸುತ್ತಿರುವ ಇಂತಹ ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಅನೇಕ ಪೊಲೀಸರು ತಮ್ಮ ಕರ್ತವ್ಯದ ಜೊತೆ ಮಾನವೀಯತೆಯ‌ ಮೌಲ್ಯವನ್ನು ತೋರಿಸಿದ್ದಾರೆ. ‌ಅವರಲ್ಲಿ ಒಬ್ಬರು ವಿವೇಕನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಫೀಕ್ ಕೆಲಿಂಜಾ.

ಲಾಕ್ ಡೌನ್ ಘೋಷಣೆಯಾದ ನಂತರ ದೆಹಲಿಯಲ್ಲಿದ್ದ ಉತ್ತರ ಪ್ರದೇಶದ ದಿನಗೂಲಿ ನೌಕರರು ನಡಿಗೆಯ ಮೂಲಕ ರಾತ್ರೋರಾತ್ರಿ ತಮ್ಮೂರಿಗೆ ಪಯಣ ಬೆಳೆಸಿ ಉಂಟಾದ ಗೊಂದಲದ ಬಗ್ಗೆಗಿನ ವರದಿಯನ್ನು ಪತ್ರಿಕೆಯಲ್ಲಿ ಓದಿದ ಇನ್ಸ್‌ಪೆಕ್ಟರ್ ರಫೀಕ್ ಕೆಲಿಂಜಾ ತನ್ನ ವ್ಯಾಪ್ತಿಯಡಿಯಲ್ಲಿ ಬರುವ‌ ಹೊರರಾಜ್ಯದ ಕೂಲಿ ಕಾರ್ಮಿಕರ ಬಗ್ಗೆ ಚಿಂತಿತರಾದರು. ಕೂಡಲೇ ಕಾರ್ಯ ಪ್ರವೃತರಾದ ಅವರು ತಮ್ಮ ನಾಯಕತ್ವದಲ್ಲಿ ಲಾಕ್ ಡೌನ್ ನಿಂದ ಸರಿಯಾದ ಊಟವಿಲ್ಲದೆ ಕಷ್ಟಕ್ಕೆ ಒಳಗಾಗಿದ್ದ ಸುಮಾರು 385 ವಲಸೆ ಕುಟುಂಬಗಳನ್ನು ಗುರುತಿಸಿದರು. ತನ್ನ ಒತ್ತಡದ ಕೆಲಸದ ನಡುವೆಯೂ ಹತ್ತಿರದ ಅನೇಕ ದಾನಿಗಳ, ಎನ್. ಜಿ.ಒಗಳ ಸಹಾಯ ಪಡೆದು ಹಸಿದ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದರು. ಅಷ್ಟೇ ಅಲ್ಲ, ತಮ್ಮ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಸೇರಿ, 500ಕ್ಕೂ ಹೆಚ್ಚಿನ ಬಡವರಿಗೆ, ಭಿಕ್ಷುಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.
ಈಗಾಗಲೇ ಕಾರ್ಮಿಕ ಸಚಿವರಿಗೆ ಮಾಹಿತಿ ನೀಡಿ ಸರಕಾರದ ಸಹಾಯ ಹಸ್ತಕ್ಕೆ ಕೈ ಜೋಡಿಸಿರುವ ಇವರ ಮನವಿಗೆ ಆದಷ್ಟು ಬೇಗ ಸರಕಾರ ಸ್ಪಂದಿಸಿ ಬಡ ಕೂಲಿ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ.

http://saakshatv.com/wp-content/uploads/2020/04/Video.Guru_20200404_222054665.mp4

ಇವರೆಲ್ಲರ ಸೇವೆಯನ್ನು ದಯವಿಟ್ಟು ಮನೆಯಲ್ಲಿಯೇ ಇದ್ದು ಎಲ್ಲರೂ ಕೊರೊನಾವನ್ನು ಒಟ್ಟುಗೂಡಿ ಹಿಮ್ಮೆಟ್ಟಿಸುವ ಮೂಲಕ ಗೌರವಿಸೋಣ. ಕೊರೊನಾ ವಿರುದ್ಧ ಕಾರ್ಯನಿರತರಾಗಿರುವ ವೈದ್ಯರು, ಪೊಲೀಸರು, ಸ್ವಚ್ಚತಾ ಕಾರ್ಮಿಕರು ಎಲ್ಲರೂ ಒಂದೇ ನಾಣ್ಯದ ಎರಡು ಮುಖಗಳು. ಒಮ್ಮೆ ನಾವೆಲ್ಲರೂ ನಮಗಾಗಿ ಜೀವವನ್ನು ಒತ್ತೆ ಇಟ್ಟು ಸೇವೆ ಸಲ್ಲಿಸುತ್ತಿರುವ ಅವರ ಸ್ಥಾನದಲ್ಲಿ ನಿಂತು ಯೋಚಿಸೋಣ. ಅವರ ಕುಟುಂಬ ಅವರ ಮನೆ ಅವರಿಗಾಗಿ ಮಿಡಿಯುತ್ತಾ ಇದೆ. ಅದಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರಕಾರದ, ಇಲಾಖೆಯ ಸೂಚನೆಗಳನ್ನು ಪಾಲಿಸುತ್ತಾ ಕೊರೊನಾ ವಿರುದ್ಧ ಜಯ ಸಾಧಿಸೋಣ.

Tags: #AShivaramHebbar#bengalore#cmbsy#coronaindia#coronakarnataka#healthministry#IndiaFightsCorona#karnatakapolice#labourministerkarnataka#lockdownindia#nammakaravali#viveknagarpolicestationMangalore
ShareTweetSendShare
Join us on:

Related Posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

by Shwetha
March 29, 2026
0

ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

by Shwetha
March 29, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಹಾಗೂ ಇಸ್ರೇಲ್ ಪ್ರವಾಸದ ಕುರಿತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್...

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ –  ಸುರೇಶ್ ಕುಮಾರ್

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ – ಸುರೇಶ್ ಕುಮಾರ್

by Shwetha
March 29, 2026
0

ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಆತಂಕ ಹಾಗೂ ಶ್ರದ್ಧೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುತ್ತಿರುವಾಗಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತರಾತುರಿಯ ದಿಢೀರ್...

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ  : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

by Shwetha
March 29, 2026
0

ಕಣದಿಂದ ಹಿಂದೆ ಸರಿಯುವಂತೆ ಹೇಳಲು ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ...

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

by Shwetha
March 29, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ನೇರಾನೇರ ಸವಾಲುಗಳ ಅಖಾಡವಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram