ಆರ್‌ಎಸ್‌ಎಸ್ ಅನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಎಫ್‌ಎಟಿಎಫ್ ನ ಒತ್ತಾಯಿಸಿದ ಪಾಕಿಸ್ತಾನ
ಇಸ್ಲಾಮಾಬಾದ್, ಅಗಸ್ಟ್30: ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್) ಕಪ್ಪುಪಟ್ಟಿಗೆ ಸೇರಿಸುವಂತೆ ಪಾಕಿಸ್ತಾನವು ಅಂತರರಾಷ್ಟ್ರೀಯ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ನ (ಎಫ್‌ಎಟಿಎಫ್) ಒತ್ತಾಯಿಸಿದೆ. ಆರ್‌ಎಸ್‌ಎಸ್ ಭಯೋತ್ಪಾದಕ ಸಂಘಟನೆ ಎಂದು ಪಾಕಿಸ್ತಾನ ಆರೋಪಿಸಿದೆ.
ಪಾಕಿಸ್ತಾನ ಸಂಸತ್ತಿನ ಕಾಶ್ಮೀರ ಸಮಿತಿಯ ಅಧ್ಯಕ್ಷರಾದ ಶೆಹ್ರಿಯಾರ್ ಅಫ್ರಿದಿ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾಜಿ ಪ್ರಧಾನಿ ಸರ್ದಾರ್ ಅಟ್ಟಿಕ್ ಖಾನ್, ಭಾರತೀಯ ವಲಸೆಗಾರರಿಂದ ಧನಸಹಾಯ ಪಡೆದ ಭಯೋತ್ಪಾದಕ ಚಟುವಟಿಕೆಗಳ ಹಿಂದೆ ಆರ್‌ಎಸ್‌ಎಸ್ ಇದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ ಸಂಸತ್ತಿನಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನ ನಾಯಕರು ಈ ವಿಷಯ ತಿಳಿಸಿದರು.
ಆರ್‌ಎಸ್‌ಎಸ್ ಭಯೋತ್ಪಾದಕರು ಭಾರತದಾದ್ಯಂತ ಭಯೋತ್ಪಾದಕ ದಾಳಿ ನಡೆಸಿದ್ದು, 2006 ರಲ್ಲಿ ಮಾಲೆಗಾಂವ್ ಸ್ಫೋಟಗಳು, ಹೈದರಾಬಾದ್‌ನಲ್ಲಿ ಮೆಕ್ಕಾ ಮಸೀದಿ ಬಾಂಬ್ ಸ್ಫೋಟ, ಸಂಜೌತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟಗಳು ಮತ್ತು ಅಜ್ಮೀರ್ ಷರೀಫ್ ದರ್ಗಾ ಸ್ಫೋಟಗಳು ಸೇರಿದಂತೆ ಮುಸ್ಲಿಮರನ್ನು ಕೊಂದಿದ್ದಾರೆ ಎಂದು ಅವರು ಹೇಳಿದರು.
ಆರ್.ಎಸ್.ಎಸ್ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯ ವಲಸೆಗಾರರಿಂದ ಹಣವನ್ನು ಪಡೆಯುತ್ತಿದೆ ಮತ್ತು ಭಾರತ ಮತ್ತು ಕಾಶ್ಮೀರದ ಮುಸ್ಲಿಮರನ್ನು ಕೊಂದು ಹತ್ಯೆ ಮಾಡುತ್ತಿರುವ, ಹಿಂದೂ ಪ್ರಾಬಲ್ಯದ ಸಿದ್ಧಾಂತವನ್ನು ಹೊತ್ತಿರುವ ಭಯೋತ್ಪಾದಕ ಸಂಘಟನೆಗೆ ಹಣವನ್ನು ವರ್ಗಾಯಿಸಲು ಭಾರತೀಯ ದೂತಾವಾಸಗಳು ಅನುಕೂಲ ಮಾಡಿಕೊಡುತ್ತಿವೆ ಎಂದು ಅಫ್ರಿದಿ ಮತ್ತು ಖಾನ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್, ಹಿಂದೂ ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ-ಹಣಕಾಸು ವಿರುದ್ಧ ಹೋರಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಭಯ ನಾಯಕರು ಒತ್ತಾಯಿಸಿದರು.
ಈ ಫೆಬ್ರವರಿಯಲ್ಲಿ ಎಫ್‌ಎಟಿಎಫ್ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಉಳಿಸಿಕೊಂಡಿತ್ತು. ಭಯೋತ್ಪಾದಕರ ಹಣಕಾಸುದಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ವಿಫಲವಾಗಿದೆ ಎಂದು ಉಲ್ಲೇಖಿಸಿ ಎಫ್‌ಎಟಿಎಫ್ ನ ಅಂತರರಾಷ್ಟ್ರೀಯ ಸಹಕಾರ ವಿಮರ್ಶೆ ಲ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಉಳಿಸಿಕೊಳ್ಳಲು ಶಿಫಾರಸು ಮಾಡಿತ್ತು.