ಆರ್ ಬಿಐ ಪ್ರಮುಖ ನಿರ್ಧಾರ .. ವಿದೇಶದಲ್ಲಿ ಯುಪಿಐ ಪೇಮೆಂಟ್ಸ್

1 min read
india saaksha tv

ಆರ್ ಬಿಐ ಪ್ರಮುಖ ನಿರ್ಧಾರ .. ವಿದೇಶದಲ್ಲಿ ಯುಪಿಐ ಪೇಮೆಂಟ್ಸ್ india saaksha tv

ಆನ್‍ಲೈನ್ ಪಾವತಿಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ವಿದೇಶದಲ್ಲಿ ಜನರು ಆನ್‍ಲೈನ್‍ನಲ್ಲಿ ಹಣ ಕಳುಹಿಸಲು ಸಾಧ್ಯವಾಗುವಂತೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ.

ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಸೌಲಭ್ಯ 2016 ರಲ್ಲಿ ಲಭ್ಯವಾಗಿದೆ.

ಆರಂಭದಲ್ಲಿ ನಿಧಾನವಾಗಿದ್ದರೂ, ಈಗ ಯುಪಿಐ ಪಾವತಿ ಸರ್ವ ಸಾಧಾರಣವಾಗಿದೆ.

ಆದರೆ ವಿದೇಶದಲ್ಲಿರುವ ಜನರಿಗೆ ಹಣ ಕಳುಹಿಸುವುದು ತ್ರಾಸವಾಗುತ್ತಿತ್ತು.

india  saaksha tv

ಈ ತೊಂದರೆಗಳನ್ನು ನಿವಾರಿಸಲು ಆರ್‍ಬಿಐ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ಭಾರತ ಮತ್ತು ಸಿಂಗಾಪುರದ ನಡುವಿನ ಆನ್‍ಲೈನ್ ಪಾವತಿಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ನಡುವೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಇದು ಭಾರತದ ಬಳಕೆದಾರರಿಗೆ ಸಿಂಗಾಪುರದಲ್ಲಿ ಪೇ ನೌ ಬಳಕೆದಾರರೊಂದಿಗೆ ಸುಲಭವಾಗಿ ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸಲು ಸಾಧ್ಯವಾಗಿಸುತ್ತದೆ.

ಇದಕ್ಕೆ ಬೇಕಾದ ವ್ಯವಸ್ಥೆಗಳು ಭರದಿಂದ ಸಾಗುತ್ತಿವೆ. ಭಾರತ ಮತ್ತು ಸಿಂಗಾಪುರ ನಡುವಿನ ಯುಪಿಐ ಪಾವತಿ ನಿರ್ಧಾರ ಜುಲೈ 2022 ರಿಂದ ಜಾರಿಗೆ ಬರಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd