PAK v ENG : ಟೆಸ್ಟ್ ಸರಣಿಯಿಂದ ಲಿವಿಂಗ್ ಸ್ಟೋನ್ ಔಟ್..!!
ಇಂಗ್ಲೆಂಡ್ ತಂಡ ಪ್ರಮುಖ ಆಲ್ರೌಂಡರ್ ಲಿಯಮ್ ಲಿವಿಂಗ್ಸ್ಟೋನ್ ಗಾಯದ ಸಮಸ್ಯೆಯಿಂದಾಗಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಪ್ರಸ್ತುತ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಹಿನ್ನೆಲೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಲಿಯಮ್ ಲಿವಿಂಗ್ಸ್ಟೋನ್, ಬಲ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸರಣಿಯ ಮುಂದಿನ ಟೆಸ್ಟ್ ಪಂದ್ಯಗಳಿಂದ ಲಿವಿಂಗ್ಸ್ಟೋನ್, ಹೊರಗುಳಿದಿದ್ದಾರೆ.
ಹೀಗಾಗಿ ಡಿ.6ರಂದು ತವರಿಗೆ ಹಿಂದಿರುಗಲಿರುವ ಆಲ್ರೌಂಡರ್, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಲಂಕ್ಶೈರ್ ವೈದ್ಯಕೀಯ ತಂಡದೊಂದಿಗೆ ರಿಹ್ಯಾಬಿಟೇಷನ್ ಪ್ರೋಸೆಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಲಿವಿಂಗ್ ಸ್ಟೋನ್ ಅವರು ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಬದಲಿ ಆಟಗಾರನ ಆಯ್ಕೆ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಇಂಗ್ಲೆಂಡ್ ತಂಡದ ಪ್ರಮುಖ ಆಲ್ರೌಂಡರ್ ಆಗಿರುವ 29 ವರ್ಷದ ಲಿವಿಂಗ್ಸ್ಟೋನ್, ಪ್ರಸ್ತುತ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
ಆದರೆ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಲಿವಿಂಗ್ಸ್ಟೋನ್ ಕೇವಲ 9 ರನ್ಗಳಿಗೆ ಔಟಾಗಿ ನಿರಾಸೆ ಅನುಭವಿಸಿದರು.
ಅಲ್ಲದೇ ಎರಡನೇ ದಿನದಂದು ಫಿಲ್ಡಿಂಗ್ ಮಾಡುವ ಸಂದರ್ಭದಲ್ಲಿ ಲಿವಿಂಗ್ಸ್ಟೋನ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು.
ಲಿವಿಂಗ್ಸ್ಟೋನ್ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡ ರೆಹಾನ್ ಅಹ್ಮದ್ ಹಾಗೂ ಮಾರ್ಕ್ ವುಡ್ ಅವರಲ್ಲಿ ಯಾರನ್ನ ತಂಡಕ್ಕೆ ಆಯ್ಕೆ ಮಾಡಲಿದೆ ಎಂದು ಕಾದು ನೋಡಬೇಕಿದೆ.
ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 9ರಂದು ಮುಸ್ತಾನ್ನಲ್ಲಿ ನಡೆಯಲಿದೆ.
PAK v ENG , test series , liam living stone out from league due to his injury