ಭಾರತವನ್ನ ಸೋಲಿಸಿದರೇ ಜಿಂಬಾಬ್ವೆಯವನನ್ನ ಮದುವೆಯಾಗುತ್ತೇನೆ – ಪಾಕಿಸ್ತಾನ ನಟಿ…
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮುಂದಿನ ಪಂದ್ಯದಲ್ಲ ಭಾರತವನ್ನ ಜಿಂಬಾಂಬೆ ಸೋಲಿಸಿದರೆ ನಾನು ಜಿಂಬಾಬ್ವೆ ವ್ಯಕ್ತಿಯನ್ನ ಮದುವೆಯಾಗುತ್ತೇನೆ ಎಂದು ಪಾಕಿಸ್ತಾನದ ನಟಿ ಟ್ವಿಟ್ ಮಾಡಿದ್ದಾರೆ.
ಟಿ ವಿಶ್ವಕಪ್ ಪಂದ್ಯವಳಿಯಲ್ಲಿ ಭಾರತದ ಮೊದಲಿಗೆ ಪಾಕಿಸ್ತಾನವನ್ನ ಸೋಲಿಸಿತ್ತು ಆನಂತರ ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಪಾಕಿಸ್ತಾನ ಸೆಮೀಸ್ ರೇಸ್ ನಿಂದ ಹೊರಹೋಗಲು ಭಾರತ ಪರೋಕ್ಷವಾಗಿ ಕಾರಣವಾಗಿತ್ತು.
ನಿನ್ನೆ ನಡೆದ ಪಂದ್ಯದಲ್ಲಿ ಬಾಂಗ್ಲಾ ದೇಶದ ವಿರುದ್ಧ ಭಾರತ ಗೆದ್ಧ ನಂತರ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ ಈ ಟ್ವೀಟ್ ಮಾಡಿದ್ದಾರೆ.
ಮುಂಬರುವ ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಬಗ್ಗೆ ಟ್ವೀಟ್ ಮಾಡಿರುವ ನಟಿ “ಭಾರತವನ್ನು “ಅದ್ಭುತವಾಗಿ” ಸೋಲಿಸಿದರೆ ತಾನು ಜಿಂಬಾಬ್ವೆಯ ವ್ಯಕ್ತಿಯನ್ನು ಮದುವೆಯಾಗುತ್ತೇನೆ ಎಂದು ಆಫರ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದೆ.
ನವೆಂಬರ್ 6, ಭಾನುವಾರ ವಿಶ್ವ ಟಿ20 ಚಾಂಪಿಯನ್ಶಿಪ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾತ್ರ ಪಾಕಿಸ್ತಾನ ನಟಿಯನ್ನ ಟ್ರೋಲ್ ಮಾಡುತ್ತಿವೆ.
Pakistani actress says “Will marry Zimbabwean guy” if they beat India in next T20 World Cup match