ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಇಮ್ರಾನ್ ಖಾನ್
ಇಸ್ಲಾಮಾಬಾದ್: ಶನಿವಾರ ತಡರಾತ್ರಿ ವಿಶ್ವಾಸಮತ ಗಳಿಸುವಲ್ಲಿ ವಿಫಲರಾದ ಇಮ್ರಾನ್ ಖಾನ್ ಅಧಿಕಾರದಿಂದ ಕೆಳಗಿಳಿದಿದ್ದಾರೆ.
ಅಧಿಕಾರ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸಿದ್ದ ಇಮ್ರಾನ್ ಖಾನ್ ಅವರು ಸೋತಿದ್ದಾರೆ. ಈ ಮೂಲಕ ಇಮ್ರಾನ್ ಖಾನ್ 4 ವರ್ಷಗಳ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಇಮ್ರಾನ್ ಖಾನ್ ಅವರು ಅವಿಶ್ವಾಸ ಮತದಲ್ಲಿ ಸೋತ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿದ್ದಾರೆ. ಸದನದಲ್ಲಿ ಹಾಜರಿದ್ದ ಪ್ರತಿಪಕ್ಷಗಳ 176 ಹಾಗೂ ಆಡಳಿತ ಪಕ್ಷದ 22 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು.
ವಿಶ್ವಾಸಮತ ಕಳೆದುಕೊಳ್ಳುತ್ತಿದ್ದಂತೆಯೇ ಇಮ್ರಾನ್ ಖಾನ್ ಅವರು ಪ್ರಧಾನಿ ಕಚೇರಿಯಿಂದ ನಿರ್ಗಮಿಸಿದರು. ನಾಳೆ ಹೊಸ ಪ್ರಧಾನಿ ಆಯ್ಕೆ ನಡೆಯಲಿದ್ದು, ಬಹುತೇಕ ಶಹಬಾಜ್ ಷರೀಫ್ ಮುಂದಿನ ಪ್ರಧಾನಿ ಆಗುವ ಸಾಧ್ಯತೆಗಳಿದೆ. ಇಮ್ರಾನ್ ಖಾನ್ ವಿರುದ್ಧ 174 ಮತಗಳು ಚಲಾವಣೆ ಆಗಿದೆ.
ಸರ್ಕಾರ ಪತನವಾಗುವುದು ಖಚಿತವಾಗುತ್ತಿದ್ದಂತೆಯೇ ದೇಶದ ವಿಮಾನ ನಿಲ್ದಾಣಗಳಲ್ಲಿ ಸೇನೆಯು ಕಟ್ಟೆಚ್ಚರ ವಹಿಸಿತು. ಯಾವೊಬ್ಬ ಅಧಿಕಾರಿಯೂ ದೇಶದಿಂದ ಹೊರಗೆ ಹೋಗುವಂತಿಲ್ಲ ಎಂಬ ಆದೇಶ ಹೊರಡಿಸಿತು.