ಮಂಗಳೂರು: ದಿನಂಪ್ರತಿ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿರುವ ಬಿಜೆಪಿಗೆ ಕೊರೋನಾ ವೈರಸ್‌ನಂತೆ ಪಾಕಿಸ್ತಾನದ ವೈರಸ್ ತಗುಲಿದೆ. ಆ ವೈರಸ್‌ಗೆ ನಮ್ಮ ದೇಶದಲ್ಲಿ ಯಾವುದೇ ಔಷಧಿಯಿಲ್ಲ. ಇದನ್ನು ಸರಿ ಮಾಡಲು ಬಿಜೆಪಿಯವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಹೇಳಿದ್ದಾರೆ. ಮಂಗಳೂರಿನಲ್ಲಿ ಯತ್ನಾಳ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಿಜವಾಗಿ ಈ ರೀತಿ ಹೇಳಿಕೆ ನೀಡುವವರೇ ದೇಶ ದ್ರೋಹಿಗಳು”. ಗಾಂಧಿ ನಡೆಸಿದ ಸ್ವಾತಂತ್ರ ಹೋರಾಟವನ್ನು ಇವರು ಟೀಕೆ ಮಾಡುತ್ತಿದ್ದು ಇದು ಅವರ ಹಿಡನ್ ಅಜೆಂಡಾವಾಗಿದೆ” ಎಂದು ಹೇಳಿದರು.
ಇನ್ನು ಯತ್ನಾಳ್ ಈ ಹೇಳಿಕೆ ಬಗ್ಗೆ ಬಿಜೆಪಿಯ ನಿಲುವು ಯಾವುದು, ಈ ಕುರಿತಾಗಿ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು.ಹಿರಿಯ ಹೋರಾಟಗಾರರನ್ನು ಈ ರೀತಿಯಾಗಿ ಅವಹೇಳನ ಮಾಡುವುದು ಸರಿಯಲ್ಲ. ಇದು ಸ್ವಾತಂತ್ರ‍್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಯತ್ನಾಳ್ ವಿರುದ್ಧ ಖಾದರ್ ಕಿಡಿಕಾರಿದರು.
ಮಾಟ-ಮಂತ್ರ ಕೆಟ್ಟ ಶಕ್ತಿ ಕೆಟ್ಟದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ
ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ...








