ಬೆಂಗಳೂರಿಗೆ 6 ಕಂಟೇನರ್ ಗಳಲ್ಲಿ ಬಂತು ‘ಆಕ್ಸಿಜನ್’ Oxygen
ಬೆಂಗಳೂರು : ನಿನ್ನೆ ಬೆಳಗ್ಗೆ ಜಮ್ಶೆಡ್ಪುರದಿಂದ ಆಕ್ಸಿಜನ್ ಕಂಟೇನರ್ ಗಳನ್ನು ಹೊತ್ತು ಹೊರಟಿದ್ದ ರೈಲು ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದೆ.
ನಗರದ ವೈಟ್ ಫೀಲ್ಡ್ ನಲ್ಲಿರುವ ಡಿಪೋಗೆ ರೈಲಿನಲ್ಲಿ 6 ಮೆಡಿಕಲ್ ಆಕ್ಸಿಜನ್ ಕಂಟೇನರ್ಗಳು ಬಂದಿದೆ.
ತಲಾ 20 ಟನ್ ಆಕ್ಸಿಜನ್ ಇರುವ 6 ಕಂಟೇನರ್ ಗಳನ್ನು ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ತರಲಾಗಿದೆ.
ಆಕ್ಸಿಜನ್ ಕಾರ್ಪೊರೇಷನ್ ಆಫ್ ಇಂಡಿಯಾದ ಡಿಪೋಗೆ ಆಕ್ಸಿಜನ್ ಕಂಟೇನರ್ ಗಳನ್ನು ಅನ್ ಲೋಡ್ ಮಾಡಲಾಗ್ತಿದೆ.
ಅಲ್ಲಿಂದ ಸಮೀಪದ ಆಕ್ಸಿಜನ್ ಪ್ಲಾಂಟ್ ಗಳಿಗೆ ಸಾಗಿಸಿ ರಾಜ್ಯದ ವಿವಿಧೆಡೆಗೆ ಪೂರೈಕೆ ಮಾಡಲಾಗುತ್ತದೆ ಎನ್ನಲಾಗಿದೆ.
ರೈಲ್ವೆ ಇಲಾಖೆ ಮೊದಲ ಬಾರಿಗೆ ಗ್ರೀನ್ ಕಾರಿಡಾರ್ ನಲ್ಲಿ ಬೆಂಗಳೂರಿಗೆ ಆಕ್ಸಿಜನ್ ಪೂರೈಕೆ ಮಾಡಿದ್ದು, ನಾಳೆ ಮತ್ತೆ 6 ಕಂಟೇನರ್ ಗಳು ಬರಲಿವೆ.