ಅಲೆಲೆಲೆ.. ಅಬ್ದುಲ್ ರಝಾಕ್ ಪ್ರಕಾರ… ಭಾರತೀಯ ಕ್ರಿಕೆಟಿಗರಿಗಿಂತ ಪಾಕ್ ಕ್ರಿಕೆಟಿಗರು ಪ್ರತಿಭಾವಂತರಂತೆ.. !#Abdul Razzaq # Pakistan #virat kohli #Babar Azam #team india
ಭಾರತದ ಏಳಿಗೆಯನ್ನು ನೆರೆಯ ದೇಶ ಪಾಕಿಸ್ತಾನ ಯಾವತ್ತೂ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ಕ್ರಿಕೆಟ್ ಕೂಡ ಹೊರತಲ್ಲ.
ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ್ದೇ ಮಾತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವನ್ನು ವಿಶ್ವದ ಮಹಾನ್ ಕ್ರಿಕೆಟಿಗರು ಕೊಂಡಾಡಿದ್ದಾರೆ.
ಅದ್ರಲ್ಲೂ ಭಾರತದ ಯುವ ಆಟಗಾರರ ಪ್ರತಿಭೆ ಮತ್ತು ಸಾಮಥ್ರ್ಯಗಳನ್ನು ಗುಣಗಾನ ಮಾಡಿದ್ದಾರೆ. ಇದು ಸಹಜವಾಗಿ ಪಾಕ್ನ ಕೆಲವು ಕ್ರಿಕೆಟಿಗರಿಗೆ ಮತ್ಸರವನ್ನುಂಟು ಮಾಡಿದೆ.
ಇತ್ತೀಚೆಗೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಮ್ ಉಲ್ ಹಕ್ ಅವರು ರಿಷಬ್ ಪಂತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಆದ್ರೆ ಅಬ್ದುಲ್ ರಝಾಕ್ ಅವರಿಗೆ ಟೀಮ್ ಇಂಡಿಯಾ ಆಟಗಾರರ ಯಶಸ್ಸನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ.
ಅಷ್ಟೇ ಅಲ್ಲ, ಭಾರತ ಮತ್ತು ಪಾಕ್ ಆಟಗಾರರ ನಡುವೆ ಹೋಲಿಕೆ ಮಾಡುವುದನ್ನು ಅಬ್ದುಲ್ ರಝಾಕ್ ಅವರು ಇಷ್ಟಪಡುವುದಿಲ್ಲ. ಯಾಕಂದ್ರೆ ಅವರ ಪ್ರಕಾರ ಭಾರತೀಯ ಕ್ರಿಕೆಟಿಗರಿಗಿಂತ ಪಾಕ್ ಕ್ರಿಕೆಟಿಗರು ಹೆಚ್ಚು ಪ್ರತಿಭಾವಂತರು ಅಂತ ಹೇಳ್ತಾರೆ.
ಮೊದಲು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಝಾಮ್ ನಡುವಿನ ಹೋಲಿಕೆ ಸರಿಯಾಗಿಲ್ಲ, ನೀವು ಭಾರತೀಯ ಮತ್ತು ಪಾಕ್ ಕ್ರಿಕೆಟಿಗರ ನಡುವೆ ಹೋಲಿಕೆ ಮಾಡಬೇಡಿ. ಯಾಕಂದ್ರೆ ಪಾಕ್ ಕ್ರಿಕೆಟಿಗರು ಹೆಚ್ಚು ಪ್ರತಿಭಾವನ್ವಿತರು. ಪಾಕ್ ಕ್ರಿಕೆಟ್ ನ ಇತಿಹಾಸವನ್ನು ಒಮ್ಮೆ ನೋಡಿ. ಮಹಮ್ಮದ್ ಯುಸೂಫ್, ಇಂಜಮಮ್ ಉಲ್ ಹಕ್, ಸಯ್ಯದ್ ಅನ್ವರ್, ಜಾವೇದ್ ಮಿಯಾಂದಾದ್, ಜಹೀರ್ ಅಬ್ಬಾಸ್, ಇಜಾಜ್ ಅಹಮ್ಮದ್ ಇವರನ್ನೆಲ್ಲಾ ಹೋಲಿಕೆ ಮಾಡಲು ಸಾಧ್ಯನಾ ಅಂತ ಅಬ್ದುಲ್ ರಝಾಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇತ್ತಿಚೆಗೆ ಪಾಕ್ ಆಟಗಾರ ಬಾಬರ್ ಅಝಾಮ್ ಅವರನ್ನು ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಝಾಕ್, ಇವರಿಬ್ಬರು ಭಿನ್ನ ಆಟಗಾರರು. ಇವರ ನಡುವೆ ಹೋಲಿಕೆ ಮಾಡಬೇಕಾದ್ರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಬೇಕು. ಆಗ ಇವರಿಬ್ಬರ ನಡುವೆ ಹೋಲಿಕೆ ಮಾಡಬಹುದು ಎಂದು ರಝಾಕ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಉತ್ತಮ ಆಟಗಾರ. ಪಾಕ್ ವಿರುದ್ಧ ಚೆನ್ನಾಗಿಯೇ ಪ್ರದರ್ಶನ ನೀಡಿದ್ದಾರೆ. ಆದ್ರೆ ಭಾರತೀಯರು ತಮ್ಮ ಕ್ರಿಕೆಟಿಗರನ್ನು ಪಾಕ್ ಆಟಗಾರರ ಜೊತೆ ಹೊಂದಾಣಿಕೆ ಮಾಡಬಾರದು ಎಂದು ಹೇಳಿದ್ದಾರೆ.
ಬಾಬರ್ ಅಝಾಮ್ ಅತ್ಯುತ್ತಮ ಆಟಗಾರ. ಆತ ನನ್ನ ಜೊತೆ ಸುಮಾರು ಆರು ವರ್ಷಗಳ ಕಾಲ ಆಡಿದ್ದಾನೆ. ಆತನ ಸಾಮಥ್ರ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾನೆ. ಸದ್ಯ ಆತ ನಂಬರ್ ವನ್ ಬ್ಯಾಟ್ಸ್ ಮೆನ್. ಆತ ಮುಂದೊಂದು ದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕ್ತಾನೆ ಅಂತ ಅಬ್ದುಲ್ ರಝಾಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.