ದೇಶದಲ್ಲಿ ಹೊಸದಾಗಿ 2.38 ಲಕ್ಷ ಕೊರೊನಾ ಪ್ರಕರಣಗಳು ಪತ್ತೆ
ನವದೆಹಲಿ: ದೇಶದಲ್ಲಿ ಮಂಗಳವಾರ 2.38 ಲಕ್ಷ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 17,36,628 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಿಳಿಸಿದೆ.
ಅಲ್ಲದೇ ಕೊರೊನಾ ರೂಪಾಂತರಿ ಓಮಿಕ್ರಾನ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 8,891 ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 1,57,421 ಚೇತರಿಸಿಕೊಂಡಡಿದ್ದಾರೆ. ಇದರೊಂದಿಗೆ ಚೇತರಿಕೆ 3,53,94,882 ಕ್ಕೆ ಏರಿದೆ. ಇದರಿಂದ ಚೇತರಿಕೆಯ ಪ್ರಮಾಣವು 94.09 ಪ್ರತಿಶತದಷ್ಟಾಗಿದೆ. ಸೋಮವಾರದಿಂದ ಒಮಿಕ್ರಾನ್ ಪ್ರಕರಣಗಳಲ್ಲಿ 8.31% ಹೆಚ್ಚಳವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ 230 ದಿನಗಳಲ್ಲೇ, ಮೊದಲ ಬಾರಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳು 17,36,628 ಪತ್ತೆಯಾಗಿವೆ, ಕಳೆದ 24 ಗಂಟೆಗಳಲ್ಲಿ 310 ಜನ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 4,86,761 ಕ್ಕೆ ಏರಿದೆ, ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 37.62 ಮಿಲಿಯನ್ ತಲುಪಿದೆ.








