ಐಪಿಎಲ್ 2020 ಟೂರ್ನಿ – ಮೀರತ್ ನಲ್ಲಿ ಬ್ಯಾಟ್ ಶಾಪಿಂಗ್ ಮಾಡಿರುವ ಪಂತ್ ಮತ್ತು ರೈನಾ
ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ ಮತ್ತು ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಜೊತೆಯಾಗಿ ಅಭ್ಯಾಸ ನಡೆಸುತ್ತಿರುವುದು ಗೊತ್ತೇ ಇದೆ. ಗಾಝಿಯಾಬಾದ್ ನಲ್ಲಿ ರೈನಾ ಮತ್ತು ಪಂತ್ ಜೊತೆಯಾಗಿ ಬ್ಯಾಟಿಂಗ್ ತಾಲೀಮು ನಡೆಸಿರುವ ವಿಡಿಯೋವನ್ನು ಸುರೇಶ್ ರೈನಾ ಹಾಕಿಕೊಂಡಿದ್ದರು. ಕೋವಿಡ್ 19, ಲಾಕ್ ಡೌನ್‍ನಿಂದಾಗಿ ಮನೆಯಲ್ಲಿದ್ದ ರೈನಾ ಮತ್ತು ಪಂತ್ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಸೆಪ್ಟಂಬರ್ 19ರಿಂದ ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುಲಿದೆ. ಹೀಗಾಗಿ ರೈನಾ ಮತ್ತು ರಿಷಬ್ ಪಂತ್ ಐಪಿಎಲ್‍ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ರೆ, ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡುತ್ತಾರೆ. ಮುಂದಿನ ತಿಂಗಳು ಫ್ರಾಂಚೈಸಿಗಳು ಯುಎಇಗೆ ಪ್ರಯಾಣ ಬೆಳೆಸಲಿವೆ.
ಹೀಗಾಗಿ ಸುರೇಶ್ ರೈನಾ ಮತ್ತು ರಿಷಬ್ ಪಂತ್ ಐಪಿಎಲ್‍ಗಾಗಿಯೇ ಹೊಸ ಬ್ಯಾಟ್‍ಗಳನ್ನು ಖರೀದಿ ಮಾಡಿದ್ದಾರೆ. ಮೀರತ್ ನಲ್ಲಿರುವ ಎಸ್‍ಜಿ ಕ್ರಿಕೆಟ್ ಬ್ಯಾಟ್ ಫ್ಯಾಕ್ಟರಿಗೆ ಪಂತ್ ಮತ್ತು ರೈನಾ ಭೇಟಿ ಮಾಡಿ ತಮಗೆ ಬೇಕಾಗಿರುವಂತಹ ಬ್ಯಾಟ್‍ಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ತಮಗೆ ಬೇಕಾದ ರೀತಿಯಲ್ಲಿ ಶೇಪ್ ಕೂಡ ಮಾಡಿಸಿಕೊಂಡಿದ್ದಾರೆ.
ಮೀರತ್ ನಲ್ಲಿರು ಎಸ್‍ಜಿ ಬ್ಯಾಟ್ ಫ್ಯಾಕ್ಟರಿಗೆ ಹೋಗಿ ಬ್ಯಾಟ್ ಸೆಲೆಕ್ಟ್ ಮಾಡಿಕೊಂಡು ಆ ನಂತರ ತಮಗೆ ಬೇಕಾದ ರೀತಿಯಲ್ಲಿ ಶೇಪ್ ಮಾಡಿಸಿಕೊಂಡು ಖರೀದಿ ಮಾಡಿರುವ ವಿಡಿಯೋವನ್ನು ಸುರೇಶ್ ರೈನಾ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಮೈದಾನದಲ್ಲಿ ಕಾಣಿಸಿಕೊಳ್ಳುವುದಕ್ಕೆ ಉತ್ಸುಕನಾಗಿದ್ದೇನೆ. ನಾನು ಇನ್ನೂ ಹೆಚ್ಚು ಸಮಯ ಕಾಯಲು ಸಿದ್ಧನಿಲ್ಲ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಕಾತರದಿಂದ ಕಾಯುತ್ತಿದ್ದೇನೆ. ಸಿಎಸ್‍ಕೆ ಕುಟುಂಬವನ್ನು ಸೇರಿಕೊಳ್ಳಲು
ಎದುರುನೋಡುತ್ತಿದ್ದೇನೆ ಎಂದು ಸುರೇಶ್ ರೈನಾ ಬರೆದುಕೊಂಡಿದ್ದಾರೆ.
ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿದ ಬಳಿಕ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ತೀರ್ಮಾನವಾಗಿದೆ. ಇನ್ನೊಂದು ವಾರದಲ್ಲಿ 13ನೇ ಐಪಿಎಲ್ ಟೂರ್ನಿಯ ಸಂಪೂರ್ಣ ಚಿತ್ರಣ ಸಿಗಲಿದೆ. ಸದ್ಯದ ವೇಳಾಪಟ್ಟಿಯ ಪ್ರಕಾರ ಸೆಪ್ಟಂಬರ್ 19ರಿಂದ ನವೆಂಬರ್ 8ರವರೆಗೆ ನಡೆಯಲಿದೆ.








