ಲಗೇಜ್ ಸಹಿತ ರೋಡಿಗೆ ಬಿದ್ರು.. ಪಾಕ್ ಕ್ರಿಕೆಟರ್ಸ್ ಗೆ ಘೋರ ಅವಮಾನ pak cricketers Saaksha tv
ಪಾಕಿಸ್ತಾನ ಕ್ರಿಕೆಟರ್ಸ್ ಗೆ ಘೋರ ಅವಮಾನ ನಡೆದಿದೆ. ಕ್ವಾಯಿಡ್ ಡ ಅಜಾಮ್ ಟ್ರೋಫಿ ಫೈನಲ್ ಭಾಗವಾಗಿ ಒಂದು ಫೈವ್ ಸ್ಟಾರ್ ಹೋಟೆಲ್ ನಲ್ಲಿದ್ದ ಆಟಗಾರರನ್ನು ಹೋಟೆಲ್ ಸಿಬ್ಬಂದಿ ಖಾಲಿ ಮಾಡಿಸಿದ್ದಾರೆ.
ಇದರಿಂದ ಲಾಗೇಜ್ ನೊಂದಿಗೆ ಆಟಗಾರರು ರೋಡಿಗೆ ಬಿದ್ದಿದ್ದಾರೆ. ಪಾಕಿಸ್ತಾನದ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಕ್ವಾಯಿಡ್ ಎ ಅಜಾಮ್ ಟ್ರೋಫಿ ಫೈನಲಿಸ್ಟ್ ಗಳಾಗಿದ್ದ ಫನ್ ಖುತ್ವಾ, ನಾರ್ತರನ್ ತಂಡಗಳು ಕ್ಲೋಬ್ ರಸ್ತೆಯಲ್ಲಿರುವ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದವು.
ಈ ಕ್ರಿಕೆಟರ್ಸ್ ಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಡಿಸೆಂಬರ್ 22 ವರೆಗೆ ಮಾತ್ರ ಹೋಟೆಲ್ ಬುಕ್ ಮಾಡಿತ್ತು. ಆ ನಂತರದ ಬುಕಿಂಗ್ ಗಾಗಿ ಪಿಸಿಬಿ ಅಡ್ವಾನ್ಸ್ ಕೊಟ್ಟಿರಲಿಲ್ಲ.
ಅದಾಗಿಯೂ ತಂಡದ ಸದಸ್ಯರು ಹೆಚ್ಚು ಮಂದಿ ಇದ್ದ ಕಾರಣ, ಈ ಮೊದಲಿನ ಬುಕ್ಕಿಂಗ್ ರದ್ದು ಮಾಡಿದ ಬಳಿಕ ಹೊಸ ಬುಕ್ಕಿಂಗ್ ಮಾಡುತ್ತೇವೆ ಎಂದು ಹೋಟೆಲ್ ಗೆ ಪಿಸಿಬಿ ತಿಳಿಸಿತ್ತಂತೆ.
ಆ ನಂತರ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹಾಗೂ ಹೋಟೆಲ್ ಮ್ಯಾನಜ್ಮೆಂಟ್ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ.
ಈ ಹಿನ್ನೆಲೆಯಲ್ಲಿ ಈ ಇಬ್ಬರ ಮಧ್ಯೆ ಯಾವುದೇ ಸಮನ್ವಯ ಇಲ್ಲದ ಕಾರಣವಾಗಿ ಆಟಗಾರರಿಗೆ ಸಮಸ್ಯೆ ಎದುರಾಗಿದೆ.
ಲಗೇಜ್ ನೊಂದಿಗೆ ರಸ್ತೆಗೆ ಬೀಳುವಂತೆ ಪರಿಸ್ಥಿತಿ ಎದುರಾಗಿದೆ.









