ಉಸಿರಾಟ ತೊಂದರೆ.. ಪಾಕ್ ಮಾಜಿ ಕ್ರಿಕೆಟಿಗ ಇಂಜಮಮ್ ಉಲ್ ಹಕ್ ಆಸ್ಪತ್ರೆಗೆ ದಾಖಲು..!

1 min read
Pakistan's former captain Inzamam-ul-Haq

ಉಸಿರಾಟ ತೊಂದರೆ.. ಪಾಕ್ ಮಾಜಿ ಕ್ರಿಕೆಟಿಗ ಇಂಜಮಮ್ ಉಲ್ ಹಕ್ ಆಸ್ಪತ್ರೆಗೆ ದಾಖಲು..!

Pakistan's former captain Inzamam-ul-Haq ಉಸಿರಾಟ ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಜಮಮ್ ಉಲ್ ಹಕ್ ಅವರು ಲಾಹೋರ್ ನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಲಾಹೋರ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಂಜಮಮ್ ಅವರಿಗೆ ಲಘು ಹೃದಯಾಘಾತವಾಗಿರಬಹುದು ಅನ್ನೋ ಕಾರಣಕ್ಕೆ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.
ಸದ್ಯ ಇಂಜಮಮ್ ಉಲ್ ಹಕ್ ಅವರ ಆರೋಗ್ಯ ಸ್ಥಿರವಾಗಿದೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಇಂಜಿಗೆ ಖ್ಯಾತ ವೈದ್ಯರಾದ ಪ್ರೊಫೆಸರ್ ಅಬ್ಬಾಸ್ ಕಾಜಿಮ್ ಚಿಕಿತ್ಸೆ ನೀಡುತ್ತಿದ್ದಾರೆ.
51ರ ಹರೆಯದ ಇಂಜಮಮ್ ಉಲ್ ಹಕ್ ಅವರು ಪಾಕ್ ಕ್ರಿಕೆಟ್ ತಂಡದ ಯಶಸ್ವಿ ನಾಯಕನಾಗಿದ್ದರು. ಅಲ್ಲದೆ 1992ರ ವಿಶ್ವಕಪ್ ನಲ್ಲಿ ಗೆಲ್ಲುವಲ್ಲಿ ಇಂಜಮಮ್ ಉಲ್ ಹಕ್ ಅವರು ಪ್ರಮುಖ ಪಾತ್ರ ವಹಿಸಿದ್ದರು. 120 ಟೆಸ್ಟ್ ಹಾಗೂ 378 ಏಕದಿನ ಪಂದ್ಯಗಳನ್ನು ಪಾಕ್ ಪರ ಆಡಿದ್ದರು. 2016ರಿಂದ 2019ರವರೆಗೆ ಇಂಜಿ ಅವರು ಪಾಕ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದರು. 2017ರಲ್ಲಿ ಪಾಕ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಮಣಿಸಿ ಪ್ರಶಸ್ತಿ ಕೂಡ ಗೆದ್ದುಕೊಂಡಿತ್ತು.
2019ರ ನಂತರ ಇಂಜಮಮ್ ಅವರು ಪಾಕ್ ಕ್ರಿಕೆಟ್ ನಿಂದ ದೂರ ಉಳಿದಿದ್ದರು. ಈ ನಡುವೆ, 2016ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ತಂಡದ ಹೆಡ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಪಾಕ್ ಸೇರಿದಂತೆ ವಿಶ್ವ ಕ್ರಿಕೆಟ್ ನಲ್ಲಿ ಇಂಜಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವೂ ಇದೆ. ಇಂಜಿ ಅದಷ್ಟು ಬೇಗ ಗುಣಮುಖರಾಗಲಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd