Pakistan Economic Crisis : ಕತ್ತಲಲ್ಲಿ ಪಾಕಿಸ್ತಾನ – ವಿದ್ಯುತ್ ಕಡಿತ , ಜನರ ಪರದಾಟ
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ತೀರಾ ಹದಗೆಡುತ್ತಿದೆ. ಜನರು ಗೋದಿ ಹಿಟ್ಟಿನಂತಹ ಆಹಾರ ಪದಾರ್ಥಗಳಿಗೂ ಪರದಾಡುವಂತಹ ಸ್ಥಿತಿ ಇದೀಗ ಭಾರತದ ಬದ್ಧ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಬಂದೊದಗಿದೆ..
ಇತ್ತ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ವಿದ್ಯುತ್ ಸಮಸ್ಯೆಯೂ ಉಲ್ಭಣಿಸಿದೆ.. ಪಾಕಿಸ್ತಾನವು ಸೋಮವಾರ ರಾಷ್ಟ್ರೀಯ ವಿದ್ಯುತ್ ಕಡಿತಅನುಭವಿಸಿದೆ. ಇದರಿಂದ ಲಕ್ಷಾಂತರ ಜನರು ವಿದ್ಯುತ್ ಇಲ್ಲದೇ ಪರದಾಡಿದ್ದಾರೆ ಎಂದು ಪಾಕಿಸ್ತಾನ ಇಂಧನ ಸಚಿವಾಲಯ ತಿಳಿಸಿದೆ.
ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ವಿದ್ಯುತ್ ಕಡಿತವು ಭಾರೀ ಪರಿಣಾಮ ಬೀರಿದೆ. ವಿದ್ಯುತ್ ಅನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲು 12 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಎಂದು ಪಾಕಿಸ್ತಾನದ ವಿದ್ಯುತ್ ಸಚಿವರು ಹೇಳಿದ್ದಾರೆ.
Pakistan Economic Crisis , Power Cut , pakistan people in trouble