ಮಂಗಳೂರು: ದಿನಂಪ್ರತಿ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿರುವ ಬಿಜೆಪಿಗೆ ಕೊರೋನಾ ವೈರಸ್ನಂತೆ ಪಾಕಿಸ್ತಾನದ ವೈರಸ್ ತಗುಲಿದೆ. ಆ ವೈರಸ್ಗೆ ನಮ್ಮ ದೇಶದಲ್ಲಿ ಯಾವುದೇ ಔಷಧಿಯಿಲ್ಲ. ಇದನ್ನು ಸರಿ ಮಾಡಲು ಬಿಜೆಪಿಯವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಹೇಳಿದ್ದಾರೆ. ಮಂಗಳೂರಿನಲ್ಲಿ ಯತ್ನಾಳ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಿಜವಾಗಿ ಈ ರೀತಿ ಹೇಳಿಕೆ ನೀಡುವವರೇ ದೇಶ ದ್ರೋಹಿಗಳು”. ಗಾಂಧಿ ನಡೆಸಿದ ಸ್ವಾತಂತ್ರ ಹೋರಾಟವನ್ನು ಇವರು ಟೀಕೆ ಮಾಡುತ್ತಿದ್ದು ಇದು ಅವರ ಹಿಡನ್ ಅಜೆಂಡಾವಾಗಿದೆ” ಎಂದು ಹೇಳಿದರು.
ಇನ್ನು ಯತ್ನಾಳ್ ಈ ಹೇಳಿಕೆ ಬಗ್ಗೆ ಬಿಜೆಪಿಯ ನಿಲುವು ಯಾವುದು, ಈ ಕುರಿತಾಗಿ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು.ಹಿರಿಯ ಹೋರಾಟಗಾರರನ್ನು ಈ ರೀತಿಯಾಗಿ ಅವಹೇಳನ ಮಾಡುವುದು ಸರಿಯಲ್ಲ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಯತ್ನಾಳ್ ವಿರುದ್ಧ ಖಾದರ್ ಕಿಡಿಕಾರಿದರು.
ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯಿಂದ ಅಂತಿಮ ಗಡುವು: ನವೆಂಬರ್ 10ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ 41 ಲಕ್ಷ ಮಂದಿಯ ರೇಷನ್ ಸೌಲಭ್ಯಕ್ಕೆ ಕುತ್ತು
ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಕಟ್ಟುನಿಟ್ಟಿನ ಎಚ್ಚರಿಕೆಯೊಂದನ್ನು ರವಾನಿಸಿದೆ. ರೇಷನ್ ಕಾರ್ಡ್ ಹೊಂದಿರುವ...








