ಭಾರತದ 7 ಮೀನುಗಾರರನ್ನು ಅಪಹರಣ ಮಾಡಿದ ಪಾಕಿಸ್ತಾನ Saaksha Tv
ಗುಜರಾತ: ಭಾರತದ ಹಡಗು ಮತ್ತು ಜೊತೆಗೆ 7 ಜನ ಮೀನುಗಾರರನ್ನು ಪಾಕಿಸ್ತಾನ ಸಂಸ್ಥೆ ಅಪಹರಿಸಿರುವ ಘಟನೆ ಗುಜರಾತನ ದ್ವಾರಕಾ ಜಿಲ್ಲೆಯ ಓಖಾ ಬಂದರಿನಲ್ಲಿ ನಡೆದಿದೆ.
ಓಖಾ ಬಂದರಿಗೆ ಗುಜರಾತ್ನ ಹೆಚ್ಚಿನ ಸಂಖ್ಯೆ ಮೀನುಗಾರರು ಬರುತ್ತಾರೆ. ಹಾಗೇ ಓಖಾ ಬಂದರಿನಿಂದ ತುಳಸಿ ಮೈಯಾ ಎಂಬ ಬೋಟ್ ಜನವರಿ 18ರಂದು, ಓಖಾ ಸಮುದ್ರಕ್ಕೆ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿತ್ತು. ಇಂಜಿನ್ ವೈಫಲ್ಯದಿಂದ ಬೋಟ್ ಸಮುದ್ರದಲ್ಲಿ ಸಿಲುಕಿತ್ತು. ಆಗ ಜನವರಿ 28ರಂದು 7 ಮಂದಿಯನ್ನು ಪಾಕಿಸ್ತಾನದ ಸಂಸ್ಥೆಯೊಂದು ಅಪಹರಿಸಿದೆ.
ಈ ದೋಣಿ ಗಿರ್ ಸೋಮನಾಥ್ ಜಿಲ್ಲೆಯ ಮಂಗ್ರೋಲ್‌ನ ವತ್ಸಲ್ ಪ್ರೇಮ್‌ಜಿಭಾಯ್ ಥಾಪಾನಿಯಾ ಅವರಿಗೆ ಸೇರಿದ್ದಾಗಿದೆ. ಮೀನುಗಾರಿಕೆಗಾಗಿ ದೋಣಿ ಓಖಾಗೆ ಬಂದಿತ್ತು. ಶುಕ್ರವಾರ ಮಧ್ಯಾಹ್ನದಿಂದ ಮೀನುಗಾರರು ಸಂಪರ್ಕ ಕಳೆದುಕೊಂಡಿದ್ದರು. ಮಧ್ಯಾಹ್ನ ಕೊನೆಯದಾಗಿ ಮೀನುಗಾರರು, ದೋಣಿಯ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದರು.