Queen Funeral: ಸೆ.19 ರಂದು ರಾಣಿ ಎಲಿಜಬೆತ್ ಅಂತ್ಯಕ್ರಿಯೆ – ಚಿತ್ರಮಂದಿರಗಳಲ್ಲಿ ಪ್ರಸಾರ
ಬ್ರಿಟನ್‌ನ ದಿವಂಗತ ರಾಣಿ ಎಲಿಜಬೆತ್ II ರ ಸರ್ಕಾರಿ ಅಂತ್ಯಕ್ರಿಯೆ ಸೆಪ್ಟೆಂಬರ್ 19 ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಡೆಯಲಿದೆ. ಬ್ರಿಟಿಷ್ ಸರ್ಕಾರವು ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯನ್ನ ಬ್ರಿಟನ್ನಿದ್ಯಂತ ಸುಮಾರು 125 ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಸಮಾರಂಭವನ್ನು ವೀಕ್ಷಿಸಲು ಉದ್ಯಾನವನಗಳು, ಸರ್ಕಲ್ ಗಳು ಮತ್ತು ಚರ್ಚ್‌ಗಳಲ್ಲಿ ದೊಡ್ಡ ಪರದೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.
ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿನ ಅಂತ್ಯಕ್ರಿಯೆಗಳು ಮತ್ತು ಲಂಡನ್ ನಲ್ಲಿ ನಡೆಯುವ ಮೆರವಣಿಗೆಗಳನ್ನು ಬಿಬಿಸಿ, ಐಟಿವಿ ಮತ್ತು ಸ್ಕೈ ಟೆಲಿವಿಷನ್‌ನಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ಬ್ರಿಟನ್‌ನ ಸಂಸ್ಕೃತಿ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ರಾಜಮನೆತನದ ಸದಸ್ಯರು ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಣಿ ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು. ಆಕೆಗೆ 96 ವರ್ಷ ವಯಸ್ಸಾಗಿತ್ತು.
ಎಲಿಜಬೆತ್ ಅವರ ಶವಪೆಟ್ಟಿಗೆಗೆ ಗೌರವ ಸಲ್ಲಿಸಲು ಲಕ್ಷಾಂತರ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಸಂಸತ್ತಿನ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿಯ ಶವಪೆಟ್ಟಿಗೆ ಇರಿಸಲಾಗಿದೆ.
ರಾಣಿ ಎಲಿಜಬೆತ್ II ರ ಎಲ್ಲಾ ಎಂಟು ಮೊಮ್ಮಕ್ಕಳು ಶನಿವಾರ ಅವರ ಶವಪೆಟ್ಟಿಗೆಯ ಸುತ್ತಲೂ ಹಾಜರಿದ್ದರು. ಶವಪೆಟ್ಟಿಗೆಯ ‘ಲಿಂಗ್-ಇನ್-ಸ್ಟೇಟ್’ ಸಂಪ್ರದಾಯದ ಸಂದರ್ಭದಲ್ಲಿ ಹಾಜರಿದ್ದವರೆಲ್ಲರೂ ದಿವಂಗತ ರಾಣಿಗೆ ಗೌರವ ಸಲ್ಲಿಸಿದರು. ಇದರೊಂದಿಗೆ ರಾತ್ರಿಯ ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಜನ ರಾಣಿಯ ಅಂತಿಮ ದರ್ಶನ ಪಡೆಯಲು ಲಂಡನ್‌ಗೆ ಆಗಮಿಸುತ್ತಿದ್ದಾರೆ.
Over 100 British Cinemas, Big City Screens To Show Queen Elizabeth Ii Funeral