ಅಮೃತಸರ : ಮಹಾಮಾರಿ ಕಿಲ್ಲರ್ ಕೊರೊನಾ ವೈರಸ್ ಗೆ ಪದ್ಮಶ್ರೀ ಪುರಸ್ಕೃತ ಗಾಯಕ ನಿರ್ಮಲ್ ಸಿಂಗ್ ಖಾಲ್ಸಾ ಬಲಿಯಾಗಿದ್ದಾರೆ. ಪಂಜಾಬ್ ನ ಅಮೃತಸರದಲ್ಲಿ ನಿರ್ಮಲ್ ಸಿಂಗ್ ಖಾಲ್ಸಾ ಇಂದು ಮುಂಜಾನೆ 4:30ರ ವೇಳೆಗೆ ಮೃತಪಟ್ಟಿದ್ದಾರೆ. ಇವರಿಗೆ 62 ವರ್ಷ ವಯಸ್ಸಾಗಿದ್ದು, ನಿನ್ನೆಯಷ್ಟೇ ಕೊರೊನಾ ವೈರಸ್ ಸೋಂಕು ಇರೋದು ದೃಢಪಟ್ಟಿತ್ತು.
ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ನಿರ್ಮಲ್ ಸಿಂಗ್ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು, 2009ರಲ್ಲಿ ಇವರ ಕಲೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು.








