ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿರ್ಗಮನ ಫಿಕ್ಸ್ !!! ಮಾರ್ಚ್ 25ಕ್ಕೆ ಅವಿಶ್ವಾಸ ನಿರ್ಣಯ
ಪಾಕಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಗೊಂದಲದ ನಡುವೆ ನವಾಜ್ ಷರೀಫ್ ಅವರ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪ್ರಧಾನಿ ಹುದ್ದೆಗೆ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದೆ. ವಿರೋಧ ಪಕ್ಷವಾದ ಪಿಎಂಎಲ್-ಎನ್ ಪಕ್ಷ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶಹಬಾಜ್ ಷರೀಫ್ ಅವರನ್ನು ಪ್ರಧಾನಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದೆ.
ಈ ಘೋಷಣೆಯ ನಂತರ, ಹಾಲಿ ಪ್ರಧಾನಿ ಇಮ್ರಾನ್ ಖಾನ್ ನಿರ್ಗಮನದ ಬಗ್ಗೆ ಊಹಾಪೋಹಗಳು ಇನ್ನಷ್ಟು ತೀವ್ರಗೊಂಡಿವೆ. ಶಹಬಾಜ್ ಷರೀಫ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಪಕ್ಷ ನಿರ್ಧರಿಸಿದೆ ಎಂದು ನವಾಜ್ ಷರೀಫ್ ಅವರ ಪುತ್ರಿ ಮತ್ತು ಪಿಎಂಎಲ್-ಎನ್ ಉಪಾಧ್ಯಕ್ಷೆ ಮರ್ಯಮ್ ನವಾಜ್ ಹೇಳಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ತರಲಾಗುತ್ತಿರುವ ಅವಿಶ್ವಾಸ ನಿರ್ಣಯ ಯಶಸ್ವಿಯಾಗುವ ಭರವಸೆಯನ್ನು ಮರ್ಯಮ್ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ಖಾನ್, ನಿಮ್ಮ ಆಟ ಮುಗಿದಿದೆ – ಮರ್ಯಮ್
ಇಮ್ರಾನ್ ಖಾನ್! ನಿನ್ನ ಆಟ ಮುಗಿಯಿತು. ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧಿಕೃತವಾಗಿ ಮುರಿದುಬಿದ್ದಿದೆ. ಆಟದಲ್ಲಿ ಸೋತಿರುವುದರಿಂದ ಈಗ ಯಾರೂ ರಕ್ಷಣೆಗೆ ಬರುವುದಿಲ್ಲ ಎಂಬುದು ಪ್ರಧಾನಿ ಇಮ್ರಾನ್‌ಗೆ ತಿಳಿದಿದೆ ಎಂದು ಮರ್ಯಮ್ ನವಾಜ್ ಹೇಳಿದ್ದಾರೆ. ತನ್ನ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ನಡೆದಿದೆ ಎಂದು ಇಮ್ರಾನ್ ಖಾನ್ ಭಾವಿಸಿದ್ದರೂ ಇಲ್ಲಿನ ನಾಗರಿಕರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಮರ್ಯಮ್ ನವಾಜ್ ಹೇಳಿದ್ದಾರೆ.
ಮಾರ್ಚ್ 25 ರಂದು ಇಮ್ರಾನ್ ವಿರುದ್ಧ ಅವಿಶ್ವಾಸ ನಿರ್ಣಯ
ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳ ನಾಯಕರು ಮಾರ್ಚ್ 25 ರಂದು ರಾಷ್ಟ್ರೀಯ ಅಸೆಂಬ್ಲಿಯ ಸಭೆಯನ್ನು ಕರೆದಿರುವುದರಿಂದ ಇಮ್ರಾನ್ ಖಾನ್ ಸರ್ಕಾರ ಕೆಟ್ಟ ಪರಿಸ್ಥಿಯನ್ನ ಎದುರಿಸುತ್ತಿದೆ. ಆರ್ಥಿಕತೆ ಮತ್ತು ವಿದೇಶಾಂಗ ನೀತಿಯ ತಪ್ಪು ನಿರ್ವಹಣೆಗೆ ವಿರೋಧ ಪಕ್ಷದ ನಾಯಕರು ಖಾನ್ ಅವರನ್ನ ದೂಷಿಸಿದ್ದಾರೆ. ಆದ್ದರಿಂದ, ಅವಿಶ್ವಾಸ ನಿರ್ಣಯ 2018 ರಲ್ಲಿ ಅಧಿಕಾರಕ್ಕೆ ಬಂದ ನಂತರ ಇಮ್ರಾನ್ ಖಾನ್‌ಗೆ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ, ಏಕೆಂದರೆ ಅವರ ಪಕ್ಷದೇ ಅನೇಕ ಸಂಸದರು ಇಮ್ರಾನ್ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ಒಬ್ಬ ಸಂಸದ ತನ್ನ ಪಕ್ಷದ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ, ಅಧಿಕಾರವನ್ನು ಕಳೆದುಕೊಳ್ಳಬಹುದು ಎಂದು ಪಾಕಿಸ್ತಾನದ ಕಾನೂನು ಹೇಳುತ್ತದೆ.
Pakistan: Imran Khan’s departure fixed! Nawaz Sharif’s party announced PM candidate