ಪಿವಿಸಿ ಪೈಪ್‌ಗಳನ್ನು ಬಳಸಿ ಗಡಿಯುದ್ದಕ್ಕೂ ಜಮ್ಮುಕಾಶ್ಮೀರಕ್ಕೆ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನ
ಜಮ್ಮು, ಸೆಪ್ಟೆಂಬರ್21: ಆರ್ ಎಸ್ ಪುರಾ ಸೆಕ್ಟರ್‌ನಲ್ಲಿ ಬಿಎಸ್‌ಎಫ್ ಭಾನುವಾರ ಬೆಳಿಗ್ಗೆ 62 ಕೆಜಿ ಹೆರಾಯಿನ್ , ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಾಕ್-ಭಾರತ ಅಂತರರಾಷ್ಟ್ರೀಯ ಗಡಿಯಲ್ಲಿ (ಐಬಿ) ವಶಪಡಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 19 ಮತ್ತು 20 ರ ಮಧ್ಯರಾತ್ರಿಯಲ್ಲಿ, ಪಾಕಿಸ್ತಾನದ ಕಡೆಯಿಂದ ಗಡಿಯ ಮೂಲಕ ಭಾರತಕ್ಕೆ ನುಸುಳುವ ಪ್ರಯತ್ನ ಮಾಡಲಾಗಿದ್ದು, ಇದರ ಬಗ್ಗೆ ಮಾಹಿತಿ ಕಲೆ ಹಾಕಿದ ಬಿಎಸ್ಎಫ್ ಯೋಧರು ಅವುಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಎಫ್ ಇನ್ಸ್‌ಪೆಕ್ಟರ್ ಜನರಲ್, ಜಮ್ಮು ಫ್ರಾಂಟಿಯರ್, ಎನ್ ಎಸ್ ಜಮ್ವಾಲ್ ತಿಳಿಸಿದರು.
ಬಿಎಸ್ಎಫ್ ಪಡೆ ಅವರನ್ನು ಎದುರಿಸಿದಾಗ, ಕಳ್ಳಸಾಗಣೆದಾರರು ಗುಂಡು ಹಾರಿಸಿದರು. ಬಿಎಸ್ಎಫ್ ಪಡೆಗಳು ತಕ್ಷಣವೇ ಆತ್ಮರಕ್ಷಣೆಗೆ ಪ್ರತೀಕಾರ ತೀರಿಸಿಕೊಂಡರು. ಆದಾಗ್ಯೂ ಕತ್ತಲೆ ಮತ್ತು ದಟ್ಟವಾದ ಕಾಡಿನ ಲಾಭವನ್ನು ಪಡೆದುಕೊಂಡು ಅವರು ಪಾಕಿಸ್ತಾನದ ಕಡೆಗೆ ಪಲಾಯನ ಮಾಡುವಲ್ಲಿ ಯಶಸ್ವಿಯಾದರು ಎಂದು ಐಜಿ ಬಿಎಸ್ಎಫ್ ಹೇಳಿದರು.
ಭಾನುವಾರ ನಸುಕಿನ ವೇಳೆ ಬುಧ್ವಾರ್ ಗಡಿ ಹೊರಠಾಣೆ (ಬಿಒಪಿ) ಸುತ್ತಮುತ್ತ ಪರಿಶೀಲನೆ ಮಾಡಿದಾಗ, ಡ್ರಗ್ಸ್, ಕೆಲವು ಪತ್ರಿಕೆಗಳು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಅಲ್ಲಿ ಇರುವುದು ತಿಳಿದುಬಂದಿದೆ. ಇವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬಿಎಸ್ಎಫ್ ಹೇಳಿದೆ.
ಶೋಧ ಕಾರ್ಯಾಚರಣೆಯಲ್ಲಿ, 62 ಪ್ಯಾಕೆಟ್ ಹೆರಾಯಿನ್, ಎರಡು ಚೀನೀ ಪಿಸ್ತೂಲ್, ನಾಲ್ಕು ನಿಯತಕಾಲಿಕೆಗಳು ಮತ್ತು 9 ಎಂಎಂ ಮದ್ದುಗುಂಡುಗಳ 100 ಸುತ್ತುಗಳನ್ನು ಭಾರತದ ಕಡೆಯ ಐಬಿ ಬಳಿ ವಶಪಡಿಸಿಕೊಳ್ಳಲಾಗಿದೆ.
ಈ ಹಿಂದೆ ಪಂಜಾಬ್‌ನಲ್ಲಿ ಮಾದಕ ವಸ್ತುಗಳು ಮತ್ತು ಇತರ ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಇದೇ ರೀತಿಯ ತಂತ್ರವನ್ನು ಬಳಸಲಾಗುತ್ತಿತ್ತು. ಈಗ ಪಂಜಾಬ್‌ನಿಂದ ಮಾದಕ ವಸ್ತು ಸಾಗಿಸಲು ವಿಫಲವಾಗಿದ್ದು, ಜಮ್ಮು ಪ್ರದೇಶದ ಭಾರತ-ಪಾಕ್ ಗಡಿಯಲ್ಲಿರುವ ಇತರ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಬಳಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.
ಈ ಬಾರಿ ಪಾಕಿಸ್ತಾನದ ಸೈನ್ಯ ಗಡಿಯನ್ನು ದಾಟದೆ ಡ್ರಗ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆಗೆ ಪಿವಿಸಿ ನೀರಿನ ಪೈಪ್ ಅನ್ನು ಬಳಸಿದೆ. ಹೆರಾಯಿನ್ ಪ್ಯಾಕೆಟ್‌ಗಳನ್ನು ಪೈಪ್‌ನ ಒಂದು ಬದಿಯಿಂದ ಸೇರಿಸಲಾಗುತ್ತಿತ್ತು ಮತ್ತು ಬೇಲಿಯ ಇನ್ನೊಂದು ಬದಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ಆ ಪ್ಯಾಕೆಟ್‌ಗಳನ್ನು ಎಳೆಯುವ ಕೆಲಸವನ್ನು ವಹಿಸಲಾಗಿತ್ತು. ಈ ರೀತಿಯಾಗಿ ಅವರು ಗಡಿ ದಾಟದೆ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದರು. ಆದಾಗ್ಯೂ, ಜಾಗರೂಕ ಬಿಎಸ್ಎಫ್ ಸಿಬ್ಬಂದಿ ಪಾಕ್ ಕುಕೃತ್ಯವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ