ಕೋಲಾರದಲ್ಲಿ 250ಕ್ಕೂ ಹೆಚ್ಚು ಬೈಕ್, 10 ಕಾರು ವಶಕ್ಕೆ Kolar
ಕೋಲಾರ : ಚಿನ್ನದನಾಡು ಕೋಲಾರದಲ್ಲಿ ಲಾಕ್ ಡೌನ್ ನಿಯಮಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ.
ಪೊಲೀಸ್ರು ನಗರದಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಈ ಮಧ್ಯೆ ಜಿಲ್ಲೆಯ ಮಾಲೂರಿನಲ್ಲಿ ನಿನ್ನೆ ಒಂದೇ ದಿನ 250ಕ್ಕೂ ಹೆಚ್ಚು ಬೈಕ್, 10 ಕಾರು ವಶಕ್ಕೆ ಪಡೆಯಲಾಗಿದೆ.
ಇನ್ನು ಇವತ್ತು ಕೋಲಾರ ನಗರದಲ್ಲಿ ಲಾಕ್ ಡೌನ್ 2ನೇ ದಿನದಲ್ಲಿ ಜನರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಕೋಲಾರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.