37 ಕೋಟಿ ದಾಟಿದ ಕೋವಿಡ್ -19 ಲಸಿಕೆ ಪಡೆದವರ ಸಂಖ್ಯೆ – ಕೇಂದ್ರ ಆರೋಗ್ಯ ಸಚಿವಾಲಯ

1 min read
vaccine doses

37 ಕೋಟಿ ದಾಟಿದ ಕೋವಿಡ್ -19 ಲಸಿಕೆ ಪಡೆದವರ ಸಂಖ್ಯೆ – ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ನೀಡಿರುವ ಕೋವಿಡ್ -19 ಲಸಿಕೆ ಪ್ರಮಾಣವು 37 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಈ ಪೈಕಿ 27.86 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಪ್ರಮಾಣವನ್ನು ಶುಕ್ರವಾರ ನೀಡಲಾಗಿದೆ.

18 – 44 ವರ್ಷದೊಳಗಿನ 13,28,636 ಜನರಿಗೆ ಲಸಿಕೆಯ ಮೊದಲ ಡೋಸ್‌ ಮತ್ತು 1,24,570 ಜನರಿಗೆ ಲಸಿಕೆಯ ಎರಡನೇ ಡೋಸ್‌ ಶುಕ್ರವಾರ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಒಟ್ಟಾರೆಯಾಗಿ, ವ್ಯಾಕ್ಸಿನೇಷನ್ ಡ್ರೈವ್ ನ ಹಂತ -3 ಪ್ರಾರಂಭವಾದಾಗಿನಿಂದ 18-44 ವಯಸ್ಸಿನ 10,98,62,585 ಜನರು ತಮ್ಮ ಮೊದಲ ಡೋಸ್ ಮತ್ತು 35,08,932 ಜನರು ತಮ್ಮ ಎರಡನೇ ಡೋಸ್ ಅನ್ನು ಪಡೆದಿದ್ದಾರೆ.

ಎಂಟು ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಬಿಹಾರ, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದ 18-44 ವಯೋಮಾನದ 50 ಲಕ್ಷಕ್ಕೂ ಹೆಚ್ಚು ಜನರಿಗೆ ಮೊದಲ ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ.

ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ದೆಹಲಿ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ 18-44 ವರ್ಷದ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆಯ ಮೊದಲ‌ ಡೋಸ್ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#vaccinedoses

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd