ಶಮಿಯ ಟಾರ್ಗೆಟ್ ಹಿಂದೆ ಪಾಕ್ ಹಸ್ತ..!
ದುಬೈ : ಟಿ20 ವಿಶ್ವಕಪ್-2021 ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮುಗಿದು ದಿನಗಳು ಕಳೆದರೂ ಕೆಲವು ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಇನ್ನೂ ಹಾಟ್ ಟಾಪಿಕ್ ಆಗಿ ಓಡುತ್ತಿವೆ. ಇದೀಗ ಶಮಿ ಮೇಲಿನ ಟ್ರೋಲಿಂಗ್ಗೆ ಸಂಬಂಧಿಸಿದ ಕುತೂಹಲಕಾರಿ ವಿಷಯವೊಂದು ಹಾಟ್ ಟಾಪಿಕ್ ಆಗಿದೆ.
ವಿಶ್ವಕಪ್ ಅಂಗವಾಗಿ ಅಕ್ಟೋಬರ್ 24 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಪಂದ್ಯದಲ್ಲಿ ದಯನೀಯವಾಗಿ ವಿಫಲರಾದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ (3.5 ಓವರ್ಗಳಲ್ಲಿ 43) ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕಟುವಾದ ಪದಗಳಿಂದ ಟ್ರೋಲ್ ಮಾಡಲಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೂ ಕಾರಣವಾಗಿತ್ತು.
ಆದ್ರೆ ಇದೀಗ ಮೊಹ್ಮದ್ ಶಮಿಯನ್ನು ಟ್ರೋಲ್ ಮಾಡುವುದರ ಹಿಂದೆ ಪಾಕ್ ಕೈವಾಡ ಇದೆ ಎಂದು ತಿಳಿದುಬಂದಿದೆ. ಶಮಿಯ ಟ್ರೋಲಿಂಗ್ ಪಾಕಿಸ್ತಾನದಲ್ಲಿ ಹುಟ್ಟಿಕೊಂಡಿದೆ ಎಂದು ಬಹಿರಂಗವಾಗಿದೆ.
ಈ ಎಲ್ಲಾ ಟ್ರೋಲ್ಗಳು ಪಾಕಿಸ್ತಾನದವರಾಗಿದ್ದು, ಕೋಮು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಈ ಕೃತ್ಯಗಳನ್ನು ಎಸಗಿದ್ದಾರೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಹಲವಾರು ಇನ್ಸ್ ಸ್ಟಾಗ್ರಾಂ ಖಾತೆಗಳನ್ನು ಸಹ ಗುರುತಿಸಲಾಗಿದೆ.