ಭಾರತದ ಗಡಿಯೊಳಗೆ ಉಗ್ರರನ್ನು ನುಗ್ಗಿಸಲು ಪ್ರಯತ್ನಿಸುತ್ತಿರುವ ಪಾಕ್
ಹೊಸದಿಲ್ಲಿ, ಜುಲೈ 12: ಪಾಕಿಸ್ತಾನ ಭಾರತದ ಗಡಿಯೊಳಗೆ ಉಗ್ರರನ್ನು ನುಗ್ಗಿಸಲು ಸತತವಾಗಿ ಪ್ರಯತ್ನಿಸುತ್ತಿದ್ದು, ಈ ನಡುವೆ ಗಡಿ ನಿಯಂತ್ರಣ ರೇಖೆ ಬಳಿಯ ಲಾಂಚ್ ಪ್ಯಾಡ್ ನಲ್ಲಿ ಸುಮಾರು 200ರಿಂದ 300 ಉಗ್ರರು ಭಾರತದೊಳಕ್ಕೆ ನುಸುಳಲು ಹೊಂಚು ಹಾಕುತ್ತಿರುವುದಾಗಿ ಭಾರತೀಯ ಸೇನೆ ಶನಿವಾರ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇವರು ಪಾಕಿಸ್ತಾನಿ ಬೆಂಬಲಿತ ಉಗ್ರರಾಗಿದ್ದು ಭಾರತದ ಗಡಿಯೊಳಗೆ ನುಗ್ಗಲು ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ವರದಿ ಹೇಳಿದೆ. ಭಾರತೀಯ ಭದ್ರತಾ ಪಡೆಗಳು ಶನಿವಾರ ಬೆಳಗ್ಗೆ ನೌಗಾಮ್ ಸೆಕ್ಟರ್ ಬಳಿ ಗಡಿಯೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಅಷ್ಟೇ ಅಲ್ಲ ಆ ಇಬ್ಬರನ್ನೂ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದೆ.
ಸೇನಾ ಮೂಲಗಳು ತಿಳಿಸಿರುವ ಪ್ರಕಾರ ಗಡಿ ನಿಯಂತ್ರಣ ರೇಖೆ ಸಮೀಪದ ಲಾಂಚ್ ಪ್ಯಾಡ್ ನಲ್ಲಿ ಸುಮಾರು 250 ರಿಂದ 300 ಉಗ್ರರು ಅವಿತುಕೊಂಡಿರುವ ಶಂಕೆ ವ್ಯಕ್ತವಾಗಿದೆ.